ಚಂಡೀಗಡ: ಹೆಚ್ಚುವರಿ ಮುಖ್ಯಕಾರ್ಯದರ್ಶಿ ಲೈಂಗಿಕ ಕಿರುಕುಳ ನೀಡಿರುವುದಾಗಿ ಹರಿಯಾಣದ ಮಹಿಳಾ ಐಎಎಸ್ ಅಧಿಕಾರಿ ದೂರು ಸಲ್ಲಿಸಿದ್ದಾಳೆ.
ಹಿರಿಯ ಅಧಿಕಾರಿ (ಎಸಿಎಸ್) ಅನುಚಿತವಾಗಿ ವರ್ತಿಸುತ್ತಿದ್ದು, ಅಸಭ್ಯವಾಗಿ ಮಾತನಾಡುತ್ತಿದ್ದಾರೆ. ಅವರೊಂದಿಗೆ ಸಹಕರಿಸಿದೇ ಹೋದಲ್ಲಿ, ವಾರ್ಷಿಕ ಗೌಪ್ಯತಾ ವರದಿ ತಿರುಚಿ, ಜೀವನವನ್ನೇ ನಾಶ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು 36 ವರ್ಷದ ಮಹಿಳಾ ಅಧಿಕಾರಿ ದೂರಿದ್ದಾರೆ. ಈ ಕುರಿತು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಮಹಿಳಾ ಅಧಿಕಾರಿ ನೀಡಿರುವ ದೂರನ್ನು ತಳ್ಳಿಹಾಕಿರುವ ಎಸಿಎಸ್, ಎಲ್ಲ ವಿಭಾಗದಿಂದ ಅನುಮೋದನೆ ಪಡೆದಿರುವ ಫೈಲ್‌ಗಳಲ್ಲಿ ಅನಗತ್ಯ ತಪ್ಪು ಕಂಡು ಹುಡುಕದಂತೆ ಅವರಿಗೆ ತಿಳಿಸಲಾಗಿತ್ತು ಅಷ್ಟೇ. ನನ್ನ ಕೆಳಗಿನ ಅಧಿಕಾರಿಗಳ ಬಳಿ ಸರಿಯಾಗಿ ಕೆಲಸ ಮಾಡಿಸುವುದು, ಅವರಿಗೆ ಸರಿಯಾದ ತರಬೇತಿ ನೀಡುವುದು ನನ್ನ ಕರ್ತವ್ಯ. ಅವರಿಗೆ ಇಲ್ಲಿ ಕೆಲಸ ಮಾಡಲು ಇಷ್ಟವಿಲ್ಲದಿದ್ದಲ್ಲಿ, ವರ್ಗಾವಣೆ ಕೇಳಲಿ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಅಲ್ಲದೆ ಮಹಿಳಾ ಅಧಿಕಾರಿ ಕೆಲ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಫೇಸ್‌ಬುಕ್‌ನಲ್ಲಿ ಕೆಲ ಸಮಯ ಹಿಂದೆಯೇ ಈ ರೀತಿ ಪೋಸ್ಟ್ ಮಾಡಿ, ದೂರಿದ್ದರು. ಇತ್ತೀಚೆಗೆ ಕಚೇರಿಯ ಇತರೆ ಸಿಬ್ಬಂದಿ ಮೇಲೂ ಅನುಚಿತವಾಗಿ ವರ್ತಿಸಿದ್ದಾರೆ. ಅವರ ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ತಿಳಿಸಿರುವುದಾಗಿ ಎಸಿಎಸ್ ಹೇಳಿಕೆ ನೀಡಿದ್ದಾರೆ.
