ರಾಷ್ಟ್ರೀಯ

ವಿಶ್ವದ ಅದ್ಭುತಗಳಲ್ಲಿ ತಾಜ್ ಮಹಲ್ ಒಂದು.. ನಮಾಜ್ ಮಾಡಲು ಬೇರೆ ಮಸೀದಿಗಳಿವೆ: ಸುಪ್ರೀಂ ಕೋರ್ಟ್

Pinterest LinkedIn Tumblr

ನವದೆಹಲಿ: ವಿಶ್ವದ ಅದ್ಭುತಗಳಲ್ಲಿ ತಾಜ್ ಮಹಲ್ ಕೂಡ ಒಂದಾಗಿದ್ದು ಭಾರತ ಸ್ಥಾನ ಹೆಚ್ಚಿಸಿರುವ ಅದನ್ನು ರಕ್ಷಿಸಬೇಕಿದೆ. ನಮಾಜ್ ಮಾಡಲು ಬೇರೆ ಮಸೀದಿಗಳಿದ್ದು ಪಾರಂಪರಿಕ ತಾಣ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ತಾಜ್ ಮಹಲ್ ನಲ್ಲಿ ಹೊರಗಿನವರು ಶುಕ್ರವಾರ ಪ್ರಾರ್ಥನೆ ಸಲ್ಲಿಸಲು ಆಗ್ರಾ ಆಡಳಿತ ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ನಲ್ಲಿ ಅರ್ಜಿಯೊಂದು ಸಲ್ಲಿಸಲಾಗಿತ್ತು. ಈ ಅರ್ಜಿ ವಿಚಾರಣೆ ಬಳಿಕ ನ್ಯಾಯಾಲಯ ನಮಾಜ್ ಮಾಡಲು ಹಲವು ಮಸೀದಿಗಳಿವೆ. ಜನರು ಅಲ್ಲಿಯೇ ಹೋಗಿ ಪ್ರಾರ್ಥನೆ ಮಾಡಲಿ. ಎಂದು ಹೇಳಿದೆ.

ತಾಜ್ ಮಹಲ್ ಸಂರಕ್ಷಣೆ ಮಾಡುವುದು ಎಲ್ಲರ ಜವಾಬ್ದಾರಿ ಎಂದು ಹೇಳಿದೆ. ಜನವರಿ 24 ರಂದು ಆದೇಶ ನೀಡಿದ್ದ ತಾಜ್ ಮಹಲ್ ಆಡಳಿತ ಸ್ಥಳೀಯರಿಗೆ ಮಾತ್ರ ನಮಾಜ್ ಮಾಡಲು ಅವಕಾಶ ಎಂದು ಹೇಳಿತ್ತು. ಅಲ್ಲದೇ ಗುರುತಿನ ಚೀಟಿಯನ್ನು ಹೊಂದಿರಬೇಕು ಎಂದು ಹೇಳಿತ್ತು. ಆದರೆ ನಿಯಮಗಳು ಕಟ್ಟು ನಿಟ್ಟಾಗಿ ಜಾರಿಯಾಗಿರಲಿಲ್ಲ.

Comments are closed.