ರಾಷ್ಟ್ರೀಯ

ಪಾಕ್ ಗುಂಡಿನ ದಾಳಿಗೆ ಇಬ್ಬರು ಭಾರತೀಯ ಸೈನಿಕರು ಹುತಾತ್ಮ

Pinterest LinkedIn Tumblr


ಶ್ರೀನಗರ: ಪಾಕಿಸ್ಥಾನ ಸೈನಿಕರು ಅಂತರಾಷ್ಟ್ರೀಯ ಗಡಿ ರೇಖೆಯಲ್ಲಿ ಕದನ ವಿರಾಮ ಉಲ್ಲಂಘನೆ ಮಾಡಿ ಗುಂಡಿನ ದಾಳಿ ನಡೆಸುವುದನ್ನು ಮುಂದುವರಿಸಿದ್ದು, ಶನಿವಾರ ರಾತ್ರಿ ಅಖ್‌ನೂರ್‌ ಸೆಕ್ಟರ್‌ನಲ್ಲಿ ನಡೆಸಿದ ಭಾರೀ ದಾಳಿಗೆ ಗಡಿ ಕಾಯುತ್ತಿದ್ದ ಇಬ್ಬರು ಭಾರತೀಯ ಯೋಧರು ಹುತಾತ್ಮರಾಗಿದ್ದು, ಗಡಿಯಂಚಿನ ಮನೆಗಳಲ್ಲಿದ್ದ 6 ಮಂದಿ ನಾಗರಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ.

ದಾಳಿಗೆ ಬಿಎಸ್‌ಎಫ್ ಯೋಧರು ಗಡಿಯುದ್ದಕ್ಕೂ ದಿಟ್ಟ ತಿರುಗೇಟು ನೀಡಿದ್ದು , ಭಾರೀ ದಾಳಿ ನಡೆಸಿ ಪಾಕ್‌ ನ 10 ಬಂಕರ್‌ಗಳನ್ನು ನಾಶ ಮಾಡಿರುವ ಬಗ್ಗೆ ವರದಿಯಾಗಿದೆ.

ಗಡಿನಿಯಂತ್ರಣರೇಖೆಯಲ್ಲಿರು ನಾಗರಿಕರಿಗೆ ಕಷ್ಟಗಳನ್ನು ತಪ್ಪಿಸಲು ಮತ್ತು ಅಸ್ತಿತ್ವದಲ್ಲಿರುವ ಪರಿಸ್ಥಿತಿಯನ್ನು ಸುಧಾರಿಸಲು ನೈಜ ಕ್ರಮಗಳನ್ನು ಕೈಗೊಳ್ಳಲು ಪಾಕಿಸ್ಥಾನ ಪರಸ್ಪರ ಒಪ್ಪಿಗೆ ನೀಡಿದ ಬೆನ್ನಲ್ಲೇ ಪಾಕ್‌ ಸೈನಿಕರು ನರಿ ಬುದ್ದಿ ತೋರಿದ್ದಾರೆ.

ಕಾಶ್ಮೀರದ ಚಿಂಕ್ರಾಲ್‌ ಮೊಹಲ್ಲಾ ಪ್ರದೇಶ ಸೇರಿದಂತೆ ಮೂರು ಕಡೆಗಳಲ್ಲಿ ಸಿಆರ್‌ಪಿಎಫ್ ಪಡೆಗಳನ್ನು ಗುರಿಯಾಗಿರಿಸಿ ಗ್ರೆನೇಡ್‌ಗಳ ದಾಳಿ ನಡೆಸಿದ ಬೆನ್ನಲ್ಲೇ ಪಾಕ್‌ ಸೈನಿಕರು ಗುಂಡಿನ ದಾಳಿ ನಡೆಸಿದ್ದಾರೆ.

ಗ್ರೆನೇಡ್‌ ದಾಳಿಯಲ್ಲಿ ನಾಲ್ವರು ಯೋಧರು ಮತ್ತು ಇಬ್ಬರು ನಾಗರೀಕರು ಗಾಯಗೊಂಡಿದ್ದಾರೆ.

Comments are closed.