ರಾಷ್ಟ್ರೀಯ

ಇಂಡಿಗೋ ವಿಮಾನದ ಕೆಟ್ಟು ಹೋದ ಇಂಜಿನ್‌: ತಪ್ಪಿದ ಭಾರೀ ದುರಂತ

Pinterest LinkedIn Tumblr


ಲಕ್ನೋ : ಇಲ್ಲಿನ ಚೌಧರಿ ಚರಣ್‌ ಸಿಂಗ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದು ಶುಕ್ರವಾರ ಬೆಳಗ್ಗೆ ಲಕ್ನೋದಿಂದ ಮುಂಬಯಿಗೆ ಹಾರಲಿದ್ದ ಇಂಡಿಗೋ ವಿಮಾನದ ಒಂದು ಇಂಜಿನ್‌ ಕೆಟ್ಟು ಹೋಗಿರುವುದನ್ನು ಸಕಾಲದಲ್ಲಿ ಕಂಡುಕೊಂಡ ಪೈಲಟ್‌, ವಿಮಾನವನ್ನು ಟೇಕಾಫ್ ಮಾಡದಿರಲು ನಿರ್ಧರಿಸುವುದರೊಂದಿಗೆ ಸಂಭಾವ್ಯ ಭಾರೀ ದುರಂತ ತಪ್ಪಿದಂತಾಗಿದೆ.

ಈ ಘಟನೆ ಇಂದು ಬೆಳಗ್ಗೆ 7.45ರ ಹೊತ್ತಿಗೆ ನಡೆಯಿತು. ವಿಶೇಷವೆಂದರೆ ಇಂಡಿಗೋ ವಿಮಾನದ ಇಂಜಿನ್‌ ಒಂದು ವಿಫ‌ಲವಾಗಿದೆ ಎಂಬುದನ್ನು ವಿಮಾನದೊಳಗೆ ಅದಾಗಲೇ ಆಸೀನರಾಗಿದ್ದ ಪ್ರಯಾಣಿಕಗೆ ಅಧಿಕಾರಿಗಳು ತಿಳಿಸಲಿಲ್ಲ; ರನ್‌ ವೇಯಲ್ಲೇ ಉಳಿದಿದ್ದ ವಿಮಾನದೊಳಗೆ ಪ್ರಯಾಣಿಕರು ಏನನ್ನೂ ಅರಿಯದವರಾಗಿ ಹಾಗೆಯೇ ಬಹಳ ಹೊತ್ತು ಕುಳಿತಿರಬೇಕಾದ ಸ್ಥಿತಿ ಉಂಟಾಯಿತು.

ಆಗ ಕೆಲವು ಪ್ರಯಾಣಿಕರು ವಿಮಾನದೊಳಗೆ ಬಿಸಿ ಏರುತ್ತಿರುವುದರಿಂದ ಇನ್ನಷ್ಟು ಹೆಚ್ಚು ಹೊತ್ತು ಕುಳಿತಿರಲು ಸಾಧ್ಯವಿಲ್ಲ ಎಂದು ಪ್ರತಿಭಟನೆ ನಡೆಸಿದರು. ಆಗಲೇ ಅಧಿಕಾರಿಗಳು ವಿಮಾನದ ಕೆಟ್ಟುಹೋಗಿರುವ ಇಂಜಿನನ್ನು ಇಂಡಿಗೋ ಇಂಜಿನಿಯರ್‌ಗಳ ತಂಡ ಸರಿಪಡಿಸುತ್ತಿದೆ ಎಂದುತಿಳಿಸಿದರು.

Comments are closed.