ರಾಷ್ಟ್ರೀಯ

ತೀವ್ರ ಹೃದಯ ಸ್ತಂಭನ: ಸುರಕ್ಷಿತವಾಗಿ ವಿಮಾನ ಲ್ಯಾಂಡ್ ಮಾಡಿದ ಪೈಲಟ್

Pinterest LinkedIn Tumblr


ಕೋಲ್ಕತಾ: ಆಗಸದ ಮಧ್ಯೆ ವಿಮಾನ ಹಾರಾಟ ನಡೆಸುತ್ತಿದ್ದ ವೇಳೆಯೇ ಪೈಲಟ್ ಗೆ ದಿಢೀರ್ ಆಗಿ ತೀವ್ರ ಹೃದಯ ಸ್ತಂಭನಕ್ಕೊಳಗಾಗಿದ್ದರು. ಆದರೆ ಧೈರ್ಯಗೆಡದ ಕ್ಯೂಬಾ ಮೂಲದ ಇಂಡಿಗೋ ವಿಮಾನದ ಪೈಲಟ್ ನೂರಾರು ಪ್ರಯಾಣಿಕರನ್ನು ಸುರಕ್ಷಿತವಾಗಿ ಕೋಲ್ಕತಾದ ನೇತಾಜಿ ಸುಭಾಶ್ಚಂದ್ರ ಬೋಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಮಾಡಿಸಿ ಜೀವ ಉಳಿಸಿದ್ದ ಘಟನೆ ಶನಿವಾರ ಸಂಜೆ ನಡೆದಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.

ವಿಮಾನ ನಿಲ್ದಾಣದ ಅಧಿಕಾರಿಗಳ ಮಾಹಿತಿ ಪ್ರಕಾರ, ಹೃದಯ ಸ್ಥಂಭನಕ್ಕೊಳಗಾಗಿದ್ದ ಪೈಲಟ್ ಸಿಲ್ವಿಯೋ ಡಿಯಾಝ್ ಕೋಸ್ಟಾ(63) ಅವರು ವಿಮಾನವನ್ನು ಕೋಲ್ಕತಾದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಮಾಡಿದ್ದರು. ಇಂಫಾಲದಿಂದ ವಿಮಾನ ಆಗಮಿಸಿತ್ತು.

ಎದೆನೋವು ತೀವ್ರವಾಗಿರುವುದಾಗಿ ಸಹ ಪೈಲಟ್ ಬಳಿ ಸಿಲ್ವಿಯೋ ಹೇಳಿಕೊಂಡಿದ್ದರು. ಅಂತೂ ಕೊನೆಗೆ ಸಹ ಪೈಲಟ್ ಅವರ ನೆರವಿನೊಂದಿಗೆ ವಿಮಾನವನ್ನು ಸಂಜೆ 4.45ಕ್ಕೆ ಸುರಕ್ಷಿತವಾಗಿ ಸಿಲ್ವಿಯೋ ಅವರು ಲ್ಯಾಂಡ್ ಮಾಡಿರುವುದಾಗಿ ವರದಿ ವಿವರಿಸಿದೆ.

ಕೂಡಲೇ ಅವರನ್ನು ವಿಮಾನ ನಿಲ್ದಾಣದೊಳಗಿರುವ ತುರ್ತು ಚಿಕಿತ್ಸಾ ಘಟಕಕ್ಕೆ ಕರೆದೊಯ್ದು ಪರೀಕ್ಷೆ ನಡೆಸಿದ್ದರು. ಬಳಿಕ ವೈದ್ಯರು ಕೂಡಲೇ ಸ್ಥಳೀಯ ಚಾರ್ನೋಕ್ ಆಸ್ಪತ್ರೆಗೆ ದಾಖಲಿಸಲು ಸಲಹೆ ನೀಡಿದ್ದರು

Comments are closed.