ರಾಷ್ಟ್ರೀಯ

ನೀಲಿ ಚಿತ್ರಗಳ ತಾರೆ ಸನ್ನಿ ಲಿಯೋಳನ್ನು ಸಮರ್ಥಿಸಿದ ಪಾಟಿದಾರ್‌ ನಾಯಕ ಹಾರ್ದಿಕ್‌ ಪಟೇಲ್‌

Pinterest LinkedIn Tumblr


ಇಂದೋರ್‌ : ಹೆಸರಾಂತ ಬಾಲಿವುಡ್‌ ನಟಿಯರಾದ ನರ್ಗೀಸ್‌, ಶ್ರೀದೇವಿ ಅಥವಾ ಮಾಧುರಿ ದೀಕ್ಷಿತ್‌ ಅವರನ್ನು ಕಾಣುವಂತೆ ನಾವು ಸನ್ನಿ ಲಿಯೋನ್‌ ಳನ್ನು ಕಾಣಲು ಏಕೆ ಸಾಧ್ಯವಿಲ್ಲ ? ಎಂದು ಪಾಟಿದಾರ್‌ ನಾಯಕ ಹಾರ್ದಿಕ್‌ ಪಟೇಲ್‌ ಪ್ರಶ್ನಿಸಿದ್ದಾರೆ.

“ಸನ್ನಿ ಲಿಯೋನ್‌ ಈ ಹಿಂದೆ ನೀಲಿ ಚಿತ್ರಗಳ ಪೋರ್ನ್ ಸ್ಟಾರ್‌ ಆಗಿದ್ದರು ನಿಜ; ಆದರೆ ಈಗ ಆಕೆ ಓರ್ವ ಪ್ರಬುದ್ಧ ಅಭಿನೇತ್ರಿಯಾಗಿರುವುದರಿಂದ ನಾವು ಆಕೆಯನ್ನು ಆಕೆಯ ಸ್ವತಂತ್ರ ಇಮೇಜ್‌ ಮೂಲಕ ಕಾಣಲು ಏಕೆ ಸಾಧ್ಯವಿಲ್ಲ’ ಎಂದು ಹೇಳುವ ಮೂಲಕ ಹಾರ್ದಿಕ್‌ ಪಟೇಲ್‌ ಅವರು ಸನ್ನಿ ಲಿಯೋನ್‌ ಳನ್ನು ಸಮರ್ಥಿಸಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಹಾರ್ದಿಕ್‌ ಪಟೇಲ್‌, “ನಾವು ಸನ್ನಿ ಲಿಯೋನ್‌ ಳನ್ನು ಇನ್ನೂ ಕೂಡ ಆಕೆಯ ಪೋರ್ನ್ ಸ್ಟಾರ್‌ ಇಮೇಜ್‌ ಮೂಲಕವೇ ಆಕೆಯನ್ನು ಕಾಣುವುದೆಂದಾದರೆ ನಮ್ಮ ದೇಶ ಎಂದೂ ಬದಲಾಗದು ಎನ್ನುವುದು ನಿಶ್ಚಿತ’ ಎಂದು ಹೇಳಿದರು.

ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ ಅವರ ಪತಿ ರಾಜ್‌ ಕುಂದ್ರಾ ಅವರೊಂದಿಗೆ ಸನ್ನಿ ಲಿಯೋನ್‌ ಹೆಸರು ಕೂಡ ಈಚೆಗೆ 2,000 ಕೋಟಿ ರೂಗಳ ಬಿಟ್‌ ಕಾಯಿನ್‌ ಹಗರಣದಲ್ಲಿ ಕಾಣಿಸಿಕೊಂಡಿತ್ತು.

ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತಾವು ಸನ್ನಿ ಯನ್ನು ಕೂಡ ತನಿಖೆಗೆ ಗುರಿಪಡಿಸಲಿದ್ದೇವೆ ಎಂದು ಈಚೆಗೆ ಹೇಳಿದ್ದರು. ಈ ಹಗರಣದ ಇನ್ನೋರ್ವ ಆರೋಪಿಯಾಗಿರುವ ಅಮಿತ್‌ ಭಾರದ್ವಾಜ್‌ ಅವರು ದುಬೈ ಮತ್ತು ಸಿಂಗಾಪುರದಲ್ಲಿ ಕಂಪೆನಿಯನ್ನು ಪ್ರಮೋಟ್‌ ಮಾಡುವಲ್ಲಿ ಸೇರಿಕೊಂಡಿರುವ ಸೆಲೆಬ್ರಿಟಿಗಳಲ್ಲಿ ಸನ್ನಿ ಲಿಯೋನ್‌ ಕೂಡ ಓರ್ವರಾಗಿದ್ದಾರೆ.

Comments are closed.