ರಾಷ್ಟ್ರೀಯ

ಕಾಶ್ಮೀರಿ ಕಲ್ಲು ತೂರಾಟಗಾರರನ್ನು ಗುಂಡಿಕ್ಕಿ ಕೊಲ್ಲಬೇಕು: ಬಿಜೆಪಿ ಸಂಸದ ಡಿ ಪಿ ವತ್ಸ್

Pinterest LinkedIn Tumblr


ಹೊಸದಿಲ್ಲಿ: ಕಾಶ್ಮೀರದಲ್ಲಿ ಕಲ್ಲು ತೂರಾಟ ನಡೆಸುವವರನ್ನು ಗುಂಡಿಕ್ಕಿ ಕೊಲ್ಲಬೇಕು ಎಂದು ಬಿಜೆಪಿ ಸಂಸದ ಡಿ ಪಿ ವತ್ಸ್ ಹೇಳಿದ್ದಾರೆ.

“ಕಾಶ್ಮೀರದಲ್ಲಿ ಕಲ್ಲು ತೂರಾಟ ನಡೆಸುವವರ ವಿರುದ್ಧದ ಪ್ರಕರಣಗಳನ್ನು ಕೈ ಬಿಡಲಾಗುತ್ತಿದೆ ಎಂದು ಪತ್ರಿಕೆಯಲ್ಲಿ ಓದಿದೆ. ಆದರೆ ನನ್ನ ಪ್ರಕಾರ ಅವರನ್ನು ಗುಂಡಿಕ್ಕಿ ಕೊಲ್ಲಬೇಕು, ಎಂದು ರಾಜ್ಯಸಭಾ ಸದಸ್ಯರಾಗಿರುವ ವತ್ಸ್‌ ಅಭಿಪ್ರಾಯ ಪಟ್ಟಿದ್ದಾರೆ.

ಕಾಶ್ಮೀರದ ಪಿಡಿಪಿ- ಬಿಜೆಪಿ ಸರಕಾರ ಫೆಬ್ರವರಿಯಲ್ಲಿ ಸುಮಾರು ಕಲ್ಲುತೂರಾಟ ಆರೋಪ ಹೊತ್ತಿದ್ದ ಸುಮಾರು 10,000 ಜನರ ವಿರುದ್ಧದ ಪ್ರಕರಣಗಳನ್ನು ಕೈ ಬಿಡಲು ನಿರ್ಧರಿಸಿತ್ತು.

ಪ್ರಥಮ ಬಾರಿ ಕಲ್ಲು ತೂರಾಟ ನಡೆಸಿರುವವರ ವಿರುದ್ಧದ ಪ್ರಕರಣಗಳನ್ನು ಕೈ ಬಿಡುವುದಾಗಿ ಕೆಲ ದಿನಗಳ ಹಿಂದೆ ಗೃಹ ಸಚಿವ ರಾಜನಾಥ್ ಸಿಂಗ್ ಘೋಷಿಸಿದ್ದರು. ಮಕ್ಕಳು ತಪ್ಪು ಮಾಡುತ್ತಾರೆ. ಈ ಪರಿಸ್ಥಿತಿ ನಮಗೆ ಅರ್ಥವಾಗುತ್ತದೆ. ಅವರ ಭವಿಷ್ಯ ಅಂಧಕಾರಮಯವಾಗಬಾರದು. ಹೀಗಾಗಿ ಮೊದಲ ಬಾರಿ ಕಲ್ಲು ತೂರಾಟ ಪ್ರಕರಣದಲ್ಲಿ ಭಾಗವಹಿಸಿದವರ ವಿರುದ್ಧದ ಪ್ರಕರಣಗಳನ್ನು ಹಿಂದಕ್ಕೆ ಪಡೆಯಲಾಗುವುದು ಎಂದವರು ಹೇಳಿದ್ದರು.

Comments are closed.