ರಾಷ್ಟ್ರೀಯ

ಮೂರು ವರ್ಷದ ಮಗುವನ್ನು ನದಿಗೆ ಎಸೆದು ತಾವು ಆತ್ಮಹತ್ಯೆಗೆ ಶರಣಾದ ಸಲಿಂಗಕಾಮಿ ಮಹಿಳಾ ಜೋಡಿ

Pinterest LinkedIn Tumblr

ನವದೆಹಲಿ: ಸಲಿಂಗಕಾಮಿ ಮಹಿಳಾ ಜೋಡಿಯೊಂದು ಅಹಮದಾಬಾದ್​ನ ಶಬರಮತಿ ನದಿಯಲ್ಲಿ ಮುಳುಗಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೋಮವಾರ ನಡೆದಿದೆ. ಆತ್ಮಹತ್ಯೆಗೂ ಮುನ್ನ ಮೂರು ವರ್ಷದ ಹೆಣ್ಣು ಮಗುವನ್ನೂ ನೀರಿಗೆ ಎಸೆಯಲಾಗಿದ್ದು, ಮೃತ ಮಗು ಸಲಿಂಗಕಾಮಿಯೊಬ್ಬಳ ಮಗಳೆಂದು ಹೇಳಲಾಗಿದೆ.

ಸೋಮವಾರ ಬೆಳಗ್ಗೆ ನಸುಕಿನಲ್ಲೇ ಈ ಘಟನೆ ನಡೆದಿದ್ದು, ಶಬರಮತಿ ನದಿಗೆ ಅಡ್ಡಲಾಗಿರುವ ಎಲಿಸ್​ಬ್ರಿಡ್ಜ್​ ನಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅದಕ್ಕೂ ಮುನ್ನಾ ಮಗುವನ್ನು ಕೂಡ ಸೇತುವೆ ಮೇಲಿಂದ ನದಿಗೆ ಎಸೆದು ಹತ್ಯೆ ಮಾಡಿದ್ದಾರೆ ಎಂದು ಅಹಮದಾಬಾದ್​ನ ಮಹಿಳಾ ಪೊಲೀಸ್​ ಠಾಣೆಯ ಇನ್ಸ್​ಪೆಕ್ಟರ್​ ಎಂ.ಎಸ್​. ಸಿಂಗ್​ ತಿಳಿಸಿದ್ದಾರೆ.

ಆತ್ಮಹತ್ಯೆ ಸಂಬಂಧ ಪೊಲೀಸರಿಗೆ ಎರಡು ಡೆತ್​ನೋಟ್​ ಸಿಕ್ಕಿದ್ದು, ಒಂದು ಪೇಪರ್​ ಪ್ಲೇಟ್​ ಮೇಲೆ ಹಾಗೂ ಇನ್ನೊಂದನ್ನು ನದಿ ಮುಂಭಾಗದ ಗೋಡೆಯ ಮೇಲೆ ಬರೆಯಲಾಗಿದೆ. ಎರಡು ಡೆತ್​ನೋಟ್​ಗಳಲ್ಲೂ ನಾವಿಬ್ಬರು ಒಂದಾಗಲು ಈ ಪ್ರಪಂಚ ಬಿಡುವುದಿಲ್ಲ. ನಮ್ಮ ಸಂಬಂಧವನ್ನು ಅರ್ಥ ಮಾಡಿಕೊಂಡು ನಮ್ಮನ್ನು ಸುಮ್ಮನೇ ಬದಕಲು ಬಿಡುವುದಿಲ್ಲ. ಹೀಗಾಗಿ ನಾವು ಈ ಪ್ರಪಂಚ ಬಿಡುತ್ತಿದ್ದೇವೆ ಎಂದು ಬರೆದಿದ್ದಾರೆ.

ಮೃತರನ್ನು ಆಶಾ ಠಾಕೂರ್​(30) ಹಾಗೂ ಭಾವನಾ ಠಾಕೂರ್​(28) ಎಂದು ಗುರುತಿಸಲಾಗಿದ್ದು, ಮೃತ ಹೆಣ್ಣು ಮಗು ಮೇಘಾ, ಆಶಾಗೆ ಸೇರಿದ್ದಾಗಿದೆ. ಭಾವನಾ ಠಾಕೂರ್​ರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ.

Comments are closed.