ಗಲ್ಫ್

ದುಬಾಯಿಯಲ್ಲಿ 44ನೇ ಬಂಟ್ಸ್ ಸ್ನೇಹಮಿಲನ ಡಾ ಬಿ. ಆರ್. ಶೆಟ್ಟಿಯವರಿಂದ ಉದ್ಘಾಟನೆ; ಡಾ. ಸುನಿತಾ ಶೆಟ್ಟಿಯವರಿಗೆ “ಬಂಟ ವಿಭೂಷಣ ಪ್ರಶಸ್ತಿ” ಪ್ರದಾನ

Pinterest LinkedIn Tumblr

Photo: Ashok Belman

ಅರಬ್ ಸಂಯುಕ್ತ ಸಂಸ್ಥಾನದಲ್ಲಿರುವ ಬಂಟ್ಸ್ ಫ್ಯಾಮಿಲಿ 44ನೇ ಸ್ನೇಹಮಿಲನ ಮತ್ತು “ಬಂಟ ವಿಭೂಷಣ ಪ್ರಶಸ್ತಿ” ಪ್ರದಾನ 2018 ಮೇ 11 ರಂದು ದುಬಾಯಿಯಲ್ಲಿರುವ ಜೆ. ಡಬ್ಲ್ಯೂ. ಮ್ಯಾರಿಯಟ್ ಹೋಟೆಲ್ ಸಭಾಂಗಣದಲ್ಲಿ ಅದ್ಧೂರಿಯಾಗಿ ನಡೆಯಿತು.

ಸಮಾರಂಭದ ಮುಖ್ಯ ಅತಿಥಿಗಳನ್ನು ಮತ್ತು ಗಲ್ಫ್ ರಾಷ್ಟ್ರದ ವಿವಿಧ ಭಾಗಗಳಿಂದ ಆಗಮಿಸಿದ್ದ ಅಧ್ಯಕ್ಷರುಗಳನ್ನು ಗೌರವಪೂರ್ವಕವಾಗಿ ಕೇರಳದ ಚೆಂಡೆ, ಪೂರ್ಣಕುಂಭ ಕಳಸದೊಂದಿಗೆ ಸುಮಂಗಲೆಯರು ಸಭಾಂಗಣಕ್ಕೆ ಬರಮಾಡಿಕೊಂಡರು.

ಬಂಟ್ಸ್ ಫ್ಯಾಮಿಲಿ ಮಹಾ ಪೋಷಕರಾದ ಡಾ. ಬಿ. ಆರ್. ಶೆಟ್ಟಿಯವರು, ಡಾ. ಸುನಿತಾ ಶೆಟ್ಟಿಯವರು ಮತ್ತು ಗಲ್ಫ್ ರಾಷ್ಟ್ರದ ವಿವಿಧ ಭಾಗಗಳಿಂದ ಅಗಮಿಸಿದ ಬಂಟ್ಸ್ ಸಂಘದ ಅದ್ಯಕ್ಷರುಗಳು ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರುಗಳ ಸಮ್ಮುಖದಲ್ಲಿ ಜ್ಯೊತಿ ಬೆಳಗಿಸಿ ಉದ್ಘಾಟಿಸಿದರು.

ಶ್ರೀಮತಿ ಸಂಗೀತ ಶೆಟ್ಟಿಯರಿಂದ ಮತ್ತು ಶ್ರೀಮತಿ ವೈಶ್ಣವಿ ಶೆಟ್ಟಿಯವರಿಂದ ಪ್ರಾರ್ಥನೆ, ಕು. ಸ್ಪರ್ಶಾ ಶೆಟ್ಟಿ ಮತ್ತು ಸನ್ನಿಧಿ ಶೆಟ್ಟಿಯವರಿಂದ ಸ್ವಾಗತ ನೃತ್ಯ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರಾದ ಶ್ರೀ ಸಂತೋಷ್ ರೈ ಯವರು ಸರ್ವರನ್ನು ಸ್ವಾಗತಿಸಿದರು.

ಊರಿನಿಂದ ಆಗಮಿಸಿದ ನಮ್ಮ ಟಿ.ವಿ. ಯ ಖ್ಯಾತ ನಿರೂಪಕರಾದ ಶ್ರೀ ನವೀನ್ ಶೆಟ್ಟಿ ಎಡ್ಮೆಮಾರ್ ರವರು ಕಾರ್ಯಕ್ರಮ ನಿರೂಪಣೆ ತಮ್ಮದೇ ಆದ ಶೈಲಿಯಲ್ಲಿ ಪ್ರಾರಂಭಿಸಿದರು.

