ರಾಷ್ಟ್ರೀಯ

ಪಶ್ಚಿಮ ಬಂಗಾಲದ ರಾಜಧಾನಿ ಕೋಲ್ಕತದಲ್ಲಿ ಭಾರೀ ಮಳೆಗೆ ಮಹಾನಗರ ಸಂಪೂರ್ಣ ಸ್ಥಗಿತ

Pinterest LinkedIn Tumblr


ಕೋಲ್ಕತ : ಪಶ್ಚಿಮ ಬಂಗಾಲದ ರಾಜಧಾನಿ ಕೋಲ್ಕತದಲ್ಲಿ ತೀವ್ರ ಜಡಿ ಮಳೆ ಆಗುತ್ತಿದ್ದು ಇಡಿಯ ಮಹಾನಗರದ ಸಮಗ್ರ ಚಟುವಟಿಕೆಗಳು ಸ್ಥಗಿತಗೊಂಡಿವೆ. ತಗ್ಗು ಪ್ರದೇಶಗಳೆಲ್ಲ ನೀರಿನಿಂದ ಆವೃತವಾಗಿದೆ. ಅನೇಕ ಪ್ರದೇಶಗಳಲ್ಲಿನ ರಸ್ತೆಗಳಲ್ಲಿ ಮೊಣಕಾಲ ಮಟ್ಟಕ್ಕೆ ನೀರು ತುಂಬಿದೆ.

ಪ್ರಾದೇಶಿಕ ಹವಾಮಾನ ಇಲಾಖೆಯ ಪ್ರಕಾರ ಇನ್ನೂ ಮೂರು ದಿನಗಳ ಕಾಲ ನಗರದಲ್ಲಿ ಭಾರೀ ಮಳೆ ಆಗಲಿದೆ.

ಪೂರ್ವದ ಮೆಟ್ರೋಪಾಲಿಟನ್‌ ಬೈಪಾಸ್‌, ಗಾರ್ಡನ್‌ ರೀಚ್‌, ಬೆಹಾಲಾ, ವಟಗುಂಗೆ, ಖೀದಿರ್‌ಪುರ, ಹೈಡ್‌ ರೋಡ್‌ ಮತ್ತು ಉತಾಲ್‌ದಂಗಾ ನೀರಿನಲ್ಲಿ ಮುಳುಗಿ ಹೋಗಿವೆ.

ಪಶ್ಚಿಮ ಬಂಗಾಲದ ಇತರ ಭಾಗಗಳಲ್ಲಿ, ಮುಖ್ಯವಾಗಿ, ದಕ್ಷಿಣ 24 ಪರಗಣ ಮತ್ತು ಪೂರ್ವ ಮಿಡ್ನಾಪುರ ಜಿಲ್ಲೆಗಳಲ್ಲಿ ಭಾರೀ ಮಳೆ ಆಗುತ್ತಿದೆ.

ಹಲ್ದಿಯಾದಲ್ಲಿ 18 ಸೆ.ಮೀ., ಡೈಮಂಡ್‌ ಹಾರ್ಬರ್‌ನಲ್ಲಿ 17 ಸೆ.ಮೀ., ಆಲಿಪೋರ್‌ಲ್ಲಿ 16 ಸೆ.ಮೀ. ಮಳೆಯಾಗಿರುವುದು ದಾಖಲಾಗಿದೆ.

Comments are closed.