ರಾಷ್ಟ್ರೀಯ

ನಮ್ಮ ದೇಶದ ಮಹಿಳೆಯರಲ್ಲಿ ಹೆಚ್ಚಿದ ಲಿವ್ ಇನ್ ರಿಲೇಶನ್​ಶಿಪ್!

Pinterest LinkedIn Tumblr


ಭಾರತೀಯ ಯುವ ತಲೆಮಾರು ಸಂಪ್ರದಾಯ, ಕಟ್ಟುಪಾಡುಗಳನ್ನು ಮೀರಿ ಸ್ವತಂತ್ರವಾಗಿ ಬದುಕುವ ಪ್ರಯತ್ನದಲ್ಲಿದೆ ಎಂಬುವುದು ಹೊಸ ಸಮೀಕ್ಷೆಯಿಂದ ತಿಳಿದು ಬಂದಿದೆ. ದೇಶದಲ್ಲಿ ದೀರ್ಘ ಕಾಲದವರೆಗೆ ಅಪರೂಪ ಎಂಬಂತಿದ್ದ ಲಿವಿಂಗ್ ಇನ್​ ರಿಲೇಶನ್​ಶಿಪ್​ನ್ನು ಮಹಿಳೆಯರು ಕೂಡಾ ಬಯಸುತ್ತಿದ್ದಾರೆ ಎಂದು ಇನ್​​ಶಾರ್ಟ್ಸ್​​ (Inshorts) ಸುದ್ದಿ ಆ್ಯಪ್ ನಡೆಸಿದ ಸಮೀಕ್ಷೆಯಿಂದ ಬೆಳಕಿಗೆ ಬಂದಿದೆ.

ಈ ಜನಾಭಿಪ್ರಾಯದಲ್ಲಿ 18-35 ವರ್ಷ ವಯಸ್ಸಿನ ಒಳಗಿರುವ 1.4 ಲಕ್ಷ ಮಂದಿ ಭಾಗವಹಿಸಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಈ ಸಮೀಕ್ಷೆಯಲ್ಲಿ ಈಗಲೂ ಭಾರತದಲ್ಲಿ ಶೇ.80 ರಷ್ಟು ಮಂದಿ ಲಿವಿಂಗ್ ಇನ್ ರಿಲೇಶನ್​ಶಿಪ್ ನಿಷೇಧ ಎಂದು ಭಾವಿಸಿದರೆ, ಶೇ.47ಕ್ಕಿಂತ ಹೆಚ್ಚಿನವರು ಲಿವಿಂಗ್ ಇನ್ ರಿಲೇಶನ್​ಶಿಪ್​ಗಿಂತಲೂ ಮದುವೆಯೇ ಉತ್ತಮ ಆಯ್ಕೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮತ್ತೊಂದೆಡೆ ಶೇ.80 ರಷ್ಟು ಮಂದಿ ಭಾರತೀಯರು ಲಿವಿಂಗ್ ಇನ್ ರಿಲೇಶನ್​ಶಿಪ್​ನ್ನು ಆಯ್ಕೆ ಮಾಡಿಕೊಳ್ಳಲು ಬಯಸುವುದಾಗಿ ತಿಳಿಸಿದರೆ, ಶೇ.26 ರಷ್ಟು ಜನರು ಮದುವೆಯ ಬದಲಾಗಿ ಜೀವನಪೂರ್ತಿ ಲಿವಿಂಗ್ ಇನ್ ರಿಲೇಶನ್​ಶಿಪ್​ನಲ್ಲಿರಲು ಇಚ್ಛಿಸುವುದಾಗಿ ತಿಳಿಸಿದ್ದಾರೆ.

ಶೇ.86ರಷ್ಟು ಮಂದಿ ಲೈಂಗಿಕತೆ ಒಂದೇ ಲಿವಿಂಗ್ ಇನ್ ರಿಲೇಶನ್​ಶಿಪ್​ಗೆ ಕಾರಣವಲ್ಲ ಎಂದು ತಿಳಿಸಿದರೆ , ಶೇ.45ಕ್ಕಿಂತಲೂ ಹೆಚ್ಚಿನವರು ಲಿವಿಂಗ್ ಇನ್ ರಿಲೇಶನ್​ಶಿಪ್ ವಿವಾಹದ ಮುಂಚಿತವಾಗಿ ಹೊಂದಾಣಿಕೆಯ ಪರೀಕ್ಷೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅಲ್ಲದೆ ಶೇ.45 ರಷ್ಟು ಮಂದಿ ಭಾರತೀಯರು ಮದುವೆ ಮುಂಚಿತವಾಗಿ ಒಟ್ಟಾಗಿ ವಾಸಿಸುತ್ತಿದ್ದು, ಯಾವುದೇ ಕಾನೂನಿನ ಕ್ರಮ ಅವರ ಮನಸಿನ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ.

‘ಲಿವಿಂಗ್ ಇನ್ ರಿಲೇಶನ್​ಶಿಪ್​ಗೆ ಸರ್ಕಾರವು ಮಾನ್ಯತೆ ನೀಡಿದ ಬಳಿಕ ಭಾರತೀಯ ಕುಟುಂಬಗಳಲ್ಲಿ ಇದೊಂದು ಚರ್ಚೆಯ ವಿಷಯವಾಗಿ ಮಾರ್ಪಾಡಾಗಿದೆ. ಈ ಸಮೀಕ್ಷೆಯ ಮೂಲಕ ಯುವ ಸಮೂಹದ ಭಾವನೆಗಳನ್ನು ತಿಳಿಯಲು ಪ್ರಯತ್ನಿಸಿರುವುದಾಗಿ’ ಇನ್​​ಶಾರ್ಟ್ಸ್ ಸಂಸ್ಥಾಪಕ ಅಝರ್ ಇಕ್ಬಾಲ್ ತಿಳಿಸಿದ್ದಾರೆ.

Comments are closed.