ರಾಷ್ಟ್ರೀಯ

ಊಟಿಯಲ್ಲಿ ಪ್ರಪಾತಕ್ಕೆ ಬಿದ್ದ 29 ಮಂದಿ ಪ್ರವಾಸಿಗರಿಂದ ಬಸ್‌; 4 ಮಂದಿ ಸಾವು

Pinterest LinkedIn Tumblr


ನೀಲಗಿರಿ: ತಮಿಳುನಾಡಿನ ಊಟಿ ಬಳಿಯ ತಾವಲಾಮಲೈ ಎಂಬಲ್ಲಿ ಬೆಂಗಳೂರಿಗರ ಪ್ರವಾಸಿಗರ ಬಸ್ಸೊಂದು ಪ್ರಪಾತಕ್ಕೆ ಉರುಳಿ ಬಿದ್ದು ನಾಲ್ವರು ದಾರುಣವಾಗಿ ಸಾವನ್ನಪ್ಪಿ, 15ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿರುವ ಭೀಕರ ಅವಘಡ ಶನಿವಾರ ರಾತ್ರಿ ನಡೆದಿದೆ.

ಬೆಂಗಳರೂರಿನಿಂದ ತೆರಳಿದ್ದ ಪ್ರವಾಸಿಗರ ಬಸ್‌ ಬೆಟ್ಟದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಹಲವು ಸುತ್ತು ಉರುಳಿ ಬಿದ್ದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದರೆ,ಇನ್ನಿಬ್ಬರು ಸ್ಥಳೀಯ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ.

ಬಸ್‌ನಲ್ಲಿ ಒಟ್ಟು 29 ಮಂದಿ ಪ್ರವಾಸಿಗರಿದರು ತೆರಳಿದ್ದರು ಎಂದು ತಿಳಿದು ಬಂದಿದ್ದು, ಮೃತರ ಗುರುತು ಇನ್ನಷ್ಟೇ ತಿಳಿದು ಬರಬೇಕಿದೆ.

Comments are closed.