ರಾಷ್ಟ್ರೀಯ

ಸಹೋದರನಿಗೆ ಕಿಡ್ನಿ ನೀಡಲು ಜೀವ ತ್ಯಾಗ ಮಾಡಿದ ವಿದ್ಯಾರ್ಥಿ!

Pinterest LinkedIn Tumblr


ವಡೋದರಾ: ಸಹೋದರನ ಪ್ರಾಣ ಉಳಿಸುವ ಉದ್ದೇಶದಿಂದ ವಿದ್ಯಾರ್ಥಿಯೋರ್ವ ಪ್ರಾಣ ತ್ಯಜಿಸಿರುವ ಹೃದಯವಿದ್ರಾವಕ ಘಟನೆ ವಡೋದರಾದಲ್ಲಿ ನಡೆದಿದೆ. ಆದರೆ, ದುರದೃಷ್ಟವಶಾತ್ ಆತನ ಪ್ರಾಣ ತ್ಯಾಗದ ಉದ್ದೇಶ ಮಾತ್ರ ನಿಷ್ಫಲವಾಗಿದೆ.

ವಲ್ಸಾದ್‌ನ ಪಾರ್ಡಿ ಮೂಲದ ನೈತಿಕ್ ಕುಮಾರ್ (19) ಆತ್ಮಹತ್ಯೆಗೆ ಶರಣಾದ ದುರ್ದೈವಿ. ಈತ ವರ್ನಾಮ್‌ನ ಬಾಬರಿಯಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ 2ನೇ ವರ್ಷದ ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಸಹೋದರನಿಗೆ ಕಿಡ್ನಿ ದಾನ ಮಾಡಿ ಪ್ರಾಣ ಉಳಿಸಬೇಕೆಂದು ನೈತಿಕ್ ಕುಮಾರ್ ತನ್ನ ಪ್ರಾಣವನ್ನೇ ತ್ಯಾಗ ಮಾಡುವ ಹುಚ್ಚು ನಿರ್ಧಾರಕ್ಕೆ ಕೈ ಹಾಕಿದ. ತಾನು ತಂಗಿದ್ದ ಹಾಸ್ಟೆಲ್‌ ಕೊಣೆಯಲ್ಲಿ ನೇಣು ಬಿಗಿದುಕೊಂಡಾತ ಆತ್ಮಹತ್ಯೆಗೆ ಶರಣಾದ. ಆದರೆ ಆತನ ಶವ ಪತ್ತೆಯಾದಾಗ ಅದು ಕೊಳೆಯುವ ಸ್ಥಿತಿಯಲ್ಲಿತ್ತು. ಹೀಗಾಗಿ ಆತನ ಬಲಿದಾನವೂ ಕೂಡ ವ್ಯರ್ಥವಾಗಿ ಹೋಯ್ತು.

ತನ್ನ ಈ ದುಡುಕಿನ ನಿರ್ಧಾರಕ್ಕೆ ಕಾರಣವೇನೆಂದಾತ ಡೆತ್ ನೋಟ್‌ನಲ್ಲಿ ಬರೆದಿಟ್ಟಿದ್ದು, ಅಣ್ಣ ಕೆನಿಶ್‌ (24)ನಿಗೆ ಕಿಡ್ನಿ ದಾನ ಮಾಡಲು ಈ ನಿರ್ಧಾರ ತೆಗೆದುಕೊಂಡಿದ್ದೇನೆ. ನನ್ನ ಸಾವಿನ ಬಳಿಕ ಕಿಡ್ನಿಯನ್ನು ಆತನಿಗೆ ಕಸಿ ಮಾಡಿ. ನನ್ನ ಸಾವಿನ ತನಿಖೆ ಮಾಡಬೇಡಿ, ಮುಖ್ಯವಾಗಿ ನನ್ನ ಪೋಷಕರನ್ನು ವಿಚಾರಣೆಗೊಳಪಡಿಸಿ ತೊಂದರೆ ನೀಡಬೇಡಿ ಎಂದು ವಿನಂತಿಸಿಕೊಂಡಿದ್ದಾನೆ. ಅಷ್ಟೇ ಅಲ್ಲ ನನ್ನ ದೇಹದ ಉಳಿದ ಅಂಗಗಳನ್ನು ಅವಶ್ಯಕತೆ ಇದ್ದವರಿಗೆ ದಾನ ಮಾಡಬೇಕೆಂದು ಸಹ ಬರೆದಿದ್ದಾನೆ.

Comments are closed.