ರಾಷ್ಟ್ರೀಯ

ಮಕ್ಕಳ ಕಳ್ಳಿ ಎಂದು ಬಿಸ್ಕತ್‌ ಹಿಡಿದು ನಿಂತಿದ್ದವಳ ಮೇಲೆ ಹಲ್ಲೆ!

Pinterest LinkedIn Tumblr


ಮಧುರೈ: ಕೈಯಲ್ಲಿ ಬಿಸ್ಕತ್‌ ಹಿಡಿದು ಹೋಗುತ್ತಿದ್ದ ಮಹಿಳೆಯನ್ನು ಮಕ್ಕಳ ಕಳ್ಳಿ ಎಂದು ತಿಳಿದು ಕಂಬಕ್ಕೆ ಕಟ್ಟಿ ಹಲ್ಲೆ ನಡೆಸಿದ ಘಟನೆ ಮಧುರೈನ ಮೆಲೂರ್‌ನಲ್ಲಿ ನಡೆದಿದೆ.

ಕೈಯಲ್ಲಿ ಬಿಸ್ಕತ್‌ಗಳನ್ನು ಹಿಡಿದು ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಮಹಿಳೆಯನ್ನು ಸ್ಥಳೀಯರು ಪ್ರಶ್ನಿಸಿದ್ದಾರೆ. ಈ ವೇಳೆ ಸರಿಯಾಗಿ ಉತ್ತರ ಹೇಳದ ಹಿನ್ನೆಲೆಯಲ್ಲಿ ಆಕೆಯನ್ನು ಕಂಬಕ್ಕೆ ಕಟ್ಟಿ ಹಲ್ಲೆ ನಡೆಸಿದ್ದಾರೆ.

ಘಟನೆ ತಿಳಿದು ದೌಡಾಯಿಸಿದ ಪೊಲೀಸರು, ಪರಿಸ್ಥಿತಿ ತಿಳಿಗೊಳಿಸಿ, ವಿಚಾರಿಸಿದಾಗ, ಮಹಿಳೆ ಮಾನಸಿಕ ಅಸ್ವಸ್ಥೆ ಎಂದು ತಿಳಿದು ಬಂದಿದೆ.

ಹಲ್ಲೆಯಿಂದ ಕೈ, ಮುಖದ ಭಾಗಕ್ಕೆ ಗಾಯಗಳಾಗಿರುವ ಮಹಿಳೆ ಮೇಲೂರು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಮಾನಸಿಕ ಅಸ್ವಸ್ಥೆ ಆರೈಕೆ ಕೇಂದ್ರಕ್ಕೆ ಬಿಡಲಾಗಿದೆ. ಮಹಿಳೆಯ ವಿಳಾಸ ಇತ್ಯಾದಿಗಳ ಬಗ್ಗೆ ಮಾಹಿತಿ ಸಿಕ್ಕಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಯಾರೊಬ್ಬರ ಮೇಲೂ ಕೇಸು ದಾಖಲಿಸಲಾಗಿಲ್ಲ. ಮೇಲೂರು ಭಾಗದಲ್ಲಿ ಇದು 2ನೇ ಪ್ರಕರಣವಾಗಿದ್ದು, ಮಕ್ಕಳ ಕಳ್ಳರ ಬಗ್ಗೆ ಅನಗತ್ಯ ಗೊಂದಲಗಳು ಉಂಟಾಗುತ್ತಿದೆ. ಇತ್ತೀಚೆಗೆ ವಿರುಧುನಗರದಲ್ಲಿ 2-3 ಪುರುಷ ಗುಂಪನ್ನು ತಡೆದು, ಗ್ರಾಮಸ್ಥರು ಪ್ರಶ್ನಿಸಿದ್ದರು ಎಂದು ಗೊತ್ತಾಗಿದೆ.

ಸಾಮಾಜಿಕ ತಾಣಗಳಲ್ಲಿ ಮಕ್ಕಳ ಕಳ್ಳರ ಬಗ್ಗೆ ಹಬ್ಬುತ್ತಿರುವ ಸುಳ್ಳು ಸಂದೇಶಗಳಿಂದ ಹಳ್ಳಿಗಳಿಗೆ ಬರುವ ಹೊಸ ಮುಖಗಳ ಮೇಲೆ ಗ್ರಾಮಸ್ಥರೇ ನಿಗಾ ಇರಿಸಲು ಆರಂಭಿಸಿದ್ದಾರೆ. ಇದು ಅನೇಕ ಅವಘಡಗಳಿಗೆ ಕಾರಣವಾಗುತ್ತಿದೆ.

Comments are closed.