ಮಕ್ಕಳ ನೃತ್ಯ ವಿವಿಧ ತಂಡಗಳಾದ ಸೌಜನ್ಯ ರೈ, ವಿಜಯ ಜೋಗಿ, ನವೀನ್, ವೀಣಾ ಶೆಟ್ಟಿ ಮೋಹನಿಶಾ ಶೆಟ್ಟಿ, ಅನಿಶಾ, ಕೀರ್ತಿ, ರಿತೇಶ್, ಚೈತ್ರಾ ಇವರಿಂದ ನಡೆಯಿತು.

ಲಿಟ್ಲ್ ಪ್ರಿನ್ಸ್ ಪ್ರಥಮ ಹಂತದ ಸ್ಪರ್ಧೆ ಶ್ರೀ ಮನೋಜ್ ಶೆಟ್ಟಿಯವರ ನೇತೃತ್ವದಲ್ಲಿ ನಡೆಯಿತು.

2017-18 ನೇ ಸಾಲಿನ ಕಾರ್ಯಕಾರಿ ಸಮಿತಿಯ ಸದಸ್ಯರನ್ನು ಬಂಟ್ಸ್ ಫ್ಯಾಮಿಲಿಯ ಅಧ್ಯಕ್ಷರಾದ ಶ್ರೀ ಸರ್ವೋತ್ತಮ ಶೆಟ್ಟಿಯವರು ವೇದಿಕೆಗೆ ಬರಮಾಡಿಕೊಂಡು ಇವರೆಲ್ಲರ ಸೇವಾ ಅವಧಿಯಲ್ಲಿ ನಡೆಸಿದ ಶ್ರೀ ಸತ್ಯನಾರಾಯಣ ಸಾಮೂಹಿಕ ಪೂಜೆ, ಹಾಗು ಸ್ನೇಹಮಿಲನದ ಯಶಸ್ವಿ ಕಾರ್ಯಗತಗೊಳಿಸಿದ ದಂಪತಿಗಳನ್ನು ಅಭಿನಂದಿಸಲಾಯಿತು. 2018-19 ಸಾಲಿಗೆ ನೂತನ ಕಾರ್ಯಕಾರಿ ಸಮಿತಿಯನ್ನು ಬರಮಾಡಿಕೊಂಡು ಸ್ವಾಗತಿಸಿ ಜವಬ್ಧಾರಿಯನ್ನು ವಹಿಸಿಕೊಡಲಾಯಿತು.

ಕಾರ್ಯಕ್ರಮಕ್ಕೆ ಬೆಂಬಲ ನೀಡಿರುವ ಎಲ್ಲಾ ಪ್ರಾಯೋಜಕರನ್ನು ಡಾ. ಬಿ. ಆರ್. ಶೆಟ್ಟಿಯವರು ವೇದಿಕೆಯಲ್ಲಿ ಸನ್ಮಾನಿಸಿ ಸ್ಮರಣಿಕೆ ನೀಡಿ ಗೌರವಿಸಿದರು.

