ರಾಷ್ಟ್ರೀಯ

ದೌರ್ಜನ್ಯ, ಅತ್ಯಾಚಾರ, ವರದಕ್ಷಿಣೆ ಕಿರುಕುಳದಂತಹ ಕೃತ್ಯಗೈದ ಆರೋಪ ಹೊತ್ತಿರುವವವರ ಚಾಲನಾ ಪರವಾನಗಿ ರದ್ದು!

Pinterest LinkedIn Tumblr


ಇಂದೋರ್: ಮಹಿಳೆಯರ ವಿರುದ್ಧ ಅಪರಾಧ ಎಸಗಿದ ಆರೋಪ ಹೊತ್ತಿರುವ ಅಥವಾ ಶಿಕ್ಷೆಗೊಳಗಾದವರ ಚಾಲನಾ ಪರವಾನಗಿ ಪತ್ರ ರದ್ದು- ಮಹಿಳೆಯರ ಮೇಲಿನ ದೌರ್ಜನ್ಯವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬಹುದೆಂಬ ನಿರೀಕ್ಷೆಯೊಂದಿಗೆ ಇಂದೋರ್ ಜಿಲ್ಲಾಡಳಿತ ಕೈಗೊಂಡ ನಿರ್ಧಾರವಿದು.

ರಸ್ತೆ ಸುರಕ್ಷತೆ ಕುರಿತಂತೆ ಗುರುವಾರ ನಡೆದ ಸಭೆಯಲ್ಲಿ ಮಾತನ್ನಾಡುತ್ತಿದ್ದ ಇಂದೋರ್ ಜಿಲ್ಲಾಧಿಕಾರಿ ನಿಶಾಂತ್ ವಾರ್ವಡೆ, ದೌರ್ಜನ್ಯ, ಅತ್ಯಾಚಾರ ಮತ್ತು ವರದಕ್ಷಿಣೆ ಕಿರುಕುಳದಂತಹ ಕೃತ್ಯಗೈದ ಆರೋಪ ಹೊತ್ತಿರುವವವರ ಚಾಲನಾ ಪರವಾನಗಿ ಪತ್ರವನ್ನು ರದ್ದುಗೊಳಿಸುವುದಾಗಿ ಘೋಷಿಸಿದ್ದಾರೆ.

ಮೋಟಾರು ವಾಹನ ಕಾಯಿದೆ, 1988 ರ ನಿಬಂಧನೆಗಳ ಅಡಿಯಲ್ಲಿ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಒಂದು ವೇಳೆ ಕೋರ್ಟ್‌ನಲ್ಲಿ ಅವರು ನಿರಪರಾಧಿಗಳೆಂದು ಸಾಬೀತಾದರೆ ರದ್ದನ್ನು ಹಿಂಪಡೆಯಲಾಗುವುದು, ಎಂದು ಅವರು ತಿಳಿಸಿದ್ದಾರೆ.

Comments are closed.