ರಾಷ್ಟ್ರೀಯ

ನಿದ್ದೆಗೆ ಭಂಗವನ್ನುಂಟು ಮಾಡುತ್ತಿದ್ದ ಮೂವರು ಮಕ್ಕಳಿಗೆ ವಿಷ ಪ್ರಾಶನ

Pinterest LinkedIn Tumblr


ಅಜ್ಮೀರ್: ತನ್ನ ನಿದ್ದೆಗೆ ಭಂಗ ತರುತ್ತಿದ್ದಾರೆ ಎಂಬ ಕಾರಣಕ್ಕೆ ಮಹಿಳೆಯೋರ್ವಳು ಸಂಬಂಧಿಕರ ಮೂವರು ಮಕ್ಕಳಿಗೆ ವಿಷ ಉಣಿಸಿದ ಪೈಶಾಚಿಕ ಕೃತ್ಯ ನಗರದಲ್ಲಿ ಸೋಮವಾರ ನಡೆದಿದೆ. ಅದೃಷ್ಟವಶಾತ್ ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಘಟನೆ ವಿವರ: 8 ರಿಂದ 10 ವಯಸ್ಸಿನೊಳಗಿನ ಮೂವರು ಮಕ್ಕಳು ಮನೆಯ ಹೊರಗಡೆ ಆಟವಾಡುತ್ತಿದ್ದರು. ಆ ಸಂದರ್ಭದಲ್ಲಿ ಅವರ ಆಂಟಿ ಸುಶೀಲಾ ಮನೆಯೊಳಗಡೆ ನಿದ್ದೆ ಮಾಡುತ್ತಿದ್ದಳು. ಮಕ್ಕಳು ಗಲಾಟೆ ಮಾಡುತ್ತ ಆಡುತ್ತಿದ್ದುದರಿಂದ ಆಕೆಗೆ ಪದೇ ಪದೇ ಎಚ್ಚರವಾಗುತ್ತಿತ್ತು. ಗಲಾಟೆ ಮಾಡದಿರಿ ಎಂದು ಅನೇಕ ಬಾರಿ ಮಕ್ಕಳಿಗವಳು ಎಚ್ಚರಿಕೆ ನೀಡಿದ್ದಾಳೆ. ಆದರೆ ಅದ್ಯಾವುದಕ್ಕೂ ಗಮನ ಕೊಡದ ಮಕ್ಕಳು ಆಟವಾಡುವುದನ್ನು ಮುಂದುವರೆಸಿದ್ದಾರೆ. ಇದರಿಂದ ಬೇಸತ್ತ ಆಕೆ ಅವರನ್ನು ಒಳಗಡೆ ಕರೆದು ವಿಷ ಬೆರೆಸಿದ ತಂಪು ಪಾನೀಯವನ್ನು ಕುಡಿಯಲು ಕೊಟ್ಟಿದ್ದಾಳೆ.

ಪಾನೀಯ ಕುಡಿದ ತಕ್ಷಣ ಅಸ್ವಸ್ಥರಾದ ಮಕ್ಕಳು ವಾಂತಿ ಮಾಡಲು ಪ್ರಾರಂಭಿಸಿದ್ದಾರೆ. ಸ್ವಲ್ಪ ಸಮಯದಲ್ಲೇ ಪ್ರಜ್ಞೆ ಕಳೆದುಕೊಂಡ ಅವರನ್ನು ಪೋಷಕರು ಜವಾಹರಲಾಲ್ ನೆಹರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಪರೀಕ್ಷಿಸಿದ ವೈದ್ಯರು ಮಕ್ಕಳ ದೇಹದಲ್ಲಿ ವಿಷಯ ಅಂಶವಿರುವುದನ್ನು ಖಚಿತ ಪಡಿಸಿದ್ದಾರೆ.

ಮಕ್ಕಳ ದೇಹದಿಂದ ವಿಷವನ್ನು ಹೊರತೆಗೆಯಲಾಗಿದ್ದು, ಮೂವರು ಸಹ ಚೇತರಿಸಿಕೊಳ್ಳುತ್ತಿದ್ದಾರೆ.

ಆರೋಪಿಯನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Comments are closed.