ರಾಷ್ಟ್ರೀಯ

ಕಥುವಾ ಬಾಲಕಿ ಅತ್ಯಾಚಾರ-ಹತ್ಯೆ ಪ್ರಕರಣ ; ಸಂಜೀ ರಾಮ್ ತನ್ನ ಮಗನನ್ನು ಕಾಪಾಡಿಕೊಳ್ಳಲು ಬಾಲಕಿಯ ಹತ್ಯೆ ಯೋಜಿಸಿದ: ತನಿಖಾಧಿಕಾರಿಗಳು

Pinterest LinkedIn Tumblr

ಜಮ್ಮು-ಕಾಶ್ಮೀರ : ಕಥುವಾ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣದ ಪ್ರಮುಖ ಆರೋಪಿ ಸಂಜಿರಾಮ್ , ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಭಾಗಿಯಾಗಿದ್ದ ತನ್ನ ಮಗನನ್ನು ಕಾಪಾಡಿಕೊಳ್ಳಲು ಬಾಲಕಿಯನ್ನು ಅಪಹರಿಸಿ ಕೊಲೆ ಮಾಡಲು ನಿರ್ಧರಿಸಿದ್ದಾಗಿ ವಿಚಾರಣೆ ವೇಳೆ ಹೇಳಿದ್ದಾನೆ.

ಜನವರಿ. 10 ರಂದು ಬಾಲಕಿಯನ್ನು ಅಪಹರಿಸಲಾಗಿದೆ. ಅದೇ ದಿನ ರಾಮ್ ಸೋದರಳಿಯ ಬಾಲಪರಾಧಿಯಿಂದ ಅತ್ಯಾಚಾರ ನಡೆಸಲಾಗಿದೆ. ಜ.14 ರಂದು ಹತ್ಯೆ ಮಾಡಲಾಗಿದ್ದು, ಜ.17 ರಂದು ಅರಣ್ಯದಲ್ಲಿ ಆಕೆಯ ಮೃತದೇಹ ಪತ್ತೆಯಾಗಿದೆ ಎಂದು ವಿಚಾರಣೆ ನಡೆಸಿದ ಅಧಿಕಾರಿಗಳು ತಿಳಿಸಿದ್ದಾರೆ.

ಬಾಲಪರಾಧಿ ಜೊತೆಗೆ ರಾಮ್ ಮತ್ತು ಆತನ ಮಗ ವಿಶಾಲ್ ಮತ್ತಿತರ ಐವರು ಈ ಪ್ರಕರಣದ ಆರೋಪಿಗಳಾಗಿದ್ದಾರೆ. ಈ ಪ್ರಕರಣ ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿದ್ದು, 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಮೇಲಿನ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ವಿಧಿಸಲು ಪೂರಕವಾದ ಸುಗ್ರೀವಾಜ್ಞೆಯನ್ನು ಕೇಂದ್ರಸರ್ಕಾರ ಜಾರಿಗೊಳಿಸಿದೆ.

ಮುಸ್ಲಿಂ ಬಕೇರ್ ವಾಲ್ ಸಮುದಾಯಕ್ಕೆ ಆ ಬಾಲಕಿ ಸೇರಿದ್ದು, ಸಣ್ಣ ದೇವಾಲಯವೊಂದರಲ್ಲಿ ಆಕೆಯನ್ನು ಇಡಲಾಗಿತ್ತು. ಅಲ್ಲಿ ರಾಮ್ ನನ್ನು ಬಂಧಿಸಲಾಗಿತ್ತು ಎಂದು ವಿಚಾರಣಾಧಿಕಾರಿಗಳು ಹೇಳಿದ್ದಾರೆ.

ಈ ಪ್ರಕರಣ ಕುರಿತ ವಿಚಾರಣಾಧಿಕಾರಿಗಳ ವಾದವನ್ನು ರಾಮ್ ಪರ ವಕೀಲ ಅಂಕುರ್ ಶರ್ಮಾ ತಿರಿಸ್ಕರಿಸಿದ್ದಾರೆ. ರಕ್ಷಣಾ ಕಾರ್ಯತಂತ್ರಕ್ಕಾಗಿ ಆತನ ವಿಚಾರಣೆ ನಡೆಸುವುದು ಸರಿಯಲ್ಲ ಎಂದಿದ್ದಾರೆ.

