ರಾಷ್ಟ್ರೀಯ

ಮುಂದಿನ 20 ವರ್ಷಗಳವರೆಗೂ ನಾನೇ ಬಹುಜನ ಸಮಾಜ ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ: ಮಾಯಾವತಿ

Pinterest LinkedIn Tumblr


ಲಖನೌ: ಮುಂದಿನ 20 ವರ್ಷಗಳವರೆಗೂ ಬಹುಜನ ಸಮಾಜ ಪಕ್ಷದ ರಾಷ್ಟ್ರೀಯ ಅಧ್ಯಕ್ಷೆಯಾಗಿ ತಾವೇ ಮುಂದುವರಿಯುವುದಾಗಿ ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಮಾಯಾವತಿ ಘೋಷಿಸಿದ್ದಾರೆ. ಇದಕ್ಕಾಗಿ ಪಕ್ಷದ ಸಂವಿಧಾನದಲ್ಲಿ ಅಗತ್ಯ ಬದಲಾವಣೆ ಮಾಡಿರುವುದಾಗಿಯೂ ಅವರು ತಿಳಿಸಿದ್ದಾರೆ.

ಶನಿವಾರ ಪಕ್ಷದ ಪದಾಧಿಕಾರಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಯಾರೂ ಸಹ ಪಕ್ಷದ ಅಧ್ಯಕ್ಷರಾಗುವ ಕನಸು ಕಾಣುವುದು ಬೇಡ ಎಂದು ಪರೋಕ್ಷ ಸಂದೇಶ ರವಾನಿಸಿದ್ದಾರೆ. ಇದೇವೇಳೆ, ಮುಂದಿನ ಚುನಾವಣೆಯಲ್ಲಿ ಸೂಕ್ತ ಸೀಟು ಹಂಚಿಕೆ ಸಾಧ್ಯವಾಗದಿದ್ದರೆ, ಸ್ವತಂತ್ರವಾಗಿ ಕಣಕ್ಕಿಳಿಯಲು ಸಜ್ಜಾಗುವಂತೆ ಪಕ್ಷದ ಕಾರ್ಯಕರ್ತರು ಮತ್ತು ನಾಯಕರಿಗೆ ಅವರು ಕರೆ ನೀಡಿದ್ದಾರೆ.

ಈ ಮಧ್ಯೆ, ಪಕ್ಷದ ಸಂವಿಧಾನಕ್ಕೆ ಬದಲಾವಣೆ ತರುವ ಮೂಲಕ ಮಾಯಾವತಿ ಅವರ ಸಹೋದರನನ್ನು ಪಕ್ಷದ ಉಪಾಧ್ಯಕ್ಷನಾಗಿ ಮುಂದುವರಿಯದಂತೆ ನಿರ್ಬಂಧಿಸಲಾಗಿದೆ.

Comments are closed.