ಅಂತರಾಷ್ಟ್ರೀಯ

ಮೊಬೈಲ್ ನಲ್ಲಿ ಸೆಕ್ಸ್ ನೋಡಿದರೆ ಅಪಾಯ ಕಟ್ಟಿಟ್ಟ ಬುತ್ತಿ!

Pinterest LinkedIn Tumblr


ಮೊಬೈಲ್ ನಲ್ಲಿಯೇ ಪೋರ್ನ್ ನೋಡುವವರಿಗೆ ಮತ್ತೊಂದು ಶಾಕಿಂಗ್ ಸುದ್ದಿ ಹೊರಬಿದ್ದಿದೆ. ಮೊಬೈಲ್‌ನಲ್ಲಿ ಪೋರ್ನ್ ನೋಡಿದ್ರೆ ಅಪಾಯವನ್ನು ನೀವೇ ಆಹ್ವಾನಿಸಿಕೊಂಡಂತೆ. ಪೋರ್ನ್ ಸೈಟ್ ಹ್ಯಾಕರ್ ಗಳ ಫೆವರೆಟ್ ಪ್ಲೇಸ್ ಆಗಿದ್ದು, ಈ ವೆಬ್‌ಸೈಟ್‌ಗಳಲ್ಲಿ ಪೋರ್ನ್ ನೋಡ್ತಿದ್ದಂತೆ ನಿಮಗೆ ಗೊತ್ತಿಲ್ಲದೆ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಹ್ಯಾಕರ್ಸ್ ಕದಿಯುತ್ತಿದ್ದಾರೆ.

ಇದನ್ನು ನಾವು ಹೇಳಿದ್ದಲ್ಲ. ಬದಲಾಗಿ, ಮೊಬೈಲ್ ಸೆಕ್ಯೂರಿಟಿ ಟೆಕ್ನಾಲಜಿ ಕಂಪನಿ Wandera ಪೋರ್ನ್ ಸೈಟ್ ಹಾಗೂ ಮೊಬೈಲ್ ಸುರಕ್ಷತೆ ಬಗ್ಗೆ ಪರಿಶೀಲನೆ ನಡೆಸಿದೆ. ಇದ್ರಲ್ಲಿ ಆಘಾತಕಾರಿ ಸಂಗತಿ ಗೊತ್ತಾಗಿದ್ದು, ಭದ್ರತಾ ಕಂಪೆನಿ ಕ್ಯಾಸ್ಪರ್ಸ್ಕಿ ಲ್ಯಾಬ್ ವರದಿಯ ಪ್ರಕಾರ, ಸುಮಾರು 12 ಮಿಲಿಯನ್ ಫೋನ್ ಬಳಕೆದಾರರು ಮಾಲ್ವೇರ್ ತೊಂದರೆಗೆ ಒಳಗಾಗಿದ್ದಾರಂತೆ.

ಇದೇ ವೇಳೆಯಲ್ಲಿ ಭಾರತವು ಅಶ್ಲೀಲ ವೆಬ್‌ಸೈಟ್‌ಗಳ ವೀಕ್ಷಣೆಯಲ್ಲಿ ಮೂರನೇ ಸ್ಥಾನದಲ್ಲಿರುವುದು ಸಹ ಗಾಬರಿ ಹುಟ್ಟಿಸುವಂತಿದೆ.

ಹ್ಯಾಕರ್ ಗಳಿಗೆ ಪೋರ್ನ್ ವೆಬ್ಸೈಟ್ ಅಥವಾ ಆ್ಯಪ್ ಮೂಲಕ ಆಂಡ್ರಾಯ್ಡ್ ಫೋನ್ ಗೆ ಮಾಲ್ವೇರ್ ಕಳಿಸೋದು ಸುಲಭ, ಹಾಗಾಗಿಯೇ ಆಂಡ್ರಾಯ್ಡ್ ನಲ್ಲಿ ಪೋರ್ನ್ ನೋಡುವವರು ಹೆಚ್ಚಿನ ಪ್ರಮಾಣದಲ್ಲಿ ಹ್ಯಾಕರ್ಸ್ ಗಾಳಕ್ಕೆ ಸಿಲುಕಿಕೊಳ್ಳುತ್ತಾರೆ.

Comments are closed.