ರಾಷ್ಟ್ರೀಯ

ಕಪ್ಪು ಹಣದ ಬಗ್ಗೆ ಐಟಿ ಇಲಾಖೆಗೆ ಮಾಹಿತಿ ನೀಡಿ… ರೂ.5 ಕೋಟಿ ವರಗೆ ಬಹುಮಾನ ಗೆಲ್ಲಿ !

Pinterest LinkedIn Tumblr

ನವದೆಹಲಿ: ಸರ್ಕಾರಕ್ಕೆ ಭಾರೀ ಪ್ರಮಾಣದಲ್ಲಿ ತೆರಿಗೆ ವಂಚಿಸುವ ಮತ್ತು ಅಕ್ರಮವಾಗಿ ಸಂಪತ್ತು ಹೊಂದಿರುವವರ ಬಗ್ಗೆ ಮಾಹಿತಿಗಳನ್ನು ನೀಡಿದವರಿಗೆ ಬಹುಮಾನಗಳನ್ನು ನೀಡಲಾಗುವುದು ಎಂದು ಕೇಂದ್ರ ನೇರ ತೆರಿಗೆ ಮಂಡಳಿ(ಸಿಬಿಡಿಟಿ) ತಿಳಿಸಿದೆ.

ಆದಾಯ ತೆರಿಗೆ ಮಾಹಿತಿದಾರರಿಗೆ ಬಹುಮಾನ ಯೋಜನೆ 2018ರಡಿ ಅಘೋಷಿತ ಆಸ್ತಿಗಳ ಬಗ್ಗೆ ಮಾಹಿತಿ ನೀಡಿದವರಿಗೆ 5 ಕೋಟಿ ರೂಪಾಯಿಗಳವರೆಗೆ ಬಹುಮಾನ ನೀಡಲಾಗುವುದು ಎಂದು ತಿಳಿಸಲಾಗಿದೆ.

ಬಹುಮಾನದ ಮೊತ್ತಕ್ಕೆ ಶೇಕಡಾ 10ರಷ್ಟು ತೆರಿಗೆ ವಿಧಿಸಲಾಗುವುದು. ಮಾಹಿತಿದಾರರು ವಿದೇಶಗಳಲ್ಲಿ ಅಘೋಷಿತ ಆಸ್ತಿ ಹೊಂದಿರುವವರು, ತೆರಿಗೆ ಪಾವತಿ ವಂಚಿಸಿದವರು ಮತ್ತು ಬೇನಾಮಿ ಆಸ್ತಿ ಹೊಂದಿರುವವರ ಬಗ್ಗೆ ಮಾಹಿತಿ ನೀಡಿದವರಿಗೆ ಬಹುಮಾನದ ಮೊತ್ತ ಇನ್ನೂ ಹೆಚ್ಚು ನೀಡಲಾಗುವುದು ಎಂದು ತೆರಿಗೆ ಮಂಡಳಿ ತಿಳಿಸಿದೆ.

ಮಾಹಿತಿ ನೀಡಿದವರ ಹೆಸರುಗಳನ್ನು ಆದಾಯ ತೆರಿಗೆ ಇಲಾಖೆ ಗೌಪ್ಯವಾಗಿಡಲಿದೆ. ಪತ್ತೆಹಚ್ಚಲಾಗದ ಆಸ್ತಿ, ಅಧಿಕ ತೆರಿಗೆ ಮೊತ್ತ ಪಾವತಿಸದಿರುವವರನ್ನು ಕೂಡ ಪತ್ತೆಹಚ್ಚಿದರೆ ಬಹುಮಾನವನ್ನು ತೆರಿಗೆ ಮಂಡಳಿ ನೀಡಲಿದೆ.

Comments are closed.