ಗಲ್ಫ್ ದೇಶದ ವಿವಿಧ ಭಾಗಗಳಿಂದ ಆಗಮಿಸಿದ ಅತಿಥಿಗಳಾದ ಬಹರೈನ್ ಬಂಟ್ಸ್ ಅಧ್ಯಕ್ಷರು ಶ್ರೀ ನಾಗೇಶ್ ಶೆಟ್ಟಿ, ಒಮಾನ್ ಬಂಟ್ಸ್ ಅಧ್ಯಕ್ಷ ಶ್ರೀ ಶಶಿಧರ್ ಶೆಟ್ಟಿ, ಕುವೈತ್ ಬಂಟ್ಸ್ ಅಧ್ಯಕ್ಷ ಶ್ರೀ ಶೇಖರ್ ಶೆಟ್ಟಿ, ಸೌದಿಯಾ ಬಂಟ್ಸ್ ಪ್ರತಿನಿಧಿ ಶ್ರೀ ಮಹೇಶ್ ಹೆಗ್ಡೆ ಇವರುಗಳನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಗೌರವ ಅತಿಥಿಯಾಗಿ ಆಗಮಿಸಿದ ಶ್ರೀ ಐಕಳ ಹರೀಶ್ ಶೆಟ್ಟಿ, ಅತಿಥಿಯಾಗಿ ಆಗಮಿಸಿದ ಶ್ರೀ ಕರ್ನೂರು ಮೋಹನ್ ರೈ, ಕನ್ನಡ ಚಿತ್ರ ನಾಯಕ ನಟ ಆಸ್ತಿಕ್ ಶೆಟ್ಟಿ ಯವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಬಂಟ್ಸ್ ಫ್ಯಾಮಿಲಿ ಮಹಾಪೋಷಕರಾದ ಡಾ. ಬಿ. ಆರ್. ಶೆಟ್ಟಿ ಹಾಗೂ ಡಾ. ಚಂದ್ರಕುಮಾರಿ ಆರ್. ಶೆಟ್ಟಿ ದಂಪತಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ಡಾ. ಸುನಿತಾ ಶೆಟ್ಟಿಯವರಿಗೆ ಪ್ರತಿಷ್ಠಿತ “ಬಂಟ ವಿಭೂಷಣ ಪ್ರಶಸ್ತಿ” ಪ್ರದಾನ

ಮಂಗಳೂರಿನ ಕಳಾವಾರಿನಲ್ಲಿ ಜನಿಸಿ ತಮ್ಮ ಕಾಲೇಜು ವಿದ್ಯಾಭಾಸವನ್ನು ಮುಗಿಸಿ ನಂತರ ಮುಂಬೈನಲ್ಲಿ ನೆಲೆಸಿ ಮುಂಬೈ ವಿಶ್ವ ವಿದ್ಯಾಲಯದಲ್ಲಿ ಪ್ರಾಧ್ಯಪಕಿಯಾಗಿ ನಿವೃತ್ತಿಯಾಗಿರುವ ಡಾ. ಸುನಿತಾ ಶೆಟ್ಟಿಯವರು ಕಳೆದ ಐವತ್ತು ವರ್ಷಗಳಿಂದ ಸಾಹಿತಿಯಾಗಿ, ಕವಯತ್ರಿಯಾಗಿ, ಸಮಾಜ ಸೇವಕಿಯಾಗಿ ಸಾಹಿತ್ಯದಲ್ಲಿ 23 ಕಿಂತಲೂ ಹೆಚ್ಚು ಕೃತಿಗಳನ್ನು ಪ್ರಕಟಿಸಿ, ಕರ್ನಾಟಕ ಮತ್ತು ಮಹರಾಷ್ಟ್ರ ಸರ್ಕಾರ ಹಾಗೂ ಹಲವಾರು ಸಂಘ ಸಂಸ್ಥೆಗಳಿಂದ ಪ್ರಶಸ್ತಿ ಸನ್ಮಾನ ಗೌರವಗಳನ್ನು ಪಡೆದಿರುವ ಜ್ಞಾನಭಂಡಾರ ಹಿರಿಯ ಸಾಧಕಿಯವರಿಗೆ ಅರಬ್ ಸಂಯುಕ್ತ ಸಂಸ್ಥಾನದಲ್ಲಿರುವ ಬಂಟ್ಸ್ ಫ್ಯಾಮಿಲಿ ಕೊಡಮಾಡುವ ಪ್ರತಿಷ್ಠಿತ “ಬಂಟ ವಿಭೂಷಣ” ಪ್ರಶಸ್ತಿಯನ್ನು ಡಾ. ಬಿ. ಆರ್. ಶೆಟ್ಟಿಯವರು ಮುಖ್ಯ ಅತಿಥಿಗಳು ಹಾಗೂ ಬಂಟ್ಸ್ ಫ್ಯಾಮಿಲಿ ಅಧ್ಯಕ್ಷರಾದ ಶ್ರೀ ಸರ್ವೋತ್ತಮ ಶೆಟ್ಟಿಯವರ ಸಮ್ಮುಖದಲ್ಲಿ ಪ್ರದಾನಿಸಿ ಗೌರವಿಸಿದರು. ಸನ್ಮಾನ ಪತ್ರವನ್ನು ಶ್ರೀ ಗಣೇಶ್ ರೈಯವರು ವಾಚಿಸಿದರು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವವರಿಗೆ ಗೌರವ ಸಲ್ಲಿಕೆ

