ರಾಷ್ಟ್ರೀಯ

ಗರ್ಲ್‌ಫ್ರೆಂಡ್‌ ಅನ್ನು ಇಂಪ್ರೆಸ್ ಮಾಡಲು ವಿಮಾನದಲ್ಲೇ ಪ್ರಪೋಸ್ ಮಾಡಿದ!

Pinterest LinkedIn Tumblr


ಇಂದೋರ್: ಬಾಲಿವುಡ್ ಚಿತ್ರದಲ್ಲಿ ವಿಮಾನಗಳಲ್ಲಿ ಪ್ರಪೋಸ್ ಮಾಡಿರುವ ದೃಶ್ಯಗಳನ್ನು ನೋಡಿರುತ್ತೀರಾ. ಇದೇ ರೀತಿ, ಇಂದೋರ್‌ನಿಂದ ಗೋವಾಗೆ ಹೊರಡಬೇಕಿದ್ದ ವಿಮಾನದಲ್ಲಿ ಹೋಗುತ್ತಿದ್ದ ತನ್ನ ಗರ್ಲ್‌ಫ್ರೆಂಡ್‌ ಅನ್ನು ಇಂಪ್ರೆಸ್ ಮಾಡಲು ಸಿನಿಮೀಯ ರೀತಿಯಲ್ಲಿ ವಿಮಾನದಲ್ಲೇ ಪ್ರಪೋಸ್ ಮಾಡಿದ್ದಾನೆ. ವಿಮಾನ ಹತ್ತುತ್ತಿದ್ದ ಪ್ರಯಾಣಿಕರೆಲ್ಲ ಇದನ್ನು ಕಂಡು ಆಶ್ಚರ್ಯಚಕಿತರಾಗಿದ್ದಾರೆ.

ಇದೇ ರೀತಿ ಗೋವಾಗೆ ತೆರಳುತ್ತಿದ್ದ ಪ್ರೇಯಸಿಯನ್ನು ಭೇಟಿಯಾಗಲು ನಾಗಪುರದಿಂದ ಇಂದೋರ್‌ಗೆ ನರೇಂದ್ರ ಆನಂದಾನಿ ತೆರಳಿದ್ದಾನೆ. ಇದನ್ನು ತಿಳಿಯದ ಯುವತಿ ಇಂದೋರ್ ಏರ್‌ಪೋರ್ಟ್‌ಗೆ ತೆರಳಿ ಗೋವಾಕ್ಕೆ ಹೋಗಲು ವಿಮಾನ ಹತ್ತಿದ್ದಾಳೆ. ನಂತರ, ತನ್ನ ಸೀಟಿನ ಬಳಿ ಬರುತ್ತಿದ್ದಂತೆ, ವಿಮಾನದ ಇಂಟರ್‌ಕಾಮ್‌ನಲ್ಲಿ ನರೇಂದ್ರ ಎಲ್ಲ ಪ್ರಯಾಣಿಕರ ಎದುರು ಪ್ರಪೋಸ್ ಮಾಡಿದ್ದಾನೆ. ಅವರ ಪ್ರೇಮಿಯ ಧ್ವನಿ ಕೇಳಿ ಹಾಗೂ ಈ ರೀತಿ ಮಾಡಿದ್ದಕ್ಕೆ ಆಶ್ಚರ್ಯಚಕಿತಳಾದ ಯುವತಿ, ಇಂಟರ್‌ಕಾಮ್ ಕಡೆಗೆ ಹೋಗಿದ್ದಾಳೆ.

ಅಲ್ಲಿಗೆ ಆಕೆ ಹೋದ ತಕ್ಷಣ ನರೇಂದ್ರ ಆನಂದಾನಿ ತನ್ನ ಮಂಡಿಯೂರಿ ಪ್ರೇಯಸಿಗೆ ಗುಲಾಬಿ ಹೂವು ನೀಡಿದ್ದಾನೆ. ಅಲ್ಲದೆ, ತನ್ನನ್ನು ಮದುವೆಯಾಗುತ್ತೀಯಾ ಎಂಬ ಫಲಕಗಳನ್ನು ಹಿಡಿಯಲು ಇಂಡಿಗೋ ವಿಮಾನದ ಸಿಬ್ಬಂದಿಗೆ ಮನವಿ ಮಾಡಿದ್ದ. ನಂತರ, ಆತನನ್ನು ಮದುವೆಯಾಗಲು ಯುವತಿ ಒಪ್ಪಿದ್ದು, ಇಬ್ಬರೂ ಒಟ್ಟಿಗೆ ಗೋವಾಗೆ ಹಾರಿದ್ದಾರೆ.

ವಿಮಾನದಲ್ಲಿ ಪ್ರಪೋಸ್ ಮಾಡಲು ನರೇಂದ್ರ ವಿಮಾನದ ಸಿಬ್ಬಂದಿಗೆ ಮನವಿ ಮಾಡಿದ್ದು, ಅವರು ಆತನಿಗೆ ಸಹಾಯ ಮಾಡಿದ್ದರು. ಇದಕ್ಕೆ ಏರ್‌ಪೋರ್ಟ್ ಡೈರೆಕ್ಟರ್ ಆರ್ಯಮಾ ಸನ್ಯಾಲ್ ಕೂಡ ಜೋಡಿಗೆ ನೆರವಾದ ವಿಮಾನಯಾನ ಸಂಸ್ಥೆಗೆ ಶುಭ ಕೋರಿದ್ದಾರೆ. ಏರೋ ಬ್ರಿಡ್ಜ್ ಹಾಗೂ ವಿಮಾನದ ಒಳಗೆ ಪ್ರಪೋಸ್ ಮಾಡಲು ತಕ್ಷಣ ಕ್ರಮ ಕೈಗೊಂಡಿದ್ದಾರೆ ಎಂದು ಸನ್ಯಾಲ್ ಹರ್ಷ ವ್ಯಕ್ತಪಡಿಸಿದ್ದಾರೆ.

Comments are closed.