ಜ.13 ರಂದು ಆತನ ಸೋದರಳಿಯಿಂದ ಬಾಲಕಿ ಮೇಲೆ ಲೈಂಗಿದ ದೌರ್ಜನ್ಯ ನಡೆದಿರುವುದು ಸಂಜೀ ರಾಮ್ ಗೆ ಗೊತ್ತಾಗಿದೆ. ದೇವಸ್ಥಾನದಲ್ಲಿ ಆತ ಪ್ರಾರ್ಥನೆ ಮಾಡುತ್ತಿದ್ದಾಗ ಮನೆಗೆ ಪ್ರಸಾದ ತೆಗೆದುಕೊಂಡು ಹೋಗುವಂತೆ ಆತನ ಸೋದರಳಿಯನಿಗೆ ಹೇಳಿದ್ದಾನೆ. ಆದರೆ, ಆತ ಪ್ರಸಾದ ತೆಗೆದುಕೊಂಡು ಹೋಗಲು ವಿಳಂಬ ಮಾಡಿದ್ದಾನೆ. ಇದರಿಂದ ಕೋಪಗೊಂಡು ಆತನಿಗೆ ಹೊಡೆದಿದ್ದಾಗಿ ಸಾಂಜಿ ಅಧಿಕಾರಿಗಳಿಗೆ ಹೇಳಿದ್ದಾನೆ.

ಬಾಲಕಿ ಮೇಲೆ ಅತ್ಯಾಚಾರ ನಡೆಸಿದ್ದನ್ನು ಆತನ ಮಗ ಹಾಗೂ ಸೋದರಳಿಯ ಹೇಳಿದ ನಂತರ ಸಂಜೀರಾಮ್, ಬಾಲಕಿಯನ್ನು ಹತ್ಯೆ ಮಾಡಲು ಸಂಜೀರಾಮ್ ನಿರ್ಧರಿಸಿದ್ದ ಎಂಬುದಾಗಿ ಚಾರ್ಚ್ ಶೀಟ್ ನಲ್ಲಿ ಉಲ್ಲೇಖಿಸಲಾಗಿದೆ. ಜ. 13. 14ರ ಮಧ್ಯರಾತ್ರಿ ವಿಶಾಲ್, ಆತನ ಸ್ನೇಹಿತ ಪರ್ವೇಶ್ ಕುಮಾರ್, ದೇವಸ್ಥಾನದ ಹೊರ ಭಾಗದಲ್ಲಿ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ್ದರು.

ಪ್ರಕರಣ ಸಂಬಂಧ ಸಂಜೀರಾಮ್, ಆತನ ಸೋದರಳಿಯ , ಮಗ ವಿಶಾಲ್, ಖಾಜುರಿಯಾ ಮತ್ತು ಸುರೇಂದ್ರ ವರ್ಮಾ, ಮತ್ತು ಆತನ ಸ್ನೇಹಿತ ಮನ್ನು ಮೇಲೆ ಪ್ರತ್ಯೇಕ ಚಾರ್ಚ್ ಶೀಟ್ ದಾಖಲಿಸಲಾಗಿದೆ.

ಸಂಜೀರಾಮ್ ಮೇಲೆ ಕೊಲೆ, ಅಪಹರಣ ಹಾಗೂ ಕೊಲೆ ಸಾಕ್ಷ್ಯನಾಶ ಕೇಸ್, ಮನು ಮೇಲೆ ಅಪಹರಣ, ಮತ್ತಿತರ ಮೇಲೆ ಅತ್ಯಾಚಾರ ಪ್ರಕರಣದಡಿ ಕೇಸ್ ದಾಖಲಿಸಲಾಗಿದೆ. ಅಲ್ಲದೇ, ಸಂಜೀರಾಮ್ ನಿಂದ ಸಾಕ್ಷಿ ನಾಶಪಡಿಸಲು 4 ಲಕ್ಷ ಹಣ ಪಡೆದ ಆರೋಪದ ಮೇರೆಗೆ ಹೆಡ್ ಕಾನ್ಸ್ ಟೇಬಲ್ ತಿಲಕ್ ರಾಜ್ ಮತ್ತು ಸಬ್ ಇನ್ಸ್ ಪೆಕ್ಟರ್ ಅನಂದ್ ದತ್ತ ಅವರ ಮೇಲೂ ಪ್ರಕರಣ ದಾಖಲಿಸಲಾಗಿದೆ.

ಎಲ್ಲ ಆರೋಪಿಗಳ ಮೇಲೂ ಐಪಿಸಿ ಸೆಕ್ಷನ್ 120ರಡಿ ಪ್ರಕರಣ ದಾಖಲಿಸಲಾಗಿದೆ ಎಂದು ವಿಚಾರಣಾಧಿಕಾರಿಗಳು ತಿಳಿಸಿದ್ದಾರೆ.

Comments are closed.