ಬಂಟ್ಸ್ ಫ್ಯಾಮಿಲಿ ಪ್ರತಿವರ್ಷ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವವರುನ್ನು ಗುರುತಿಸಿ ಗೌರವ ನೀಡಲಾಗುತ್ತದೆ. ಡಾ. ಬಿ. ಆರ್. ಶೆಟ್ಟಿಯವರು ಪುರಸ್ಕೃತರಿಗೆ ಗೌರವ ಸ್ಮರಣಿಕೆ, ಪದಕ ನೀಡಿ ಗೌರವಿಸಿದರು. ಶ್ರೀ ಕಂದಾವರ ಸತೀಶ್ ಶೆಟ್ಟಿ (ಎನರ್ಜಿ ಅವಾರ್ಡ್), ಶ್ರೀ ಸುಧಾಕರ್ ಶೆಟ್ಟಿ (ಸಮಾಜ ಸೇವೆ)

ಶೇಖ್ ಹಮ್ದಾನ್ ಅವಾರ್ಡ್ ಮತ್ತು ಶಾರ್ಜಾ ಅವಾರ್ಡ್ ಫಾರ್ ಎಜುಕೇಶನಲ್ ಎಕ್ಸಲೆನ್ಸಿ – ಕು ಸ್ಪರ್ಶಾ ಪ್ರಕಾಶ್ ಶೆಟ್ಟಿ, ಖು. ಯಾಯಿನ್ ಕಿರಣ್ ರೈ, ಕು. ವಿಭಾಲಿ ಪ್ರಸಾದ್ ಶೆಟ್ಟಿ.

ಶೈಕ್ಷಣಿಕ – ಅಮಿ ಸುಶಾಂತ್ ಶೆಟ್ಟಿ, ಅನ್ವಿ ಸಂತೋಷ್ ಶೆಟ್ಟಿ, ಭೌತಿಕ್ ದನ್ಪಾಲ್ ಶೆಟ್ಟಿ, ಸಾನ್ವಿ ಕಿರಣ್ ರೈ, ಸಾನ್ವಿ ಪ್ರೀತ್ ಶೆಟ್ಟಿ.

ಕ್ರೀಡಾ ವಿಭಾಗ – ಅಂಚಿತ ಎ. ಎಸ್. ಶೆಟ್ಟಿ, ಸುವಾಲಿ ಪ್ರದೀಪ್ ಶೆಟ್ಟಿ, ಸಾಯಿಶಾ ಪ್ರದೀಪ್ ಶೆಟ್ಟಿ,

ರಸಪಾಕ ಪ್ರಶಸ್ತಿ ವಿಜೇತೆ : ಶ್ರೀಮತಿ ಹೇಮಾ ಮಹೇಶ್ ಶೆಟ್ಟಿ.

ಬಂಟ್ಸ್ ಫ್ಯಾಮಿಲಿ ಅಹ್ವಾನ ಪತ್ರ, ಸನ್ಮಾನ ಪತ್ರ ಹಾಗೂ ವೇದಿಕೆಯ ಡಿಜಿಟಲ್ ವೈವಿಧ್ಯಮಯ ವಿನ್ಯಾಸಗೋಳಿಸಿದ ಕ್ರಿಯಾತ್ಮಕ ಕಲಾ ನಿರ್ದೇಶಕರಾದ ಶ್ರೀ ಬಿ. ಕೆ. ಗಣೇಶ್ ರೈಯವರನ್ನು ಸ್ಮರಣಿಕೆ ನೀಡಿ ಗೌರವಿಸ್ಲಾಯಿತು. ಮಾಧ್ಯಮ ಪ್ರತಿನಿಧಿಗಳಿಗೆ ಗೌರವ ಸಲ್ಲಿಸಲಾಯಿತು.

ಪ್ರದರ್ಶನ ನೃತ್ಯ ಸಚಿನ್ ಮಾಡಾ, ಮತ್ತು ಹೇಮಾ ಶೆಟ್ಟಿ ತಂಡದವರಿಂದ ಪ್ರದರ್ಶನವಾಯಿತು.

