ರಾಷ್ಟ್ರೀಯ

ಬಿಜೆಪಿ ಕಾರ್ಯಕರ್ತರನ್ನು ಖಾಲಿ ಮದ್ಯದ ಬಾಟಲಿಯಿಂದ ಹೊಡೆಯಿರಿ: ಕಾಂಗ್ರೆಸ್ ಶಾಸಕ ರಾಮ್ ದಯಾಳ್ ವಿವಾದಾತ್ಮಕ ಹೇಳಿಕೆ

Pinterest LinkedIn Tumblr


ಹೊಸದಿಲ್ಲಿ: ಮುಂದಿನ 6 ತಿಂಗಳಲ್ಲಿ ಛತ್ತೀಸ್‌ಗಢ್ ವಿಧಾನಸಭೆ ಚುನಾವಣೆ ನಡೆಯಲಿದ್ದು, ಬಿಜೆಪಿ ಕಾರ್ಯಕರ್ತರು ಹಾಗೂ ಸ್ವಯಂಸೇವಕರು ಮತಯಾಚಿಸಲು ಬಂದರೆ ಖಾಲಿ ಮದ್ಯದ ಬಾಟಲಿಯಿಂದ ಹೊಡೆಯಿರಿ ಎಂದು ಅಲ್ಲಿನ ಕಾಂಗ್ರೆಸ್ ಶಾಸಕ ರಾಮ್ ದಯಾಳ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಭಾನುವಾರ ಭೈಸ್ಮಾ ಗ್ರಾಮದಲ್ಲಿ ನಡೆದ ಕಾಂಗ್ರೆಸ್ ಸಮಾರಂಭದಲ್ಲಿ ಭಾಗವಹಿಸಿದ್ದ ದಯಾಳ್, ಈ ರೀತಿಯ ಹೇಳಿಕೆ ನೀಡುವ ಮೂಲಕ ವಿವಾದಕ್ಕೀಡಾಗಿದ್ದಾರೆ.

ರಾಜ್ಯದಲ್ಲಿ ಬಿಜೆಪಿ ಸರಕಾರ ಹೆಚ್ಚಿನ ದರದಲ್ಲಿ ಮದ್ಯ ಮಾರಾಟ ಮಾಡುತ್ತಿದ್ದು, ಇದರಿಂದ ಬಂದ ಹಣವನ್ನು ರಾಜ್ಯದ ಮತದಾರರಿಗೆ ಹಂಚುವ ಮೂಲಕ ಮತ ಸೆಳೆಯುವ ತಂತ್ರ ನಡೆಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಛತ್ತೀಸ್‌ಗಢ್ ರಾಜ್ಯದ ಕೊರ್ಬಾ ವಿಧಾನಸಭೆ ಕ್ಷೇತ್ರವನ್ನು ಪ್ರತಿನಿಧಿಸುವ ರಾಮ್ ದಯಾಳ್ ಮದ್ಯ ಮಾರಾಟದ ಮೂಲಕ ಬಿಜೆಪಿ ಸರಕಾರವೇಕೆ ಗುತ್ತಿಗೆದಾರರ ಕೆಲಸ ಮಾಡುತ್ತಿದೆ ಎಂದು ಕಾಂಗ್ರೆಸ್ ಶಾಸಕ ರಾಮ್ ದಯಾಳ್ ಪ್ರಶ್ನಿಸಿದ್ದಾರೆ.

Comments are closed.