ರಾಷ್ಟ್ರೀಯ

ದೆವ್ವದಂತೆ ವೇಷ ಧರಿಸಿ ಬಾಲಕಿಯರಿಗೆ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದ ವಾರ್ಡನ್

Pinterest LinkedIn Tumblr


ಮೀರತ್: ವಾರ್ಡನ್ ಒಬ್ಬಳು ದೆವ್ವದಂತೆ ವೇಷ ಧರಿಸಿ ಬಾಲಕಿಯರಿಗೆ ಲೈಂಗಿಕ ದೌರ್ಜನ್ಯ ನಡೆಸುತ್ತಿರುವ ಪ್ರಸಂಗ ಮೀರತ್‌ನ ಕಸ್ತೂರ್ ಬಾ ವಸತಿ ಶಾಲೆಯಲ್ಲಿ ಬೆಳಕಿಗೆ ಬಂದಿದೆ.

ಶಾಲೆಯಲ್ಲಿ ಓದುತ್ತಿರುವ 100 ಮಕ್ಕಳಲ್ಲಿ 8 ಮಕ್ಕಳು ರಾತ್ರಿ ಸಮಯದಲ್ಲಿ ದೆವ್ವಗಳು ನಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆಸುತ್ತಿವೆ ಎಂದು ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದರು. ಅವರ ಪತ್ರಕ್ಕೆ ತಕ್ಷಣಕ್ಕೆ ಸ್ಪಂದಿಸಿದ ಅಧಿಕಾರಿ ತನಿಖೆಗೆ ಆದೇಶಿಸಿದ್ದಾರೆ.

ಬಾಲಕಿಯರು ಪತ್ರದಲ್ಲಿ ವಿವರಿಸಿರುವ ಪ್ರಕಾರ ಅವರ ವಾರ್ಡನ್ ಆಗಿರುವ ಮಹಿಳೆಯೇ ಈ ಭಯವನ್ನು ಸೃಷ್ಟಿಸಿರುವುದು. ಮಧ್ಯರಾತ್ರಿಯಾಗುತ್ತಿದ್ದಂತೆ ವಾರ್ಡನ್ ದೆವ್ವದಂತೆ ವೇಷ ಧರಿಸಿ, ಮುಖವನ್ನು ಮುಚ್ಚಿಕೊಂಡು ಶಾಲಾ ಆವರಣದಲ್ಲಿ ಓಡಾಡುತ್ತಾಳೆ. ಕೈಯ್ಯಲ್ಲಿ ಸುಗಂಧ ದ್ರವ್ಯದಂತ ದ್ರವವನ್ನು ಇಟ್ಟುಕೊಂಡು ಕೆಲವು ಹುಡುಗಿಯರ ಮೈಮೇಲೆ ಸಿಂಪಡಿಸುತ್ತಾಳೆ. ನಮ್ಮ ಬಟ್ಟೆಗಳನ್ನು ಎಳೆಯುತ್ತಾಳೆ. ಅವಳೇನೇ ಮಾಡಿದರೂ ಭಯದಿಂದಾಗಿ ನಾವು ಕಣ್ಣನ್ನೇ ತೆರೆಯುವುದಿಲ್ಲ, ಎಂದು 6ನೇ ತರಗತಿಯಲ್ಲಿ ಓದುತ್ತಿರುವ 10 ವರ್ಷದ ಬಾಲಕಿ ಪತ್ರ ಹೇಳುತ್ತದೆ.

ಮೂರು ವಿಶಾಲ ಕೋಣೆಗಳಲ್ಲಿ 20 ಹಾಸಿಗೆಗಳಿದ್ದು, ಪ್ರತಿ ಬೆಡ್ ಮೇಲೆ ಇಬ್ಬರು ಮಲಗುತ್ತಾರೆ. ನಿಯಮಾವಳಿಗಳ ಪ್ರಕಾರ ಪ್ರತಿ ಕೋಣೆಯಲ್ಲಿ ವಿದ್ಯಾರ್ಥಿನಿಗಳ ಜತೆ ಒಬ್ಬ ಶಿಕ್ಷಕಿ ಮಲಗಲೇಬೇಕು. ಆದರೆ ಈ ನಿಯಮವನ್ನು ಗಾಳಿಗೆ ತೂರಲಾಗಿದೆ.

ರಾತ್ರಿ ಸಮಯದಲ್ಲಿ ನಮ್ಮ ವಾರ್ಡನ್ ಕೆಲ ಹುಡುಗಿಯರನ್ನು ಶಾಲಾ ಅವರಣದಿಂದ ಹೊರಕ್ಕೆ ಕರೆದೊಯ್ಯುತ್ತಾಳೆ. ನನ್ನ ಕೋಣೆಗೂ ಬರುವ ಆಕೆ ಅಸಭ್ಯವಾಗಿ ಸ್ಪರ್ಶಿಸುತ್ತಾಳೆ. ಆದರೆ ನಾನು ನಿದ್ದೆ ಮಾಡುತ್ತಿರುವಂತೆ ನಾಟಕವಾಡುತ್ತೇನೆ, ಎಂದು 8ನೇ ತರಗತಿಯಲ್ಲಿ ಓದುತ್ತಿರುವ ಬಾಲಕಿ ಪತ್ರದಲ್ಲಿ ವಿವರಿಸಿದ್ದಾಳೆ.

ಮೂಲಗಳ ಪ್ರಕಾರ ಕೆಲವು ವಿದ್ಯಾರ್ಥಿಗಳ ಪೋಷಕರು ಈ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ಆದರೆ ಇದಕ್ಕೆ ಕ್ಯಾರೇ ಅನ್ನದ ಪೊಲೀಸರು ಎಫ್ಐಆರ್‌ನ್ನು ಸಹ ದಾಖಲಿಸಿಲ್ಲ.

Comments are closed.