ರಾಷ್ಟ್ರೀಯ

ಕಾಶ್ಮೀರದಲ್ಲಿ ಪರೀಕ್ಷೆ ಬರೆಯಲು ಕತ್ತೆಗೆ ಪ್ರವೇಶ ಪತ್ರ ನೀಡಿದ ಜೆಕೆಎಸ್ಎಸ್ ಬಿ

Pinterest LinkedIn Tumblr

ಶ್ರೀನಗರ: ಎರಡು ವರ್ಷಗಳ ಹಿಂದೆ ವೃತ್ತಿ ಶಿಕ್ಷಣ ಪ್ರವೇಶ ಪರೀಕ್ಷೆ ಬರೆಯಲು ಹಸುವಿಗೆ ಪ್ರವೇಶ ಪತ್ರ ನೀಡಿದ್ದ ಜಮ್ಮು ಮತ್ತು ಕಾಶ್ಮೀರ, ಈಗ ನೈಬ್ ತಹಸಿಲ್ದಾರ್ ನೇಮಕಾತಿ ಪರೀಕ್ಷೆ ಬರೆಯಲು ಕತ್ತೆಗೆ ಪ್ರವೇಶ ಪತ್ರ ನೀಡಿದೆ.

ಜಮ್ಮು ಮತ್ತು ಕಾಶ್ಮೀರ ಸೇವೆಗಳ ಆಯ್ಕೆ ಮಂಡಳಿ(ಜೆಕೆಎಸ್ಎಸ್ ಬಿ)ಯು ಕಚುರ್ ಖಾರ್ ಎಂಬ ಅಭ್ಯರ್ಥಿಯ ಪ್ರವೇಶ ಪತ್ರದಲ್ಲಿ ಕತ್ತೆಯ ಭಾವಚಿತ್ರ ಮುದ್ರಿಸಿ ಕಳುಹಿಸಿದೆ.

ಕತ್ತೆಯ ಭಾವಚಿತ್ರವಿರುವ ಪ್ರವೇಶ ಪತ್ರ ಈಗ ಸಾಮಾಜಿಕ ತಾಣ ಫೇಸ್ ಬುಕ್ ಮತ್ತು ಟ್ವೀಟರ್ ನಲ್ಲಿ ವೈರಲ್ ಆಗಿದೆ. ಅಲ್ಲದೆ ಆಯ್ಕೆ ಮಂಡಳಿಯನ್ನು ಫೇಸ್ ಬುಕ್ ಬಳಕೆದಾರರು ತರಾಟೆಗೆ ತೆಗೆದುಕೊಂಡಿದ್ದಾರೆ.

2015ರಲ್ಲಿ ಡಿಪ್ಲೋಮೋ ಇನ್ ಪಾಲಿಟೆಕ್ನಿಕ್ಗೆ ಪರೀಕ್ಷೆ ಬರೆಯಲು ಹಸುವಿಗೆ ಪ್ರವೇಶ ಪತ್ರವನ್ನು ಬಿಒಪಿಇಇ(ಬೋರ್ಡ್ ಆಫ್ ಪ್ರೋಫೆಶನಲ್ ಎಂಟ್ರೆನ್ಸ್ ಎಕ್ಸಾಮಿನೇಷನ್) ನೀಡಿತ್ತು.

Comments are closed.