ರಾಷ್ಟ್ರೀಯ

ಸೊಸೆ ಕಿರುಕುಳಕ್ಕೆ ಗುಂಡು ಹಾರಿಸಿಕೊಂಡು ಮಾವ ಆತ್ಮಹತ್ಯೆ

Pinterest LinkedIn Tumblr


ಬರೇಲಿ: ಸೊಸೆಯ ಕಿರುಕುಳಕ್ಕೆ ಬೇಸತ್ತು 54 ವರ್ಷದ ವ್ಯಕ್ತಿಯೊಬ್ಬ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರ ಪ್ರದೇಶದಲ್ಲಿ ಭಾನುವಾರ ಮುಂಜಾನೆ ನಡೆದಿದೆ.

ಮೃತ ಜೈ ವೀರ್ ಸಿಂಗ್ ಖಿನ್ನತೆಯಿಂದ ಬಳಲುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಬಹೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ದಂಡಿಯಾ ನಾಗ್ಲಾ ಗ್ರಾಮದಲ್ಲಿ ಈ ಘಟನೆ ನಡೆದಿದ್ದು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಮೃತನ ಸೊಸೆಯ ಮೇಲೆ ಪ್ರಕರಣ ದಾಖಲಾಗಿದೆ.

ಪತ್ನಿ ಮತ್ತು ತಂದೆಯ ನಡುವೆ ಸದಾ ಜಗಳವಾಗುತ್ತಿತ್ತು. ತಂದೆಯ ಜತೆ ದುರ್ವರ್ತನೆ ತೋರುತ್ತಿದ್ದ ಪತ್ನಿ ಆತನಿಗೆ ಅಡುಗೆ ಮಾಡಿ ಬಡಿಸಲು ಆಕೆ ನಿರಾಕರಿಸುತ್ತಿದ್ದರು. ಶನಿವಾರ ಸಂಜೆ ಕೂಡ ಆತನ ಜತೆ ಜಗಳವಾಡಿದ್ದ ಪತ್ನಿ ರಾತ್ರಿ ಊಟ ಬಡಿಸಿರಲಿಲ್ಲ. ಹೀಗಾಗಿ ಆತ ಹಸಿದುಕೊಂಡು ಮಲಗಿದ್ದ, ಎಂದು ಮೃತನ ಪುತ್ರ ವಿಚಾರಣೆ ವೇಳೆ ಹೇಳಿದ್ದಾನೆ, ಎಂದು ಬರೇಹಿ ಪೊಲೀಸ್ ಠಾಣಾಧಿಕಾರಿ ರಾಜ್ವೀರ್ ಸಿಂಗ್ ತಿಳಿಸಿದ್ದಾರೆ.

ಸೊಸೆಯ ಕಿರುಕುಳದಿಂದ ನೊಂದ ಸಿಂಗ್ ನಾಡ ಬಂದೂಕಿನಿಂದ ಗುಂಡಿಕ್ಕಿಕೊಂಡಿದ್ದು, ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಮಾವನ ಸಾವಿನ ಬಳಿಕ ಪರಾರಿಯಾಗಿರುವ ಸೊಸೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಮೃತರ ಪುತ್ರ ಹಿತೇಶ್ ಕಳೆದ 5 ವರ್ಷದ ಹಿಂದೆ ಬಿಹಾರಿಪುರ ಗ್ರಾಮದ ನಿವಾಸಿಯಾದ ಅನುಜಾಳನ್ನು ಮದುವೆಯಾಗಿದ್ದ ಎಂದು ತಿಳಿದುಬಂದಿದೆ.

Comments are closed.