ರಾಷ್ಟ್ರೀಯ

ಮದುವೆ ಸಮಾರಂಭಕ್ಕೆಂದು ಕರೆದುಕೊಂಡು ಹೋಗಿ ಅನೈಸರ್ಗಿಕ ಸಲಿಂಗ ಕಾಮಕ್ಕೆ ಹುಡುಗನ ಬಳಕೆ: ಆರೋಪಿ ಸೆರೆ

Pinterest LinkedIn Tumblr

ಬಲ್ಲಿಯಾ, ಉತ್ತರ ಪ್ರದೇಶ : ಅನೈಸರ್ಗಿಕ ಸಲಿಂಗ ಕಾಮಕ್ಕೆ ಹದಿ ಹರೆಯದ ಹುಡುಗನನ್ನು ಬಳಸಿಕೊಂಡದ್ದಕ್ಕಾಗಿ ಪೊಲೀಸರು ಇಲ್ಲಿನ ಬಾನ್ಸ್‌ದೀಹ್‌ ಪ್ರದೇಶದ ಆರೋಪಿಯನ್ನು ಬಂಧಿಸಿದ್ದಾರೆ.

ಆರೋಪಿ ರಾಮ ನಾರಾಯಣ ಎಂಬಾನು ತನ್ನ ನೆರೆಮನೆಯ 17 ವರ್ಷ ಪ್ರಾಯದ ಹುಡುಗನನ್ನು ಜು.9ರಂದು ಮದುವೆ ಸಮಾರಂಭಕ್ಕೆಂದು ತನ್ನ ಜತೆಗೆ ಕರೆದೊಯ್ದಿದ್ದ. ಅಲ್ಲಿ ಆತ ಹುಡುಗನನ್ನು ತನ್ನ ಅನೈಸರ್ಗಿಕ ಸಲಿಂಗ ಕಾಮ ತೃಷೆಗೆ ಅಮಾನುಷವಾಗಿ ಬಳಸಿಕೊಂಡ ಎಂದು ಪೊಲೀಸರು ಹೇಳಿದ್ದಾರೆ.

ಸಲಿಂಗ ಕಾಮಕ್ಕೆ ಬಲವಂತದಿಂದ ಗುರಿಯಾದ ಹುಡುಗನ ಸಹೋದರನು ಈ ಬಗ್ಗೆ ಪೊಲೀಸರಿಗೆ ನೀಡಿದುದನ್ನು ಅನುಸರಿಸಿ ಅವರು ಆರೋಪಿಯನ್ನು ಬಂಧಿಸಿ ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Comments are closed.