ರಾಷ್ಟ್ರೀಯ

ಧಾರ್ಮಿಕ ಆಚರಣೆ ಹೆಸರಲ್ಲಿ ಸ್ತ್ರೀಯ ದೈಹಿಕ ಘನತೆಗೆ ಚ್ಯುತಿ ಏಕೆ?: ಸುಪ್ರೀಂಕೋರ್ಟ್

Pinterest LinkedIn Tumblr


ಹೊಸದಿಲ್ಲಿ: ಯೋನಿ ಛೇದನ ಅಥವಾ ಸುನತಿಯಂಥ ಧಾರ್ಮಿಕ ಆಚರಣೆಗಳ ವಿರುದ್ಧ ಕಿಡಿಕಾರಿರುವ ಸುಪ್ರೀಂಕೋರ್ಟ್, ಧಾರ್ಮಿಕ ಆಚರಣೆಗಳ ಹೆಸರಲ್ಲಿ ಮಹಿಳೆಯರ ದೈಹಿಕ ಘನತೆಗೆ ಚ್ಯುತಿ ತರುವುದೇಕೆ? ಎಂದು ಪ್ರಶ್ನಿಸಿದೆ.

ಯೋನಿ ಛೇದನ ಅಥವಾ ಸುನತಿಯಂಥ ಕೆಲ ಧಾರ್ಮಿಕ ಆಚರಣೆಗಳ ಸಂಪೂರ್ಣ ನಿಷೇಧಕ್ಕೆ ಕೇಂದ್ರ ಬೆಂಬಲ ಸೂಚಿಸಿದ್ದು, ಈ ಕುರಿತು ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ.

18 ವರ್ಷದ ಕೆಳಗಿನ ಬಾಲಕಿಯ ಜನನಾಂಗವನ್ನು ಸ್ಪರ್ಶಿಸುವಂತಹ ಇಂತ ಆಚರಣೆಗಳು ಪೋಕ್ಸೋ ಕಾಯಿದೆ ಅಡಿಯಲ್ಲಿ ಅಪರಾಧವಾಗುತ್ತವೆ, ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಮತ್ತು ನ್ಯಾಯಮೂರ್ತಿಗಳಾದ ಎ ಎಮ್ ಖಾನಿವಾಲ್ಕರ್ ಮತ್ತು ಡಿ ವೈ ಚಂದ್ರಚೂಡ್ ಅವರನ್ನೊಳಗೊಂಡಿದ್ದ ಪೀಠ ಹೇಳಿದೆ.

ಯೋನಿ ಛೇದನಗೊಳಿಸುವಿಕೆ ಭಾರತೀಯ ದಂಡ ಸಂಹಿತೆ ಮತ್ತು ಪಿಓಸಿಎಸ್ಒ ಕಾಯಿದೆಯಡಿ ಅಪರಾಧವಾಗುತ್ತದೆ, ಎಂದು ಕೇಂದ್ರ ಏಪ್ರಿಲ್ 20 ರಂದು ಹೇಳಿತ್ತು.

ಯೋನಿ ಛೇದನ ಅಥವಾ ಸುನತಿ ಆಚರಣೆ ವಿರುದ್ಧ ಸುನೀತಾ ತಿವಾರಿ ಎಂಬುವವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಪ್ರಕರಣದ ವಿಸ್ತ್ರತ ವಿಚಾರಣೆ ಜುಲೈ 16 ರಂದು ನಡೆಯಲಿದೆ.

Comments are closed.