ಕ್ರೀಡೆ

ಚಿನ್ನ ಗೆದ್ದ ಹಿಮಾ ದಾಸ್ ಬಗ್ಗೆ ಗೂಗಲ್‌ನಲ್ಲಿ ಅತೀ ಹೆಚ್ಚು ಸರ್ಚ್ ಆಗಿದ್ದೇನು ಗೊತ್ತೇ..?

Pinterest LinkedIn Tumblr

ಫಿನ್ ಲ್ಯಾಂಡ್ ನಲ್ಲಿ ನಡೆದ ವಿಶ್ವ ಅಂಡರ್ 20 ಕ್ರೀಡಾಕೂಟದ ಮಹಿಳೆಯರ 400 ಮೀಟರ್ ಓಟದಲ್ಲಿ ಚಿನ್ನ ಗೆದ್ದು ಇತಿಹಾಸ ನಿರ್ಮಿಸಿದ್ದ ಭಾರತದ ಹಿಮಾ ದಾಸ್ ಯಾವ ಜಾತಿ ಎಂಬ ಬಗ್ಗೆ ಗೂಗಲ್ ನಲ್ಲಿ ಅತೀ ಹೆಚ್ಚು ಸರ್ಚ್ ಆಗುತ್ತಿದೆ.

ಹಿಮಾ ದಾಸ್ ಭಾರತೀಯಳು ಎಂಬ ಅಭಿಮಾನ ಬದಲಿಗೆ ಅವಳು ಯಾವ ಜಾತಿ ಎಂಬುದರ ಬಗ್ಗೆ ಜನರು ಸರ್ಚ್ ಮಾಡುತ್ತಿದ್ದಾರೆ.

ಹಿಮಾ ದಾಸ್ ಬಗ್ಗೆ ಹುಡುಕಲು ಹೊರಟರೆ ನಮ್ಮ ಮುಂದೆ ಗೂಗಲ್ ಮೊದಲು ತೋರಿಸುವುದು ಹಿಮಾ ದಾಸ್ ಜಾತಿ. ಅದರಲ್ಲೂ ಕೇರಳ, ಕರ್ನಾಟಕ ಹರಿಯಾಣ, ಅಸ್ಸಾಂ ಹಾಗೂ ಬೆಂಗಾಲ್ ನಲ್ಲಿ ಅತೀ ಹೆಚ್ಚು ಜನ ಹಿಮಾ ದಾಸ್ ಳ ಜಾತಿಯ ಬಗ್ಗೆ ತಲೆಕೆಡಿಸಿಕೊಂಡಿದ್ದಾರೆ.

ಈ ಹಿಂದೆ ರಿಯೋ ಒಲಿಂಪಿಕ್ಸ್ ನಲ್ಲಿ ಪದಕ ಗೆದ್ದಿದ್ದ ಸಾಕ್ಷಿ ಮಲಿಕ್ ಹಾಗೂ ಪಿವಿ ಸಿಂಧು ಅವರ ಜಾತಿಯನ್ನು ಭಾರತೀಯರು ಹುಡುಕಿದ್ದರು. ಇದಗೀ ಹಿಮಾ ದಾಸ್ ಸರದಿ.

Comments are closed.