ರಾಷ್ಟ್ರೀಯ

ಹುಟ್ಟು ಹಬ್ಬದಂದು ಅವನು ಅವಳಾಗುವ ಆಸೆಯನ್ನು ಈಡೇರಿಸಿದ ತಂದೆ!

Pinterest LinkedIn Tumblr


ಹೊಸದಿಲ್ಲಿ: ಆತ ಹುಟ್ಟುತ್ತ ಹುಡುಗನಾಗಿದ್ದ. ಆದರೆ ಬೆಳೆಯುತ್ತಾ ಹೋದಂತೆ ಆತನಲ್ಲಿ ತಾನು ಹುಡುಗನಲ್ಲ, ಬದಲಾಗಿ ಹುಡುಗಿ ಎಂಬ ಭಾವನೆ ಆವರಿಸತೊಡಗಿತು. ಅಲ್ಲದೆ ಅವಕಾಶ ದೊರೆತಾಗೆಲ್ಲ ಹುಡುಗಿಯ ಉಡುಗೆ ಧರಿಸಲು ಆರಂಭಿಸಿದ, ಜತೆಗೆ ಹುಡುಗಿಯಂತೆ ವರ್ತಿಸಲು ತೊಡಗಿದ.

ಆದರೆ ವಿಷಯ ತಿಳಿದ ಆತನ ಪಾಲಕರು ಆತನಿಗೆ ಬೈದಾಡತೊಡಗಿದರು. ಅಲ್ಲದೆ ಆತನೊಂದಿಗೆ ತೀರಾ ಕಠಿಣವಾಗಿ ವರ್ತಿಸತೊಡಗಿದರು. ಇದರಿಂದ ಆತನಿಗೆ ಹಿಂಸೆಯಾಗತೊಡಗಿತು, ಜತೆಗೆ ತಾನು ಹುಡುಗನೇ ಅಥವಾ ಹುಡುಗಿಯೇ ಎಂಬ ಸಂಶಯವೂ ಹೆಚ್ಚಾಗತೊಡಗಿತು.

ಕ್ರಮೇಣ ಆತನ ತಂದೆಗೆ ಮಗನ ತಳಮಳ ಅರ್ಥವಾಯಿತು. ಹೀಗಾಗಿ ಆವರೇ ಮಗನ ಬರ್ತ್‌ಡೇಯಂದು ಲಿಂಗ ಬದಲಾಯಿಸುವ ಶಸ್ತ್ರಚಿಕಿತ್ಸೆಗೆ ಅನುಮತಿ ನೀಡಿದ್ದಾರೆ. ಹೀಗಾಗಿ ಸಮಸ್ಯೆಯಲ್ಲಿದ್ದ ಹುಡುಗನಿಗೆ ಬರ್ತ್‌ಡೇಗೆ ವಿಶೇಷ ಉಡುಗೊರೆ ಲಭಿಸಿದೆ. ಶಸ್ತ್ರಚಿಕಿತ್ಸೆಗೆ ಒಳಗಾದ ಹುಡುಗ ಈಗ ಕೃತಿಕಾ ಆಗಿ ಬದಲಾಗಿದ್ದು, ತನ್ನಲ್ಲಾದ ಬದಲಾವಣೆಗೆ ಸಂತೋಷಪಟ್ಟಿದ್ದಾಳೆ.

ಹಾರ್ಮೋನ್ ಥೆರಪಿ ಶಸ್ತ್ರಚಿಕಿತ್ಸೆಗೆ ಒಳಗಾದ ಬಳಿಕ ಆಕೆಯ ದೇಹದಲ್ಲಿ ಬದಲಾವಣೆಗಳುಂಟಾಗಿದ್ದು, ಉದ್ಯೋಗಕ್ಕಾಗಿ ಹುಡುಕಾಟ ಆರಂಭಿಸಿದ್ದಾಳೆ. ಆಕೆಗೆ ಗುರುತಿನ ಚೀಟಿ, ಮಾರ್ಕ್‌ಕಾರ್ಡ್ ಸಹಿತ ಹಲವು ಸಮಸ್ಯೆಗಳುಂಟಾದರೂ, ಅದೆಲ್ಲವನ್ನೂ ಎದುರಿಸುವ ವಿಶ್ವಾಸ ಹೊಂದಿದ್ದಾಳೆ. ಹೀಗೆ ಜಂಡರ್ ಡಯಾಸ್ಫೋರಿಯ ಸಮಸ್ಯೆಯಿಂದ ಬಳಲುತ್ತಿದ್ದ ಆತ ಆಕೆಯಾಗಿ ಬದಲಾಗಿದ್ದು, ಮನೆಯವರಿಗೂ ಸಮಾಧಾನ ನೀಡಿದೆ.

Comments are closed.