ರಾಷ್ಟ್ರೀಯ

ಪ್ರತಿ ಲೀಟರ್‌ ಪೆಟ್ರೋಲ್‌ ಬೆಲೆ 7 ಪೈಸೆ, ಡಿಸೇಲ್‌ ಬೆಲೆ 5 ಪೈಸೆ ಇಳಿಕೆ

Pinterest LinkedIn Tumblr

ನವದೆಹಲಿ: ಅಂತರರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ದರ ಇಳಿಕೆ ಕಂಡು ಬಂದ ಹಿನ್ನೆಲೆಯಲ್ಲಿ ದೇಶದಲ್ಲಿಯೂ ಪ್ರತಿ ಲೀಟರ್‌ ಪೆಟ್ರೋಲ್ ಹಾಗೂ ಡೀಸೆಲ್‌ ಬೆಲೆ ಕ್ರಮವಾಗಿ 7 ಮತ್ತು 5 ಪೈಸೆಗಳಷ್ಟು ಇಳಿಕೆಯಾಗಿದೆ.

ಕಳೆದ 16 ದಿನಗಳ ನಿರಂತರ ಬೆಲೆ ಏರಿಕೆ ನಂತರ ಇದೀಗ ಎರಡನೇ ಸಲ ಬೆಲೆ ಇಳಿಕೆಯಾಗಿದೆ. ಸದ್ಯ ದೆಹಲಿಯಲ್ಲಿ ಪೆಟ್ರೋಲ್ ಬೆಲೆ ₹78.42 ರಿಂದ ₹78.35ಕ್ಕೆ ಇಳಿದಿದ್ದರೆ, ಡೀಸೆಲ್‌ ಬೆಲೆ ₹69.30 ರಿಂದ 69.25ಕ್ಕೆ ಇಳಿದಿದೆ.

ಬುಧವಾರ ಪ್ರತಿ ಲೀಟರ್‌ ಪೆಟ್ರೋಲ್ ಹಾಗೂ ಡಿಸೇಲ್‌ ದರವನ್ನು ತಲಾ ಒಂದೊಂದು ಪೈಸೆ ಇಳಿಸಲಾಗಿತ್ತು. ಇದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.

‍‍ಕರ್ನಾಟಕ ವಿಧಾನಸಭೆ ಚುನಾವಣೆಗೆ ಮೂರು ವಾರ ಬಾಕಿ ಇರುವಾಗಲೇ ದರ ಪರಿಷ್ಕರಣೆಗೆ ವಿರಾಮ ಹಾಕಲಾಗಿತ್ತು. ಚುನಾವಣೆ ಬಳಿಕ ಮೇ 14ರಿಂದ ಸತತವಾಗಿ ಏರಿಕೆಯಾಗಿದ್ದ ಪೆಟ್ರೋಲ್‌ ಹಾಗೂ ಡಿಸೇಲ್‌ ದರಗಳು ಕ್ರಮವಾಗಿ ₹3.8, ₹3.38ರಷ್ಟು ಹೆಚ್ಚಳವಾಗಿದ್ದವು.

Comments are closed.