ಕರ್ನಾಟಕ

ನಾವು ರಾಜಮಾರ್ಗದಲ್ಲೇ ಬಹುಮತ ಸಾಬೀತುಪಡಿಸುತ್ತೇವೆ: ರಮ್ಯಾ ಟ್ವೀಟ್ ಗೆ ಸಿ.ಟಿ.ರವಿ

Pinterest LinkedIn Tumblr


ಬೆಂಗಳೂರು: ಯಾವ ಕಾಂಗ್ರೆಸ್ ಶಾಸಕರಿಗೆ ಜೀವ ಬೆದರಿಕೆ ಇದೆ ಅನ್ನೋದನ್ನು ಹೇಳಲಿ. ಡಿಜಿ ಮೂಲಕ ನಾನು ಕೂಡ ಅವರಿಗೆ ರಕ್ಷಣೆ ಕೊಡಿಸುವಂತೆ ಮನವಿ ಮಾಡುತ್ತೇನೆ ಎಂದು ಬಿಜೆಪಿ ಶಾಸಕ ಸಿ.ಟಿ. ರವಿ ಮಾಜಿ ಸಂಸದೆ ರಮ್ಯಾ ಟ್ವೀಟ್​ಗೆ ತಿರುಗೇಟು ನೀಡಿದ್ದಾರೆ.

ಯಾವ ಶಾಸಕರ ಪತ್ನಿ ಹಾಗೂ ಮಕ್ಕಳು ರಮ್ಯಾ ಬಳಿ ಅಲವತ್ತುಕೊಂಡರು ಎನ್ನುವುದನ್ನು ಹೇಳಲಿ. ಅವರ ಜತೆ ರಮ್ಯಾನಿಗೂ ಜೀವ ಬೆದರಿಕೆ ಇದ್ದರೆ ರಕ್ಷಣೆ ಕೊಡುವಂತೆ ನಾನು ಡಿಜಿಗೆ ಮನವಿ ಮಾಡಲಿದ್ದೇನೆ ಎಂದು ವ್ಯಂಗ್ಯವಾಡಿದ್ದಾರೆ.

ಸಿದ್ದರಾಮಯ್ಯ ರಾಜ್ಯಸಭೆ ಚುನಾವಣೆಯಲ್ಲಿ ಜೆಡಿಎಸ್​ನ ಏಳು ಶಾಸಕರಿಂದ ಮತ ಹಾಕಿಸಿದ್ದರು. ಈಗ ಬಿಜೆಪಿ ಬಗ್ಗೆ ಮಾತನಾಡುತ್ತಿದ್ದಾರೆ. ಸಿದ್ದರಾಮಯ್ಯಗೆ ಯಾವ ನೈತಿಕತೆ ಇದೆ. ಬಿಜೆಪಿ ಸರ್ಕಾರ ಬಂದರೆ ಸಿದ್ದರಾಮಯ್ಯ ಅಕ್ರಮದ ವಿರುದ್ಧ ತನಿಖೆ ನಡೆಯುವ ಭಯವಿದೆ. ಹಾಗಾಗಿ ಜೆಡಿಎಸ್​ಗೆ ಬೆಂಬಲ ನೀಡುತ್ತಿದ್ದಾರೆ ಎಂದರು.

ಬಿಜೆಪಿ ಪಾಳಯದಲ್ಲಿ ಶುರು ನಡುಕ
ಇಂದು ಬಹುಮತ ಸಾಬೀತಿಗೆ ಸುಪ್ರೀಂಕೋರ್ಟ್ ಆದೇಶದ ಕುರಿತು ಮಾತನಾಡಿ, ನಾವು ರಾಜಮಾರ್ಗದಲ್ಲೇ ನಡೆಯುವುದು. ಹಿಂಬಾಗಿಲ ರಾಜಕಾರಣವನ್ನು ನಾವು ಮಾಡುವುದಿಲ್ಲ. 1996ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದರು. ಬಹುಮತ ಸಾಬೀತು ಪಡಿಸದೇ ಇದ್ದಾಗ ಹೊರಬಂದರು. ಅದು ನಿಜವಾದ ರಾಜಮಾರ್ಗ, ಆ ಮಾರ್ಗದಲ್ಲೇ ನಾವು ನಡೆಯುವುದು. ಕಾಂಗ್ರೆಸ್​ ಪಕ್ಷದ ರೀತಿಯಲ್ಲಿ ಬಿಜೆಪಿ ನಡೆಯುವುದಿಲ್ಲ ಎಂದಿದ್ದಾರೆ.

Comments are closed.