ಕರ್ನಾಟಕ

ಪರಮೇಶ್ವರ್‌ ಮತ್ತು ಕುಮಾರಸ್ವಾಮಿಯಿಂದ ಬಜೆಟ್‌ ಪೂರ್ವ ಸಿದ್ಧತಾ ಸಭೆ!

Pinterest LinkedIn Tumblr

ಬೆಂಗಳೂರು : ರಾಜ್ಯದಲ್ಲಿನ ಹೊಸ ಸಮ್ಮಿಶ್ರ ಸರಕಾರಕ್ಕೆ ಹೊಸ ಬಜೆಟ್‌ ಅಗತ್ಯ ಎಂದಿರುವ ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ಅವರ ಮಾತಿಗೆ ಬೆಲೆ ಕೊಟ್ಟು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಗ್ರೀನ್‌ ಸಿಗ್ನಲ್‌ ನೀಡಿದ ಬೆನ್ನಿಗೆ ಬಜೆಟ್‌ ಕುರಿತಾದ ಚಿಂತನ -ಮಂಥನ ತೀವ್ರಗೊಂಡಿದ್ದು ಇಂದು ಸಿಎಂ ಕುಮಾರ ಸ್ವಾಮಿ ಮತ್ತು ಉಪ ಮುಖ್ಯಮಂತ್ರಿ ಡಾ. ಜಿ ಪರಮೇಶ್ವರ್‌ ಅವರು ಬಜೆಟ್‌ ಪೂರ್ವ ಸಿದ್ದತಾ ಸಭೆಯನ್ನು ನಡೆಸಿದರು.

ವಿಶೇಷವೆಂದರೆ ಈ ಪೂರ್ವ ಸಿದ್ಧತಾ ಸಭೆಯನ್ನು ಉಭಯ ನಾಯಕರು ಪ್ರತ್ಯೇಕವಾಗಿ ನಡೆಸಿರುವುದು. ಕುಮಾರಸ್ವಾಮಿ ಅವರು ತಮ್ಮ ಪೂರ್ವ ಸಿದ್ದತಾ ಸಭೆಯನ್ನು ಶಕ್ತಿ ಭವನದಲ್ಲಿ ನಡೆಸಿದರೆ ಉಪ ಮುಖ್ಯಮಂತ್ರಿ ಪರಮೇಶ್ವರ್‌ ಅವರು ವಿಧಾನಸೌಧದಲ್ಲಿ ಸಭೆ ನಡೆಸಿದರು.

ಸಮ್ಮಿಶ್ರ ಸರಕಾರ ಹೊಸ ಬಜೆಟ್‌ನಲ್ಲಿ ಯಾವೆಲ್ಲ ಹೊಸ – ಹಳೇ ಯೋಜನೆಗಳು ಇರಬೇಕು, ಅದರ ಸ್ವರೂಪ ಹೇಗಿರಬೇಕು ಎಂಬಿತ್ಯಾದಿ ವಿಷಯಗಳು ಸಭೆಯಲ್ಲಿ ಚರ್ಚಿತವಾದವು.

ಸಿಎಂ ಕುಮಾರಸ್ವಾಮಿ ಅವರು ಮಹಿಳೆ ಮತ್ತು ಮಕ್ಕಳ ಕಲ್ಯಾಣ, ಕನ್ನಡ ಸಂಸ್ಕೃತಿ ಇಲಾಖೆ, ಪರಿಸರ, ಇಂಧನ, ಜವಳಿ ಇಲಾಖೆಗಳಿಗೆ ಸಂಬಂಧಿಸಿದಂತೆ ಇಲಾಖಾವಾರು ಸಭೆ ನಡೆಸಿದರೆಂದು ವರದಿಗಳು ತಿಳಿಸಿವೆ.

Comments are closed.