ಕರ್ನಾಟಕ

ಹರದನಹಳ್ಳಿಯಲ್ಲಿ ಗೊಣ್ಣೆ ಸುರಿಸ್ಕೊಂಡಿದ್ದವ್ನು ಪ್ರಧಾನಿ ಆಗಲಿಲ್ವೆ!

Pinterest LinkedIn Tumblr


ಹಾಸನ: ‘ಹರದನಹಳ್ಳಿಯಲ್ಲಿ ಗೊಣ್ಣೆ ಸುರಿಸಿಕೊಂಡಿದ್ದ ವನು ಪ್ರಧಾನಿ ಆಗಲಿಲ್ವೇ’ ಎಂದು ಮಾಜಿ ಪ್ರಧಾನಿ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಅವರ ತಮಗೆ ತಾವೇ ಹಾಸ್ಯ ಮಾಡಿಕೊಂಡಿದ್ದಾರೆ.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಎಚ್‌ಡಿಡಿ ‘ಪ್ರಜ್ವಲ್‌ ಹಾಸನದ 7 ಕ್ಷೇತ್ರಗಳಲ್ಲಿ ಪ್ರಚಾರ ಮಾಡಲಿದ್ದಾನೆ. ಕಾಲ ಬಂದಾಗ ಎಲ್ಲವೂ ಆಗುತ್ತದೆ. ಯಾರಿಂದಲೂ ಹಣೆ ಬರಹ ಬದಲಿಸಲು ಸಾಧ್ಯವಿಲ್ಲ. ಹರದನಹಳ್ಳಿಯಲ್ಲಿ ಗೊಣ್ಣೆ ಸುರಿಸಿಕೊಂಡಿದ್ದ ವನು ಪ್ರಧಾನಿ ಆಗಲಿಲ್ವೇ’ ಎಂದರು.

‘ದೇವೇಗೌಡರ ಮಕ್ಕಳ ಕುರಿತು ಯಾಕೆ ದ್ವೇಷ. ನನ್ನ ಮೊಮ್ಮಗ ಪ್ರಜ್ವಲ್‌ ಕುರಿತಾಗಿ ಇಲ್ಲ ಸಲ್ಲದ ಆರೋಪ ಮಾಡುತ್ತಾರೆ .ಅವನ ಬಗ್ಗೆ ನಿರ್ಲಕ್ಷ್ಯ ಬೇಡ’ ಎಂದು ಕಾಂಗ್ರೆಸ್‌ ವಿರುದ್ಧ ಕಿಡಿ ಕಾರಿದರು.

‘ನಾವು ತಂದ ಲೋಕಾಯುಕ್ತ ವನ್ನು ಕಾಂಗ್ರೆಸ್‌ ನಾಶ ಮಾಡಿದೆ. ಜೈಲು ಪಾಲಾಗುವುದನ್ನು ತಪ್ಪಿಸಿಕೊಳ್ಳಲು ಎಸಿಬಿ ರಚಿಸಿದರು’ ಎಂದು ಕಿಡಿ ಕಾರಿದರು.

-ಉದಯವಾಣಿ

‘ಜೆಡಿಎಸ್‌ನಲ್ಲಿ ಸ್ಟಾರ್‌ ಪ್ರಚಾರಕರಾರೂ ಇಲ್ಲ’ ಎಂದ ಅವರು ‘ಮಾಯಾವತಿ, ತೆಲಂಗಾಣ ಸಿಎಂ ಚಂದ್ರಶೇಖರ್‌ ರಾವ್‌ ಅವರು ಮತ್ತೆ ಪ್ರಚಾರಕ್ಕೆ ಬರುತ್ತಾರೆ. ಓವೈಸಿ ಅವರು ಪ್ರಚಾರ ಮಾಡಲಿದ್ದಾರೆ’ ಎಂದು ತಿಳಿಸಿದರು.

-ಉದಯವಾಣಿ

Comments are closed.