ರಾಷ್ಟ್ರೀಯ

ಚೆನ್ನೈ ವ್ಯಾಪಾರಿಯ ವಿನೂತನ ಶೈಲಿಯ ಹಸಿರು ಕ್ರಾಂತಿ

Pinterest LinkedIn Tumblr


ಮಧುರೈ: ಈತನ ಹೆಸರು ಸುರೇಶ್ ಕುಮಾರ್. ಪರಿಸರದ ಬಗ್ಗೆ ಈತನಿಗಿರುವ ಪ್ರೀತಿ ಕಂಡರೆ ಅಚ್ಚರಿಯಾಗುತ್ತದೆ. ಶಿವಗಂಗಾ ಜಿಲ್ಲೆಯ ಕೀಲಾಡಿಯ ಸುರೇಶ್ ಕುಮಾರ್, ವಿವಿಧ ವೃಕ್ಷಗಳ ಬೀಜಗಳನ್ನು ಸಂಗ್ರಹಿಸಿ, ಹೋದ ಕಡೆಯಲ್ಲೆಲ್ಲ ಅವುಗಳನ್ನು ಬಿತ್ತುತ್ತಾ ಹೋಗುತ್ತಾರೆ.

ಕಳೆದ 14 ವರ್ಷಗಳಿಂದ ಸುರೇಶ್ ಕುಮಾರ್ ಮಧುರೈನಲ್ಲಿ ಬ್ರೆಡ್, ಬನ್ ಮತ್ತು ಚಾಕಲೇಟ್ ಮಾರಾಟ ಮಾಡುತ್ತಾರೆ. ಶಿವಗಂಗೆಯಿಂದ ಮಧುರೈಗೆ 150 ಕಿ.ಮೀ. ದೂರವಿದೆ. ಹೀಗೆ ಹೋಗುವ ದಾರಿಯಲ್ಲಿ ಸುರೇಶ್ ವಿವಿಧ ಜಾತಿಯ ಮರಗಳ ಬೀಜವನ್ನು ಬಿತ್ತುತ್ತಾ ಸಾಗುತ್ತಾರೆ.

ಹೀಗೆ ಕೆಲವರ್ಷಗಳ ಹಿಂದೆ ನಟ ವಿವೇಕ್ ಅವರು ಮಾಜಿ ರಾಷ್ಟ್ರಪತಿ ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಅವರ ನಿರ್ದೇಶನದಂತೆ ಹಲವು ಲಕ್ಷ ಗಿಡ ನೆಟ್ಟಿದ್ದರು. ಈ ಬಗ್ಗೆ ಕೇಳಿ ತಿಳಿದುಕೊಂಡ ಸುರೇಶ್, ವಿವೇಕ್ ಅವರಿಂದ ಪ್ರಭಾವಿತಗೊಂಡು ಸಮಾಜಕ್ಕಾಗಿ ಏನಾದರೂ ಮಾಡಬೇಕು ಎಂದು ಯೋಚಿಸಿದ್ದರು. ಅದರಂತೆ ನಿತ್ಯವೂ ಅವರು ವಿವಿಧ ಕಡೆ ಗಿಡಗಳ ಬೀಜ ಬಿತ್ತುತ್ತಾ, ಅದಕ್ಕೆ ಸೂಕ್ತ ಪೋಷಣೆ ಮಾಡಿ ಹೋಗುತ್ತಾರೆ.

ಅಪರೂಪದ ಮತ್ತು ಹೆಚ್ಚು ಉಪಕಾರಿಯಾಗುವ ಮರಗಳ ಬೀಜವನ್ನು ಆಯ್ದು ತರುವ ಸುರೇಶ್, ಕೆಲವೊಮ್ಮೆ ಬೀಜ ಸಸಿಯಾಗದಿದ್ದರೆ ಮತ್ತು ಜನರು ಏನಾದರೂ ಟೀಕಿಸಿದರೂ ತಮ್ಮ ಪ್ರಯತ್ನ ಕೈಬಿಡದೆ ಪರಿಸರ ಕಾಳಜಿ ಮುಂದುವರಿಸಿದ್ದಾರೆ.

Comments are closed.