ರಾಷ್ಟ್ರೀಯ

ಪೊಲೀಸ್ ಕಚೇರಿಯ ಚಾಲಕನ ಮೇಲೆ ಮಗಳಿಂದ ಹಲ್ಲೆ; ಎಡಿಜಿಪಿ ಹುದ್ದೆಯಿಂದ ಸುದೇಶ್ ಕುಮಾರ್ ವಜಾ

Pinterest LinkedIn Tumblr

ತಿರುವನಂತಪುರಂ: ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರ ಮಗಳು ಕಚೇರಿಯ ಚಾಲಕನ ಮೇಲೆ ಹಲ್ಲೆ ನಡೆಸಿ, ಗಾಯಗೊಳಿಸಿದ್ದ ಆರೋಪದ ಮೇರೆಗೆ ಎಡಿಜಿಪಿ ಸ್ಥಾನದಿಂದ ಸುದೇಶ್ ಕುಮಾರ್ ಅವರನ್ನು ಆ ವಜಾಗೊಳಿಸಲಾಗಿದೆ.

ಪೊಲೀಸ್ ಡ್ರೈವರ್ ಗಾವಸ್ಕರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆತನ ಹೆಂಡತಿ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ಅವರನ್ನು ನೇರವಾಗಿ ಭೇಟಿ ಮಾಡಿ ಅಧಿಕಾರಿಯ ವಿರುದ್ಧ ದೂರು ದಾಖಲಿಸಿದ್ದರು.

ಈ ಸಂಬಂಧ ಮುಖ್ಯಮಂತ್ರಿಗಳು ದಕ್ಷಿಣ ವಲಯ ಎಡಿಜಿಪಿ ಅನಿಲ್ ಕುಮಾರ್ ಅವರಿಂದ ಮಾಹಿತಿ ಸಂಗ್ರಹಿಸಿದ್ದು, ಸೂಕ್ತ ಕ್ರಮ ಕೈಗೊಂಡಿದ್ದಾರೆ ಎನ್ನಲಾಗಿದೆ.

ಸುದೇಶ್ ಕುಮಾರ್ ಆರ್ಡಲಿಯಲ್ಲಿ ಪೊಲೀಸರನ್ನು ತನ್ನ ಮನೆ ಕೆಲಸಕ್ಕೆ ಬಳಸಿಕೊಳ್ಳುತ್ತಿದ್ದ ದೂರು ಕೇಳಿಬಂದಿದೆ. ಇನ್ನಿತರ ಸರ್ಕಾರದ ಇಲಾಖೆಯಲ್ಲಿ ಅವರಿಗೆ ಹುದ್ದೆ ನೀಡುವ ಸಾಧ್ಯತೆ ಇದೆ ಎಂದು ಪೊಲೀಸರ ಹೊರಗಿನ ಮಾಹಿತಿಗಳು ತಿಳಿಸಿವೆ.

ಈ ಮಧ್ಯೆ ಪೊಲೀಸ್ ಡ್ರೈವರ್ ನೀಡಿರುವ ದೂರಿನ ಬಗ್ಗೆ ನಿಷ್ ಪಕ್ಷಪಾತ ತನಿಖೆ ನಡೆಸಲಾಗುವುದು ಎಂದು ರಾಜ್ಯ ಪೊಲೀಸ್ ಮುಖ್ಯಸ್ಥ ಲೋಕನಾಥ್ ಬೆಹೆರಾ ಭರವಸೆ ನೀಡಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಅಪರಾಧ ವಿಭಾಗದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Comments are closed.