ಜೂ.6ರಂದು ಎಸಿಎಸ್ ಸಂಜೆ 5 ಗಂಟೆಗೆ ತನ್ನ ಕೊಠಡಿಗೆ ಕರೆಸಿ, ರಾತ್ರಿ 7.30ರ ವರೆಗೆ ಕಚೇರಿಯಲ್ಲಿರುವಂತೆ ತಿಳಿಸಿದ್ದಾರೆ. ಅಲ್ಲದೆ ಆ ದಿನ ಕೊಠಡಿಯೊಳಗೆ ಅಸಭ್ಯವಾಗಿ ನಡೆದುಕೊಂಡಿದ್ದಾರೆ. ಇದಕ್ಕೂ ಮುನ್ನ ಮೇ 31ರಂದು ಎಸಿಎಸ್ ತನ್ನ ಕೊಠಡಿಗೆ ಮಹಿಳಾ ಅಧಿಕಾರಿಯನ್ನು ಕರೆಸಿ, ಯಾವ ರೀತಿಯ ಕೆಲಸ ಮಾಡಲು ಇಚ್ಚೆ ಪಡುತ್ತೀ ಎಂದು ಕೇಳಿದ್ದಾರೆ ಎಂದು ಮಹಿಳಾ ಅಧಿಕಾರಿ ದೂರಿನಲ್ಲಿ ತಿಳಿಸಿದ್ದಾರೆ.
ವಿಷಯದ ಸಂಬಂಧ ಮಹಿಳಾ ಅಧಿಕಾರಿ ಪ್ರಧಾನಿ ನರೇಂದ್ರ ಮೋದಿ ಅವರಿಗೂ ಪತ್ರದ ಮೂಲಕ ದೂರು ಸಲ್ಲಿಸಿದ್ದಾರೆ ಎನ್ನಲಾಗಿದೆ.
ದೂರಿನ ಕುರಿತು ಈಗಾಗಲೇ ಮುಖ್ಯ ಕಾರ್ಯದರ್ಶಿಗೆ ವಿವರಣೆ ನೀಡಲಾಗಿದೆ. ಒಂದು ಬಾರಿ ಅವರು ಕೊಠಡಿಗೆ ತಮ್ಮ ಬಾಗ್ ಜತೆ ಬಂದಿದ್ದರು. ಅದನ್ನು ನೌಕರನ ಬಳಿ ಹೊರಗಿಡುವಂತೆ ಹೇಳಿದ್ದೆ. ಇದರಲ್ಲಿ ಯಾವುದೇ ಕೆಟ್ಟ ಉದ್ದೇಶ ಇರಲಿಲ್ಲ ಎಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ.
ಮಹಿಳಾ ಅಧಿಕಾರಿಯಿಂದ ದೂರುಗಳ ಸರಮಾಲೆ
ಸಿರ್ಸಾದಲ್ಲಿ 2010ರಲ್ಲಿ ಕಾರ್ಯನಿರ್ವಹಿಸುವ ವೇಳೆ, ತನ್ನ ಮನೆ ಮೇಲೆ ಯಾರೋ ದಾಳಿ ನಡೆಸಲು ಮುಂದಾಗಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದರು. ಆದರೆ ಪೊಲೀಸರು ತನಿಖೆ ನಡೆಸಿ, ದೂರನ್ನು ಅಖೈದುಗೊಳಿಸಿದ್ದರು. ಫೇಸ್‌ಬುಕ್‌ನಲ್ಲೂ ಅನೇಕ ಬಾರಿ ಇದೇ ಮಾದರಿಯ ದೂರುಗಳನ್ನು ಬರೆದಿದ್ದಾರೆ ಎಂದು ತಿಳಿದು ಬಂದಿದೆ.
ಹಿರಿಯ ಅಧಿಕಾರಿಯ ಹೇಳಿಕೆಗಳನ್ನು ಟ್ವಿಟರ್‌ನಲ್ಲಿ ನೋಡಿ
Baseless allegation. She was posted here a month back. We gradually came to know she’s facing problems,I asked staff to take care of her. She even misbehaved with them: Haryana Addl Chief Secy on Facebook post by woman IAS officer leveling sexual harassment allegation against him
Comments are closed.