ಮಕ್ಕಳ ನೃತ್ಯ ಸ್ಪರ್ಧೆ ವಿಜೇತರು – 16 ವರ್ಷದ ಒಳಗೆ – ಪ್ರಥಮ – ಅಬುಧಾಬಿ ತಂಡ, ದ್ವಿತೀಯ – ದುಬಾಯಿ ತಂಡ

ಲಿಟ್ಲ್ ಪ್ರಿನ್ಸ್ ಸ್ಪರ್ಧಾ ವಿಜೇತರು : ಪ್ರಥಮ : ಕು. ಯಾಯಿನ್ ಕಿರಣ್ ರೈ, ದ್ವಿತೀಯಾ – ಕು ಅದಿತ್ಯ ದಿನೇಶ್ ಶೆಟ್ಟಿ
ತೃತಿಯ – ತನೀಶ್ ಪ್ರಕಾಶ್ ಪಕ್ಕಳ

ಲಿಟ್ಲ್ ಪ್ರಿನ್ಸೆಸ್ : ಪ್ರಥಮ – ಮನಸ್ವಿ ಮಹೇಶ್ ಶೆಟ್ಟಿ ಅಬುಧಾಬಿ
ದ್ವಿತಿಯ – ಗ್ರೀಶ್ಮಾ ಅಮಿತ್ ಹೆಗ್ಡೆ
ತೃತಿಯ – ಸಾನ್ವಿ ದೇವಿಪ್ರಸಾದ್ ಶೆಟ್ಟಿ

ಬೆಸ್ಟ್ ಮೆಸೆಜ್ : ಮಾಸ್ಟರ್ ಭವಿಕ್ ದನ್ ಪಾಲ್ ಶೆಟ್ಟಿ, ಬೆಸ್ಟ್ ಇಂಟರ್ಡಕ್ಷನ್ : ಮಾ, ತನಯ್ ಪ್ರದೀಪ್ ಶೆಟ್ಟಿ ಬೆಸ್ಟ್ ಯೋಗಾ ಫೋಸ್ : ಮಾಸ್ಟರ್ ಅರುಷ್ ನಂದರಾಜ್ ಶೆಟ್ಟಿ

ಗಾಂಭಿರ್ಯ – ಬಾಲಕರ ವಿಭಾಗ : ಕು. ನಬಿತ್, ಬಾಲಕಿಯರ ವಿಭಾಗ – ಸಾಯಿಶಾ ಶರತ್ ಶೆಟ್ಟಿ

ಫೇಸ್ ಬುಕ್ ಹೆಚ್ಚಿನ ಲೈಕ್ ಪಡೆದ ಬಾಲಕರ ವಿಭಾಗ – ಯಾಯಿನ್ ಕಿರಣ್ ರೈ, ಬಾಲಾಕಿಯರ ವಿಭಾಗ : ಗ್ರೀಶಾ ಅನಿತ್ ಹೆಗ್ಡೆ

ಅತ್ಯುತ್ತಮ ಸಾಂಪ್ರಾದ್ಯಿಕ ಉಡುಗೆ ತೊಡುಗೆ – ಬಾಲಕರ ವಿಭಾಗ: ತನೀಶ್ ಪ್ರಕಾಶ್ ಪಕ್ಕಳ, ಬಾಲಕಿಯರ ವಿಭಾಗ : ಸಾನ್ವಿ ದೇವಿ ಪ್ರಸಾದ್ ಶೆಟ್ಟಿ

“ಬಿರ್ಸುದ ಬಂಟೆರ್” ರೂಪಕ ಸ್ಪರ್ಧೆ : ಪ್ರಥಮ ಅಬುಧಾಬಿ ತಂಡ ದ್ವಿತೀಯ : ಅಲ್ ಐನ್ ತಂಡ ಬಹುಮಾನಗಳನ್ನು ತಮ್ಮದಾಗಿಸಿ ಕೊಂಡರು.

ಎಲ್ಲ ವಿಜೇತರಿಗೆ ಬಹುಮಾನ ನೀಡಿ ಗೌರವಿಸಲಾಯಿತು. ಕೊನೆಯಲ್ಲಿ ಶ್ರೀ ಸರ್ವೋತ್ತಮ ಶೆಟ್ಟಿಯವರು ಸರ್ವರಿಗೂ ವಂದನೆಗಳನ್ನು ಸಲ್ಲಿಸಿದರಿ.

ಬಿ. ಕೆ. ಗಣೇಶ್ ರೈ – ಯು.ಎ.ಇ.

Comments are closed.