ರಾಷ್ಟ್ರೀಯ

ವಾಹನ ಚಾಲನೆಯ ಸಮಯದಲ್ಲಿ ಮೊಬೈಲ್‌ ಬಳಕೆ ನಿಷೇಧ ಕಾನೂನು ಇಲ್ಲ: ಕೇರಳ ಹೈಕೋರ್ಟ್‌

Pinterest LinkedIn Tumblr


ಕೊಚ್ಚಿ: ವಾಹನ ಚಲಾಯಿಸುವ ವೇಳೆ ಮೊಬೈಲ್‌ ಬಳಸುವುದರಿಂದ ಸಾರ್ವಜನಿಕರಿಗೆ ಹಾನಿ ಉಂಟಾಗದೇ ಹೋದಲ್ಲಿ, ಆರೋಪಿಯನ್ನು ದಂಡಿಸುವ ಅವಕಾಶ ಪೊಲೀಸ್‌ ಕಾಯ್ದೆ 118(ಇ)ಗೆ ಇಲ್ಲ ಎಂದು ಎಂದು ಕೇರಳ ಹೈಕೋರ್ಟ್‌ ಹೇಳಿದೆ.

ಡ್ರೈವಿಂಗ್‌ ವೇಳೆ ಮೊಬೈಲ್‌ ಬಳಸಿದಲ್ಲಿ, ಪೊಲೀಸ್‌ ಕಾಯ್ದೆ 118(ಇ) ಸಾರ್ವಜನಿಕರಿಗೆ ಅಪಾಯ ಒಡ್ಡಿರುವ ಆರೋಪದಲ್ಲಿ ಜೈಲು ಶಿಕ್ಷೆ, ದಂಡ ಅಥವಾ ಇವರೆಡನ್ನೂ ವಿಧಿಸಲು ಅವಕಾಶಗಳಿದೆ. ಆದರೆ ಆರೋಪಿಯಿಂದ ಸಾರ್ವಜನಿಕರ ಸುರಕ್ಷತೆಗೆ ತೊಂದರೆಯಾಗಿದ್ದಲ್ಲಿ ಮಾತ್ರ ಇದು ಅನ್ವಯವಾಗುತ್ತದೆ ಎಂದು ಹೇಳಿದೆ.

ಏ.26ರಂದು ಅರ್ಜಿದಾರರ ವಿರುದ್ಧ ಕಾರು ಚಲಾವಣೆ ವೇಳೆ ಮೊಬೈಲ್‌ ಬಳಸಿರುವ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಡ್ರೈವಿಂಗ್‌ ವೇಳೆ ಮೊಬೈಲ್‌ ಬಳಸಿದರೆ, ಜೈಲು ಶಿಕ್ಷೆ ವಿಧಿಸಲು ಕಾನೂನಿನಲ್ಲಿ ಅವಕಾಶವಿಲ್ಲ. ಹೀಗಾಗಿ ಪ್ರಕರಣವನ್ನು ಕೈಬಿಡುವಂತೆ ಅರ್ಜಿದಾರ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಇಂತಹುದೇ ವಿಚಾರಕ್ಕೆ ಸಂಬಂಧಿಸಿದಂತೆ 2012ರಲ್ಲಿ ನ್ಯಾ. ಎಸ್‌.ಎಸ್‌.ಸತೀಶ್ಚಂದ್ರನ್‌ ಅವರಿದ್ದ ಪೀಠವು ವಿಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದ ಹಿನ್ನೆಲೆಯಲ್ಲಿ, ಕೇರಳ ಏಕ ಸದಸ್ಯ ಪೀಠವು ಈ ಅರ್ಜಿಯನ್ನು ವಿಭಾಗೀಯ ಪೀಠಕ್ಕೆ ವರ್ಗಾವಣೆ ಮಾಡಿತ್ತು.

ಡ್ರೈವಿಂಗ್‌ ವೇಳೆ ಮೊಬೈಲ್‌ನಲ್ಲಿ ಬಳಸಿ, ಅಫಘಾತಗಳಾದಲ್ಲಿ, ಅವನ್ನು ಸಾರ್ವಜನಿಕ ಜೀವಕ್ಕೆ ಅಪಾಯ ಆಗದೇ ಹೋದಲ್ಲಿ ಜೈಲು ಶಿಕ್ಷೆ ವಿಧಿಸಲು ಸಾಧ್ಯವಿಲ್ಲ. ಮೋಟಾರು ಕಾಯ್ದೆ 184ರ ಅಡಿಯಲ್ಲಿ ಅಪಾಯಕಾರಿ ವಾಹನ ಚಲಾವಣೆ ಎಂದು ಪರಿಗಣಿಸಿ ದಂಡಿಸಬಹುದು ಎಂದು ನ್ಯಾ. ಸತೀಶ್ಚಂದ್ರ ಅವರಿದ್ದ ಪೀಠ ಅಭಿಪ್ರಾಯಪಟ್ಟಿತ್ತು.

ಕಾನೂನು, ದಂಡ ಸಂಹಿತೆಗಳ ವ್ಯಾಖ್ಯಾನವನ್ನು ಕಟ್ಟು ನಿಟ್ಟು ಹಾಗೂ ಸರಿಯಾದ ರೀತಿಯಲ್ಲಿ ವಿಮರ್ಶೆ ಮಾಡಬೇಕು1963ರಲ್ಲಿ ಸುಪ್ರೀಂ ಕೋರ್ಟ್‌ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಆರೋಪಿ ನಡೆಸಿದ ಕೃತ್ಯದಿಂದ ಸಾರ್ವಜನಿಕರ ಬದುಕಿಗೆ ಯಾವುದೇ ಸಮಸ್ಯೆ ಉಂಟಾಗದೇ ಹೋದಲ್ಲಿ, ಪೊಲೀಸ್‌ ಕಾಯ್ದೆ 118(ಇ) ಪ್ರಕಾರ, ಆರೋಪಿಗೆ ಜೈಲು ಶಿಕ್ಷೆ ನೀಡಲು ಕಾನೂನಿನಲ್ಲಿ ಅವಕಾಶಗಳಿಲ್ಲ ಎಂದು ತೀರ್ಪು ನೀಡಿದೆ.

Comments are closed.