ರಾಷ್ಟ್ರೀಯ

ಪ್ರಧಾನಿ ಪರಿಹಾರ ನಿಧಿಗೆ ಪೆಟ್ರೋಲ್‌ ಬೆಲೆಯ 9 ಪೈಸೆ ಇಳಿಕೆ ದಾನ !

Pinterest LinkedIn Tumblr


ಕರೀಂನಗರ, ತೆಲಂಗಾಣ : ಪೆಟ್ರೋಲ್‌, ಡೀಸಿಲ್‌ ಬೆಲೆಯಲ್ಲಿನ ಅತ್ಯಲ್ಪ ಇಳಿಕೆಯಿಂದ ರೋಸಿಹೋಗಿರುವ ತೆಲಂಗಾಣದ ಚಂದು ಗೌಡ್‌ (38) ಎಂಬವರು ಪ್ರಧಾನಿ ಪರಿಹಾರ ನಿಧಿಗೆ 9 ಪೈಸೆಯ ವಂತಿಗೆ ನೀಡಿದ್ದಾರೆ.

ನೆರೆಯ ಸಿರ್ಸಿಲಾ ಜಿಲ್ಲೆಯ ಚಂದ್ರಾಮಪೇಟೆ ಗ್ರಾಮದ ನಿವಾಸಿಯಾಗಿರುವ ಚಂದು ಗೌಡ್‌ ಅವರು ಸರಕಾರಿ ಅಧಿಕಾರಿಗಳಿಗೆ ಅಹವಾಲು ಸಲ್ಲಿಸುವ ಸಭೆಯಲ್ಲಿ ಪ್ರಧಾನಿಯವರ ಪರಿಹಾರ ನಿಧಿಗೆ 9 ಪೈಸೆ ವಂತಿಗೆ ನೀಡುವ ಚೆಕ್ಕನ್ನು ಅಧಿಕಾರಿಗಳಿಗೆ ಹಸ್ತಾಂತರಿಸಿ ಇದು ಈಚೆಗೆ ಇಳಿಕೆಯಾಗಿರುವ ಪೆಟ್ರೋಲ್‌ ಬೆಲೆ ಎಂದು ಹೇಳಿ ನೆರೆದವರನ್ನು ಹಾಗೂ ಅಧಿಕಾರಿಗಳನ್ನು ಅಚ್ಚರಿಗೀಡು ಮಾಡಿದರು.

‘ಪೆಟ್ರೋಲ್‌ ಬೆಲೆಯನ್ನು 16 ಪೈಸೆ ಏರಿಸಿದ ಬಳಿಕ 9 ಪೈಸೆಯನ್ನು ಇಳಿಸಲಾಗಿದೆ; ಆದುದರಿಂದ ನಾನು 9 ಪೈಸೆಯನ್ನು ಪ್ರಧಾನಿ ಪರಿಹಾರ ನಿಧಿಗೆ ವಂತಿಗೆಯಾಗಿ ನೀಡಲು ನಿರ್ಧರಿಸಿದೆ’ ಎಂದು ಗೌಡ್‌ ಹೇಳಿದರೆಂದು ಅಧಿಕಾರಿಗಳು ತಿಳಿಸಿದರು.

ಕಳೆದ ಎಂಟು ದಿನಗಳಿಂದ ಕೆಲ ಪೈಸೆಗಳಷ್ಟು ಇಳಿಸಲಾಗುತ್ತಿರುವ ಪೆಟ್ರೋಲ್‌, ಡೀಸಿಲ್‌ ಬೆಲೆಯನ್ನು ಮೇ 30ರಂದು ಹಾಸ್ಯಾಸ್ಪದವಾಗಿ 1 ಪೈಸೆಯಷ್ಟು ಇಳಿಸಲಾಗಿತ್ತು. ದೇಶಾದ್ಯಂತ ಆಕ್ರೋಶಿತ ಜನರು ಕೇಂದ್ರ ಸರಕಾರವನ್ನು ಅಪಹಾಸ್ಯ ಮಾಡಿದ್ದರು.

Comments are closed.