ಕರ್ನಾಟಕ

ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಕ್ಕೆ ಬರಿಗಾಲಲ್ಲಿ ಚಾಮುಂಡಿ ಬೆಟ್ಟ ಹತ್ತಿದ ಅಂಗವಿಕಲೆ

Pinterest LinkedIn Tumblr


ಮೈಸೂರು: ಕುಮಾರಸ್ವಾಮಿ ಮುಖ್ಯಮಂತ್ರಿಯಾದರೆ ಬರಿಗಾಲಲ್ಲಿ ಚಾಮುಂಡಿ ಬೆಟ್ಟ ಹತ್ತುವುದಾಗಿ ಹರಕೆ ಹೊತ್ತಿದ್ದ ಅಂಗವಿಕಲ ಮಹಿಳೆ ಭಾನುವಾರ ಹರಕೆ ಸಲ್ಲಿಸಿದರು.

ಕಲಬುರುಗಿ ಮೂಲದ ಸಂಗೀತಾ 2006ರಲ್ಲಿ ಜನತಾದರ್ಶನದಲ್ಲಿ ಕುಮಾರಸ್ವಾಮಿಯವರನ್ನು ಭೇಟಿಯಾಗಿದ್ದರು. ಅಂಗವಿಕಲ ಕೋಟಾದಡಿ ಆಕೆಗೆ ಎಚ್​ಡಿಕೆ ಉದ್ಯೋಗಕ್ಕೆ ನೆರವು ನೀಡಿದ್ದರು. ಅಲ್ಲಿಂದ ಆಕೆ ಕುಮಾರಸ್ವಾಮಿ ಅಭಿಮಾನಿಯಾಗಿದ್ದರು. ಬಿಜೆಪಿ, ಜೆಡಿಎಸ್​ ಸಮ್ಮಿಶ್ರ ಸರ್ಕಾರ ಪತನವಾದ ಬಳಿಕ ಸಂಗೀತಾ, ಇನ್ನೊಮ್ಮೆ ಕುಮಾರಸ್ವಾಮಿ ಮುಖ್ಯಮಂತ್ರಿಯಾದರೆ ಬರಿಗಾಲಲ್ಲಿ ಚಾಮುಂಡಿ ಬೆಟ್ಟ ಹತ್ತುವುದಾಗಿ ಹರಕೆ ಕಟ್ಟಿಕೊಂಡಿದ್ದರು. ಈಗ ಮತ್ತೆ ಎಚ್​ಡಿಕೆ ಮುಖ್ಯಮಂತ್ರಿಯಾದ ಹಿನ್ನೆಲೆಯಲ್ಲಿ ಕುಟುಂಬದವರ ಜತೆ ಬೆಟ್ಟ ಹತ್ತಿ ಹರಕೆ ತೀರಿಸಿದ್ದಾರೆ.

Comments are closed.