ಕರ್ನಾಟಕ

ಬೆಂಗಳೂರು ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಹುಚ್ಚ ವೆಂಕಟ್‌ಗೆ ಸಿಕ್ಕಿದ ಮತಗಳು ಎಷ್ಟು ಗೊತ್ತೇ …?

Pinterest LinkedIn Tumblr

ಬೆಂಗಳೂರು: ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದ ಹುಚ್ಚ ವೆಂಕಟ್ 764 ಮತಗಳನ್ನು ಪಡೆದಿದ್ದಾರೆ.

ಹುಚ್ಚ ವೆಂಕಟ್‌ ನೋಟಾ ಮತಗಳಿಗಿಂತಲು ಕಡಿಮೆ ಮತಗಳನ್ನು ಪಡೆದಿದ್ದಾರೆ. ಒಟ್ಟು 2764 ನೋಟಾ ಮತಗಳು ದಾಖಲಾಗಿವೆ.

ಹುಚ್ಚ ವೆಂಕಟ್ ಎಕ್ಕಡ(ಚಪ್ಪಲಿ) ಚಿಹ್ನೆ ಅಡಿಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದರು.

ಈ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದ್ದ ಎಲ್ಲಾ ಪಕ್ಷೇತರ ಅಭ್ಯರ್ಥಿಗಳಿಗಿಂತ ಹುಚ್ಚ ವೆಂಕಟ್ ಹೆಚ್ಚಿನ ಮತಗಳನ್ನು ಪಡೆದಿರುವುದು ವಿಶೇಷ.

ರಾಜರಾಜೇಶ್ವರಿ ಕ್ಷೇತ್ರದಲ್ಲಿ ಮತಕ್ಕಾಗಿ ಅಭ್ಯರ್ಥಿಗಳು ಸೀರೆ, ಕುಕ್ಕರ್‌ ಹಂಚುತ್ತಾರೆ ಎಂದು ಆರೋಪಿಸಿದ್ದರು. ಮತದಾರರಿಗೆ ಈ ರೀತಿ ಹಂಚುವುದು ತಪ್ಪು ಎಂದು ಹುಚ್ಚ ವೆಂಕಟ್‌ ಹೇಳಿದ್ದರು.

ಕಾಂಗ್ರೆಸ್‌ ಅಭ್ಯರ್ಥಿ ಮುನಿರತ್ನ ಅವರು 25,492 ಮತಗಳ ಅಂತರದಿಂದ ಗೆಲುವಿನ ನಗೆ ಬೀರಿದ್ದಾರೆ. ವಿಧಾನಸಭೆಯಲ್ಲಿ ಕಾಂಗ್ರೆಸ್‌ನ ಬಲ 79ಕ್ಕೆ ಏರಿದೆ. ಬಿಜೆಪಿ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟಿದೆ.

Comments are closed.