ರಾಷ್ಟ್ರೀಯ

ದಲಿತರ ಮನೆಯಲ್ಲಿ ಲಾಲು ಪುತ್ರನಿಂದ ಓಪನ್‌ ಬಾತ್‌!

Pinterest LinkedIn Tumblr

ಪಾಟ್ನಾ: ರಾಜಕಾರಣಿಗಳು ದಲಿತರ ಮನೆಗಳಿಗೆ ತೆರಳಿ ಊಟ, ತಿಂಡಿ ನಿದ್ರೆ ಮಾಡುವುದು ಸಾಮಾನ್ಯ. ಆದರೆ ಆರ್‌ಜೆಡಿ ವರಿಷ್ಠ ಲಾಲು ಪ್ರಸಾದ್‌ ಯಾದವ್‌ ಪುತ್ರ, ಮಾಜಿ ಆರೋಗ್ಯ ಸಚಿವ ತೇಜ್‌ ಪ್ರತಾಪ್‌ ಯಾದವ್‌ ಅವರು ಸೋಮವಾರ ದಲಿತರ ಮನೆಯಲ್ಲಿ ಸ್ನಾನ ಮಾಡಿ ಸುದ್ದಿಯಾಗಿದ್ದಾರೆ.

ತೇಜ್‌ ಪ್ರತಾಪ್‌ ಪ್ರತಿನಿಧಿಸುತ್ತಿರುವ ಮಹುವಾದ ಕರ್‌ಹಾತಿಯಾ ಪಂಚಾಯತ್‌ ಪ್ರದೇಶದ ದಲಿತರ ಮನೆಗೆ ತೆರಳಿ ಮನೆ ಎದುರು ಇರುವ ಕೊಳವೆಬಾವಿಯಿಂದ ನೀರೆತ್ತಿ ನೂರಾರು ಜನರ ಎದುರೇ ಸ್ನಾನ ಮಾಡಿದರು.

ಟ್ವೀಟರ್‌ನಲ್ಲಿ ಸ್ನಾನ ಮಾಡಿರುವ ಭಾವಚಿತ್ರಗಳನ್ನು ಪ್ರಕಟಿಸಿರುವ ತೇಜ್‌ ಪ್ರತಾಪ್‌ ವಿಧಾನಸಭಾ ಕ್ಷೇತ್ರದಲ್ಲಿ ದಿನವಿಡಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾದೆ. ದಣಿದಿದ್ದ ನಾನು ತಣ್ಣೀರಿನಲ್ಲಿ ಸ್ನಾನ ಮಾಡಿದೆ, ಇದೊಂದು ಸಿಹಿಯಾದ ಅನುಭವ ಎಂದು ಹೇಳಿಕೊಂಡಿದ್ದಾರೆ.

Comments are closed.