ಕರ್ನಾಟಕ

24 ವಸಂತಗಳನ್ನು ಪೂರೈಸಿ 25 ರ ಸಂಭ್ರಮದಲ್ಲಿ ಉದಯವಾಹಿನಿ

Pinterest LinkedIn Tumblr


ಉದಯ ವಾಹಿನಿ ಈಗ 25 ರ ಸಂಭ್ರಮದಲ್ಲಿದೆ. ಹಲವು ಮನರಂಜನೆ ಕಾರ್ಯಕ್ರಮ, ಗಳನ್ನು ಪ್ರಸಾರ ಮಾಡುವ ಮೂಲಕ ಕಿರುತೆರೆಯಲ್ಲಿ ಪ್ರೇಕ್ಷಕರನ್ನು ತನ್ನತ್ತ ಸೆಳೆದುಕೊಂಡಿರುವ ಉದಯ ವಾಹಿನಿ, 24 ವಸಂತಗಳನ್ನು ಪೂರೈಸಿ, 25 ಕ್ಕೆ ಕಾಲಿಡುತ್ತಿದೆ. ಈ ಸಂಭ್ರಮದಲ್ಲಿರುವ ವಾಹಿನಿಯಲ್ಲಿ ಈಗ ಹಲವು ವಿಭಿನ್ನ ಧಾರಾವಾಹಿಗಳು ಪ್ರಸಾರವಾಗುವ ಮೂಲಕ ಕನ್ನಡಿಗರನ್ನು ಮತ್ತಷ್ಟು ಸಂತಸಪಡಿಸುತ್ತಿವೆ.

ಸದ್ಯಕ್ಕೆ ಪ್ರಸಾರಗೊಳ್ಳುತ್ತಿರುವ “ಜೋ ಜೋ ಲಾಲಿ’ ಧಾರಾವಾಹಿ ಈಗ 300 ರ ಸಂಭ್ರಮದಲ್ಲಿದೆ. ಬದಲಾಗುತ್ತಿರುವ ಅಭಿರುಚಿಗೆ ತಕ್ಕಂತೆ ಉದಯ ಟಿವಿ ಕನ್ನಡಿಗರಿಗೆ ವಿಭಿನ್ನ ಕಾರ್ಯಕ್ರಮಗಳನ್ನ ನೀಡುತ್ತಾ ಬರುತ್ತಿದ್ದು, ಧಾರಾವಾಹಿ ವಿಚಾರದಲ್ಲೂ ಹೊಸ ಕಥೆಗಳೊಂದಿಗೆ ಪ್ರೇಕ್ಷಕರನ್ನು ಖುಷಿಗೊಳಿಸುತ್ತಿದೆ. ತಾಯಿ ಮಗುವಿನ ಬಾಂಧವ್ಯದ ಕಥೆ ಆಧರಿಸಿದ “ಜೋ ಜೋ ಲಾಲಿ’ ಧಾರಾವಾಹಿ ಈಗ 300 ಕಂತುಗಳನ್ನು ಪೂರೈಸಿದೆ.

ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿ ದಿನ ಸಂಜೆ 6.30ಕ್ಕೆ “ಜೋ ಜೋ ಲಾಲಿ’ ಪ್ರಸಾರವಾಗುತ್ತಿದೆ. ಇನ್ನು, “ಅವಳು’ ಧಾರಾವಾಹಿ ಕೂಡ ಯಶಸ್ವಿಯಾಗಿ ಪ್ರಸಾರವಾಗುತ್ತಿದ್ದು, ಇದೀಗ 300ನೇ ಸಂಚಿಕೆಯತ್ತ ಸಾಗುತ್ತಿದೆ.ಇದು ಅಕ್ಕ ತಂಗಿ ಅತ್ತೆ ಸೊಸೆಯಾಗೋ ಈ ವಿಶೇಷ ಕಥೆಯ ಮೂಲಕ ಜನರನ್ನು ಆಕರ್ಷಿಸಿದೆ. ಇದು ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿ ರಾತ್ರಿ 7.30ಕ್ಕೆ ಪ್ರಸಾರವಾಗುತ್ತಿದೆ.

ಇವುಗಳ ಜೊತೆಗೆ “ಕಾವೇರಿ’ ಧಾರಾವಾಹಿ ಕೂಡ ತನ್ನ 250 ನೇ ಸಂಚಿಕೆಯ ಸಂಭ್ರಮದಲ್ಲಿದೆ. ಇದು ಕನ್ನಡ ಕಿರುತೆರೆ ಇತಿಹಾಸದಲ್ಲಿಯೇ ವಿಭಿನ್ನ ಕಥಾಹಂದರದ ಮೂಲಕ ಗಮನ ಸೆಳೆದ ಧಾರಾವಾಹಿ. ಉತ್ತಮ ಚಿತ್ರಕಥೆ, ಸಂಭಾಷಣೆ ಧಾರಾವಾಹಿಯ ಮೆರಗನ್ನು ಹೆಚ್ಚಿಸಿರುವ ಈ ಧಾರಾವಾಹಿ ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7 ಗಂಟೆಗೆ ಪ್ರಸಾರವಾಗುತ್ತಿದೆ.

ಇನ್ನು “ಬ್ರಹ್ಮಾಸ್ತ್ರ’ ಧಾರಾವಾಹಿ ಈಗ 100 ಸಂಚಿಕೆಯತ್ತ ಸಾಗಿದೆ. ಎರಡು ರಾಜ್ಯಗಳು, ದ್ವೇಷ ಕ್ರೌರ್ಯದ ನಡುವೆ ಮೂಡುವ ಪ್ರೇಮ ಕಥೆಯೇ ಬ್ರಹ್ಮಾಸ್ತ್ರ. ತೆಲುಗು ಹುಡುಗಿ ಶಿವರಂಜಿನಿ ಮತ್ತು ಕನ್ನಡದ ಹುಡುಗ ಸಂತು ನಡುವಿನ ಪ್ರೇಮಕಥೆ ಇಲ್ಲಿದೆ. ಸೋಮವಾರದಿಂದ ಶುಕ್ರವಾರ ರಾತ್ರಿ 8 ಗಂಟೆಗೆ ಪ್ರಸಾರವಾಗುತ್ತಿದೆ.

Comments are closed.