ಮುಂಬೈ

ಎರಡು ತಲೆ ಹಾವು 30 ಲಕ್ಷಕ್ಕೆ ಮಾರಲು ಯತ್ನ: ಇಬ್ಬರ ಬಂಧನ

Pinterest LinkedIn Tumblr


ಮುಂಬಯಿ: ರೆಡ್ ಸ್ಯಾಂಡ್‌ ಬೋಯಾ ಎಂದು ಕರೆಯಲಾಗುವ ಎರಡು ತಲೆ ಹಾವನ್ನು 30 ಲಕ್ಷಕ್ಕೆ ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರನ್ನು ನಗರ ಅಪರಾಧ ದಳದ ಪೊಲೀಸರು ಗುರುವಾರ ಬಂಧಿಸಿದ್ದಾರೆ.

ಆರೋಪಿಗಳನ್ನು ಉತ್ತರ ಪ್ರದೇಶ ಮೂಲದ ವಿನೋದ್ ಕುಮಾರ್ ಮೋರ್ಯಾ (27) ಮತ್ತು ಚೋಟೆ ಮೋರ್ಯಾ ಎಂದು ಗುರುತಿಸಲಾಗಿದೆ.

ಮ್ಯಾಜಿಸ್ಟ್ರೇಟ್ ಕೋರ್ಟ್‌ನಲ್ಲಿ ಅವರನ್ನು ಹಾಜರು ಪಡಿಸಲಾಗಿಸಲಾಗಿತ್ತು. ಆರೋಪಿಗಳು 50,000 ರೂಪಾಯಿ ದಂಡ ಪಾವತಿಸಿ ಜಾಮೀನು ಪಡೆದಿದ್ದಾರೆ.

ಪೊಲೀಸರು ಅರಣ್ಯದ ಉಪ ಸಂರಕ್ಷಣಾಧಿಕಾರಿಗೆ ಹಾವನ್ನು ಹಸ್ತಾಂತರಿಸಿದ್ದಾರೆ.

Comments are closed.