ರಾಷ್ಟ್ರೀಯ

ಕೋರ್ಟ್‌ ಒಳಗೆ ತಂಬಾಕು ಜಗಿದ ಪೊಲೀಸ್‌ ನನ್ನು ತರಾಟೆಗೆ ತೆಗೆದುಕೊಂಡ ಜಡ್ಜ್‌!

Pinterest LinkedIn Tumblr


ಅಹಮದ್‌ನಗರ: ಕೋರ್ಟ್‌ ಹಾಲ್‌ನಲ್ಲಿ ಪೊಲೀಸ್‌ ಮುಖ್ಯ ಪೇದೆ ತಂಬಾಕುಯುಕ್ತ ಪಾನ್‌ ಜಗಿದುದಕ್ಕೆ ನ್ಯಾಯಾಧೀಶರು ಕೋರ್ಟ್‌ನ ಗೋಡೆ ಸ್ವಚ್ಛಗೊಳಿಸುವ ಶಿಕ್ಷೆ ನೀಡಿದ್ದಾರೆ.

ಆರೋಪಿಯೋರ್ವನನ್ನು ಕೋರ್ಟ್‌ಗೆ ಹಾಜರುಪಡಿಸುವ ವೇಳೆ ಪೊಲೀಸ್‌ ಮುಖ್ಯೇದೆ ಬಾಬನ್‌ ಸಾಲ್ವ್‌ ತಂಬಾಕು ಜಗಿಯುತ್ತಿದ್ದ. ಇದನ್ನು ಗಮನಿಸಿದ ನ್ಯಾಯಮೂರ್ತಿ ಎ.ಎಸ್‌. ನವಂದರ್‌, ಬಾಯಲ್ಲಿರುವುದೇನು ಎಂದು ಪ್ರಶ್ನಿಸಿದ್ದಾರೆ.

ಇದು ತಂಬಾಕು ಅಲ್ಲ, ಸುಪಾರಿ ಎಂದು ನ್ಯಾಯಾಧೀಶರ ಎದುರು ಸುಳ್ಳು ಹೇಳಿದ್ದಾರೆ. ಅನುಮಾನಗೊಂಡ ನ್ಯಾಯಾಧೀಶರು, ಬಾಬನ್‌ ಹತ್ತಿರವಿದ್ದ ಸಹ ಉದ್ಯೋಗಿಗಳ ಬಳಿಕ ಪರಿಶೀಲಿಸುವಂತೆ ತಿಳಿಸಿದ್ದಾರೆ. ಈ ವೇಳೆ ಬಾಬನ್‌ ಜಗಿಯುತ್ತಿರುವುದು ತಂಬಾಕು ಎಂದು ಖಚಿತವಾಗಿದೆ.

ಬಾಬನ್ ಅನ್ನು ತರಾಟೆಗೆ ತೆಗೆದುಕೊಂಡ ನ್ಯಾಯಾಧೀಶ ಎ.ಎಸ್‌. ನವಂದರ್‌, ಕೋರ್ಟ್‌ ಆವರಣದಲ್ಲಿ ತಂಬಾಕು ಜಗಿಯುವುದು ತಪ್ಪು. ಶಿಕ್ಷೆಯಾಗಿ ನ್ಯಾಯಾಲದ ಗೋಡೆ ಸ್ವಚ್ಛಗೊಳಿಸುವಂತೆ ಆದೇಶಿಸಿದ್ದಾರೆ. ಅಷ್ಟು ಮಾತ್ರ ಅಲ್ಲ, ಕೋರ್ಟ್‌ ಹಾಲ್‌ನಲ್ಲಿ ತಂಬಾಕು ತಿಂದು ಉಗುಳಿದ ಕಲೆಗಳಿವೆಯೇ? ಬೇರೆ ಯಾರಾದರೂ ತಂಬಾಕು ಜಗಿಯುತ್ತಿರುವರೇ ಪರಿಶೀಲಿಸಿ ಎಂದು ಪೊಲೀಸರಿಗೆ ತಿಳಿಸಿದ್ದಾರೆ.

Comments are closed.