ಕರ್ನಾಟಕ

12 ಸಚಿವ ಸ್ಥಾನಕ್ಕಾಗಿ ಜೆಡಿಎಸ್‌ನ 20ಕ್ಕಿಂತ ಹೆಚ್ಚು ಶಾಸಕರ ಲಾಬಿ!

Pinterest LinkedIn Tumblr


ಬೆಂಗಳೂರು: ಖಾತೆ ಹಂಚಿಕೆ ಬಳಿಕ ಕಾಂಗ್ರೆಸ್, ಜೆಡಿಎಸ್‌ನಲ್ಲಿ ಸಚಿವ ಸ್ಥಾನಕ್ಕಾಗಿ ಲಾಬಿ ಶುರುವಾಗಿದೆ. ಮೈತ್ರಿ ಸರ್ಕಾರದಲ್ಲಿ ಜೆಡಿಎಸ್‌ಗೆ 12 ಸಚಿವ ಸ್ಥಾನಗಳು ಸಿಕ್ಕಿದ್ದು 20ಕ್ಕಿಂತ ಹೆಚ್ಚು ಶಾಸಕರು ಮಂತ್ರಿಗಿರಿ ಮೇಲೆ ಕಣ್ಣಿಟ್ಟಿದ್ದಾರೆ. ಹೀಗಾಗಿ ಹೆಚ್‌.ಡಿ ದೇವೇಗೌಡ ಸಚಿವ ಸ್ಥಾನ ವಂಚಿತರನ್ನು ಸಮಾಧಾನ ಪಡಿಸುವ ಹೊಣೆಯನ್ನು ರೇವಣ್ಣಗೆ ನೀಡಿದ್ದಾರೆ.

ಸಚಿವ ಸ್ಥಾನ ನೀಡಲೇಬೇಕೆಂದು ಜೆಡಿಎಸ್ ಶಾಸಕರು ದೇವೇಗೌಡರ ಬೆನ್ನು ಬಿದ್ದಿದ್ದಾರೆ. 12 ಸಚಿವ ಸ್ಥಾನಗಳಿಗೆ 20ಕ್ಕಿಂತ ಹೆಚ್ಚು ಸಚಿವರು ಮಂತ್ರಿಗಿರಿಗೆ ಲಾಬಿ ಮಾಡುತ್ತಿದ್ದು ಗೌಡರಿಗೆ ಖಾತೆ ಹಂಚಿಕೆ ತಲೆನೋವಾಗಿದೆ. ಹೀಗಾಗಿ ಸಚಿವ ಸ್ಥಾನ ವಂಚಿತರನ್ನು ಸಮಾಧಾನ ಮಾಡುವಂತೆ ರೇವಣ್ಣಗೆ ಸೂಚಿಸಿದ್ದಾರೆ ಅಂತ ಹೇಳಲಾಗಿದೆ. ಖಾತೆ ಹಂಚಿಕೆ ಸಂಬಂಧ ಹೆಚ್‌.ಡಿ ರೇವಣ್ಣ ಸೋಮವಾರ ಜೆಡಿಎಸ್ ಶಾಸಕರ ಸಭೆ ಕರೆದಿದ್ದಾರೆ. ಸಚಿವ ಸ್ಥಾನ ವಂಚಿತರಿಗೆ ಪ್ರಮುಖ ನಿಗಮ ಮಂಡಳಿಯಲ್ಲಿ ಸ್ಥಾನ ನೀಡಿ ಶಾಸಕರನ್ನು ವಿಶ್ವಾಸಕ್ಕೆ ತೆೆಗೆದುಕೊಳ್ಳುವ ಜವಾಬ್ದಾರಿ ರೇವಣ್ಣ ಮೇಲಿದೆ. ಸೋಮವಾರ ಶಾಸಕಾಂಗ ಸಭೆಯಲ್ಲಿ ಸಚಿವರ ಹೆಸರು ಪ್ರಕಟವಾಗುವ ಸಾಧ್ಯತೆ ಇದೆ.

ಇನ್ನು ನಿನ್ನೆ ಸಿಎಂ ಕುಮಾರಸ್ವಾಮಿ ಕರೆದಿದ್ದ ಅಧಿಕಾರಿಗಳ ಸಭೆಯಲ್ಲಿ ರೇವಣ್ಣ ಕಿರಿಕಿರಿ ಉಂಟುಮಾಡಿದ ಘಟನೆ ನಡೆದಿದೆ. ಸಿಎಂ ಮಾತನಾಡೋ ವೇಳೆ ಪದೇ ಪದೇ ಮಧ್ಯಪ್ರವೇಶಿಸಿ ಮಾತನಾಡಿದ್ದಾರೆ. ಇದರಿಂದ ಕೋಪ ಬರ್ತಿದ್ರೂ ಕೂಡಾ ನಗುನಗುತ್ತಲೇ ಆಮೇಲೆ ಪ್ರೆಸ್​ ಮೀಟ್​ ಮಾಡಪ್ಪ, ಈಗ ನಾನು ಮಾಧ್ಯಮದವರು ಕೇಳಿದ್ದಕ್ಕೆ ಉತ್ತರಿಸುತ್ತೇನೆ ಎಂದು ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ. ಒಟ್ಟಾರೆ ಕುಮಾರಸ್ವಾಮಿ ಸಿಎಂ ಆಗುತ್ತಿದ್ದಂತೆ ಜೆಡಿಎಸ್‌ನಲ್ಲಿ ರೇವಣ್ಣಗೆ ಸುಪ್ರೀಂ ಪವರ್ ಸಿಕ್ಕಂತಾಗಿದೆ.

Comments are closed.