ರಾಷ್ಟ್ರೀಯ

ಮಳೆದೇವರನ್ನು ಸಮಾಧಾನಪಡಿಸಲು ಕಪ್ಪೆಗಳ ಮದುವೆ ಮಾಡಿಸಿದ ಸಚಿವೆ!

Pinterest LinkedIn Tumblr


ನವದೆಹಲಿ: ಗ್ರಾಮೀಣಭಾಗದಲ್ಲಿ ಮೂಢನಂಬಿಕೆಗಳಿಂದಾಗಿ ನಾನಾ ಆಚರಣೆಗಳನ್ನು ಮಾಡುವುದು ಸಾಮಾನ್ಯ. ಆದರೆ, ಮಧ್ಯಪ್ರದೇಶದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಲಿತಾ ಯಾದವ್​ ಮಳೆದೇವರನ್ನು ಸಮಾಧಾನಪಡಿಸಲು ಕಪ್ಪೆಗಳ ಮದುವೆ ಮಾಡಿಸಿ ಟೀಕೆಗೊಳಗಾಗಿದ್ದಾರೆ.

ಚತ್ತರ್​ಪುರದ ದೇವಸ್ಥಾನದಲ್ಲಿ ಎರಡು ಕಪ್ಪೆಗಳಿಗೆ ಮದುವೆ ಮಾಡಿಸಿರುವ ಸಚಿವೆ ಲಲಿತಾ ಯಾದವ್​ ಇದೀಗ ಸಾರ್ವಜನಿಕರು ಮತ್ತು ವಿರೋಧಪಕ್ಷಗಳಿಂದ ಟೀಕಿಸಲ್ಪಡುತ್ತಿದ್ದಾರೆ. ದೇವಸ್ಥಾನದ ಆವರಣದಲ್ಲಿ ನೂರಾರು ಜನ ಈ ಕಪ್ಪೆಗಳ ಮದುವೆಗೆ ಸಾಕ್ಷಿಯಾದರು.

ಈ ದೇವಸ್ಥಾನದಲ್ಲಿ ಕಪ್ಪೆಗಳ ಮದುವೆ ಮತ್ತು ಹಬ್ಬದೂಟ ಮಾಡುವುದು ಬಹಳ ಹಳೆಯ ಸಂಪ್ರದಾಯ. ಇದರಿಂದಾಗಿ ಚೆನ್ನಾಗಿ ಮಳೆಯಾಗುತ್ತದೆ ಎಂಬ ನಂಬಿಕೆಯಿದೆ ಎನ್ನುತ್ತಾರೆ ದೇವಸ್ಥಾನದ ಅರ್ಚಕರು. ಆದರೆ, ಸಚಿವರ ಈ ನಡೆಯನ್ನು ವಿರೋಧಿಸಿರುವ ವಿರೋಧಪಕ್ಷದವರು ಸಚಿವರೇ ಮೂಢನಂಬಿಕೆಗಳಿಗೆ ಪ್ರಚೋದನೆ ನೀಡುವುದು ಸರಿಯಲ್ಲ ಎಂದು ಆಕ್ಷೇಪಿಸಿದ್ದಾರೆ.

ಈ ಬಗ್ಗೆ ಸಚಿವೆ ಲಲಿತಾ ಯಾದವ್​ ಪ್ರತಿಕ್ರಿಯಿಸಿದ್ದು, ಇದು ಮೂಢ ಆಚರಣೆಯಲ್ಲ. ಪರಿಸರವನ್ನು ಸಮತೋಲನದಲ್ಲಿ ಇಡಲು ಈ ಕಪ್ಪೆಗಳ ಮದುವೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.

Comments are closed.