ರಾಷ್ಟ್ರೀಯ

ಶ್ರೀದೇವಿಯಂತಹ ಸಾವು: ಬಾತ್​ಟಬ್​ನಲ್ಲಿ ಪತ್ತೆಯಾಯ್ತು ಮತ್ತೊಬ್ಬ ಹೈಪ್ರೊಫೈಲ್​ ಮಹಿಳೆ ಶವ

Pinterest LinkedIn Tumblr


ಫರಿದಾಬಾದ್​: ಕಳೆದ ವರ್ಷ ಭಾರತ ಮೂಲದ ಅಮೆರಿಕಾ ಉದ್ಯಮಿಯನ್ನು ವಿವಾಹವಾಗಿದ್ದ ಮಹಿಳೆಯೊಬ್ಬರು ತಾವು ತಂಗಿದ್ದ ಐಷಾರಾಮಿ ಹೋಟೆಲ್​ನ ಸ್ನಾನದ ಟಬ್​ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ನ್ಯೂಜೆರ್ಸಿಯಲ್ಲಿ ಉದ್ಯಮಿಯಾಗಿರುವ ಅರುಣ್​ ಕುಮಾರ್​ ಎಂಬುವರ ಪತ್ನಿ ರಿತು ಮೃತ ಮಹಿಳೆ. ಹರಿಯಾಣದ ಫರಿದಾಬಾದ್​ನ ಐಷಾರಾಮಿ ಹೋಟೆಲ್​ನ ಕೊಠಡಿ ಸಂಖ್ಯೆ 631ರಲ್ಲಿ ತಂಗಿದ್ದ ಅವರು ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ಶನಿವಾರ ಮೃತದೇಹ ಪತ್ತೆಯಾಗಿದೆ.

ರಿತು ಏಪ್ರಿಲ್​ 22 ರಿಂದ ಇದೇ ಕೊಠಡಿಯಲ್ಲಿ ವಾಸ್ತವ್ಯ ಹೂಡಿದ್ದರು. ಏ.26 ರಂದು ಹೋಟೆಲ್​ನ ಸ್ವಾಗತಕಾರರಿಗೆ ಕರೆ ಮಾಡಿದ್ದ ಅವರು, ನನಗೆ ಯಾರೂ ತೊಂದರೆ ಕೊಡಬಾರದು. ವೇಟರ್​ಗಳನ್ನು ಕಳುಹಿಸಬೇಡಿ, ಕರೆಗಳನ್ನು ನಿರ್ಬಂಧಿಸಿ ಎಂದು ಹೇಳಿದ್ದರು ಎನ್ನಲಾಗಿದೆ. ರಿತು ಅವರ ಸೂಚನೆ ಮೇರೆಗೆ ಹೋಟೆಲ್​ ಸಿಬ್ಬಂದಿ ಕೂಡ ಯಾರನ್ನೂ ಕೊಠಡಿಯತ್ತ ಕಳುಹಿಸಿರಲಿಲ್ಲ. ಕರೆಗಳನ್ನೂ ನಿರ್ಬಂಧಿಸಿದ್ದರು.

ಈ ನಡುವೆ ಆಕೆಯ ಸೋದರಿ ಕರೆ ಮಾಡಿದಾಗ ರಿತು ಸ್ವೀಕರಿಸಿಲ್ಲ. ಇದರಿಂದ ಗಾಬರಿಗೊಳಗಾದ ರಿತು ಸೋದರಿ ಹೋಟೆಲ್​ ಸ್ವಾಗತಕಾರರಿಗೆ ಕರೆ ಮಾಡಿದಾಗ ಅವರಿಂದಲೂ ಸೂಕ್ತ ಉತ್ತರ ಬಂದಿಲ್ಲ. ಈ ಹಿನ್ನೆಲೆಯಲ್ಲಿ ಹೋಟೆಲ್​ ಬಳಿಗೆ ತೆರಳಿ ಕೊಠಡಿ ತೆಗೆದು ನೋಡಿದಾಗ ರಿತು ಬಾತ್​ ಟಬ್​ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ಈ ಕುರಿತು ಮಾತನಾಡಿರುವ ಮೃತ ರಿತು ಅವರ ಸಹೋದರಿ, ” ರಿತು ಕಳೆದ ವರ್ಷ ಮಾರ್ಚ್​ 3ರಂದು ಭಾರತ ಮೂಲದ ನ್ಯೂಜೆರ್ಸಿ ಉದ್ಯಮಿ ಅರುಣ್​ಕುಮಾರ್​ ಅವರನ್ನು ಎರಡನೇ ವಿವಾಹವಾಗಿದ್ದರು. ಅರುಣ್​ ಕುಮಾರ್​ಗೆ ರಿತು ಮೂರನೇ ಪತ್ನಿಯಾಗಿದ್ದಳು. ಮಾರ್ಚ್​ನಲ್ಲಿ ಮದುವೆಯಾಗಿದ್ದ ಆಕೆ ಜುಲೈ/ ಆಗಸ್ಟ್​ನಿಂದಲೂ ಭಾರತದಲ್ಲಿಯೇ ನೆಲೆಸಿದ್ದಾಳೆ. ಕೆಲವು ಬಾರಿ ಹೊಟೇಲ್​ನಲ್ಲಿ, ಕೆಲವೊಮ್ಮೆ ಸಹೋದರನ ಮನೆಯಲ್ಲಿ, ಕೆಲವೊಮ್ಮೆ ಸಹೋದರಿ ಮನೆಯಲ್ಲಿ ಆಕೆ ಇರುತ್ತಿದ್ದಳು,” ಎಂದು ಹೇಳಿದ್ದಾರೆ.

ರಿತು ಅವರ ಮೃತ ದೇಹ ಸಿಕ್ಕ ಕೊಠಡಿಯನ್ನು ಪೊಲೀಸರು ತಮ್ಮ ಸುಪರ್ದಿಗೆ ಪಡೆದುಕೊಂಡಿದ್ದಾರೆ. ವಿಧಿ ವಿಜ್ಞಾನ ತಜ್ಞರು ಸ್ಥಳ ಪರಿಶೀಲನೆ ನಡೆಸಿದ್ದಾರೆ.

Comments are closed.