ಹೊಸದಿಲ್ಲಿ: ಪ್ರಚೋದನಾಕಾರಿ ಹೇಳಿಕೆ ಬಿತ್ತರ, ಅಶ್ಲೀಲ ಮತ್ತು ಹಿಂಸಾತ್ಮಕ ಚಿತ್ರಗಳ ಪೋಸ್ಟಿಂಗ್‌ಗಾಗಿ 58.5 ಕೋಟಿ ನಕಲಿ ಖಾತೆಗಳನ್ನು ಫೇಸ್‌ಬುಕ್ ಬಂದ್ ಮಾಡಿದೆ.
2018ರ ಮೊದಲ ಮೂರು ತಿಂಗಳಲ್ಲಿ ಈ ಘಟನೆ ನಡೆದಿದ್ದು, ಇನ್ನೂ ಶೇ. 3ರಿಂದ 4ರಷ್ಟು ನಕಲಿ ಖಾತೆಗಳು ಇವೆ ಎಂದು ಹೇಳಿದೆ. ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಆಧರಿಸಿ ಫೇಸ್‌ಬುಕ್ ನಕಲಿ ಖಾತೆಗಳನ್ನು ಹಾಗೂ ಅಕ್ರಮಗಳನ್ನು ಪತ್ತೆ ಹಚ್ಚುತ್ತಿದ್ದು, ಇದಕ್ಕಾಗಿ 3000 ಹೆಚ್ಚುವರಿ ಸಿಬ್ಬಂದಿಯನ್ನು ನೇಮಿಸಿಕೊಂಡಿದೆ.
Comments are closed.