ರಾಷ್ಟ್ರೀಯ

ಇದು ರಿಯಲ್ ಹನುಮಂತನ ಫೋಟೋ?: ಫೋಟೋ ಕ್ಲಿಕ್ಕಿಸಿದ ವ್ಯಕ್ತಿ ಸ್ಥಳದಲ್ಲೇ ಸಾವು

Pinterest LinkedIn Tumblr


ನವದೆಹಲಿ: ಮಾನಸ ಸರೋವರ ಯಾತ್ರೆ ಸಂದರ್ಭದಲ್ಲಿ ವ್ಯಕ್ತಿಯೋರ್ವ ನಿಜವಾದ ಹನುಮಂತನ ಫೋಟೋ ಕ್ಲಿಕ್ಕಿಸಿದ್ದಾನೆ ಎನ್ನಲಾಗಿದ್ದು, ಫೋಟೋ ಕ್ಲಿಕ್ಕಿಸಿದ ವ್ಯಕ್ತಿ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ. ಮೂವರು ಗೆಳೆಯರು ಸೇರಿ ಮಾನಸ ಸರೋವರ ಯಾತ್ರೆಗೆ ತೆರಳಿದ್ದರು. ಇದರಲ್ಲಿ ಓರ್ವ ಹನುಮಂತನ ಭಕ್ತನಾಗಿದ್ದು, ಹನುಮಂತನ ಅಸಲಿ ರೂಪ ನೋಡಬೇಕೆಂಬುದು ಆತನ ಆಸೆಯಾಗಿತ್ತು.

ಅದೇ ರೀತಿ ಮಾನಸ ಸರೋವರ ಯಾತ್ರೆ ವೇಳೆ ಈ ವ್ಯಕ್ತಿಗೆ ಅಸಲಿ ಹನುಮಂತನ ದರ್ಶನವಾಗಿದ್ದು, ಆತ ಕೂಡಲೇ ತನ್ನ ಮೊಬೈಲ್ ನಲ್ಲಿ ಫೋಟೋ ಕ್ಲಿಕ್ಕಿಸಿದ್ದಾನೆ. ಆದರೆ ಫೋಟೋ ಕ್ಲಿಕ್ಕಿಸಿದ ಮರುಕ್ಷಣವೇ ಆ ವ್ಯಕ್ತಿ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.

ಮಾನಸ ಸರೋವರ ಯಾತ್ರೆ ಸಂದರ್ಭದಲ್ಲಿ ಅತ್ಯಂತ ವೇಗವಾಗಿ ಹಿಮಾಲಯದತ್ತ ಹೋಗುತ್ತಿದ್ದ ಆಕೃತಿಯೊಂದನ್ನು ಬೆನ್ನತ್ತಿ, ನಂತರ ಗುಹೆಯೊಂದರಲ್ಲಿ ಅವಿತಿದ್ದ ಈ ಮಂಗನ ಫೋಟೋ ತೆಗೆದುಕೊಳ್ಳಲಾಗಿದೆ ಎನ್ನಲಾಗಿದೆ.

ಆದರೆ ಈ ಫೋಟೋ ಕುರಿತ ಸತ್ಯಾಸತ್ಯತೆ ತಿಳಿಯಲು ಫೋಟೋ ಕ್ಲಿಕ್ಕಿಸಿದ ವ್ಯಕ್ತಿ ಸಾವನ್ನಪ್ಪಿರುವುದು ಕಗ್ಗಂಟಾಗಿ ಪರಿಣಮಿಸಿದೆ. ಮೂವರೂ ಯುವಕರು ರಾಮಾಯಣ ಓದುತ್ತಿದ್ದ ಸಂದರ್ಭದಲ್ಲಿ ನಿಜವಾದ ಹನುಮಂತನ ದರ್ಶನವಾಗಿದೆ ಎನ್ನಲಾಗಿದೆ.

Comments are closed.