ರಾಷ್ಟ್ರೀಯ

ವಿದ್ಯಾರ್ಥಿನಿಯ ರೇಪ್‌: ಶಿಕ್ಷಕನಿಗೆ 10 ವರ್ಷ ಕಠಿನ ಜೈಲು ಶಿಕ್ಷೆ

Pinterest LinkedIn Tumblr


ಕಾರೈಕಲ್‌, ಪುದುಚೇರಿ : ಎರಡು ವರ್ಷಗಳ ಹಿಂದೆ ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಅಪರಾಧಕ್ಕಾಗಿ 44ರ ಹರೆಯದ ಶಾಲಾ ಶಿಕ್ಷಕನಿಗೆ ಇಲ್ಲಿನ ನ್ಯಾಯಾಲಯ 10 ವರ್ಷಗಳ ಕಠಿನ ಜೈಲು ಶಿಕ್ಷೆಯನ್ನು ವಿಧಿಸಿದೆ.

ಜಿಲ್ಲೆಯ ಸೂರಕುಡಿ ಎಂಬಲ್ಲಿನ ಸರಕಾರಿ ಹೈಸ್ಕೂಲಿನಲ್ಲಿ ಶಿಕ್ಷಕನಾಗಿರುವ ಶಿವನೇಶನ್‌ಗೆ ಅಡಿಶಿನಲ್‌ ಜಿಲ್ಲಾ ಮತ್ತು ಸೆಶನ್ಸ್‌ ಕೋರ್ಟ್‌ ನ್ಯಾಯಾಧೀಶ ಎಸ್‌ ಶಿವಕಡಚ್ಚಂ ಅವರು 10 ವರ್ಷಗಳ ಸಶ್ರಮ ಜೈಲು ಶಿಕ್ಷೆಯನ್ನು ವಿಧಿಸಿ ತೀರ್ಪು ನೀಡಿದರು. ಜತೆಗೆ 5,000 ರೂ. ದಂಡವನ್ನೂ ವಿಧಿಸಿದರು.

2016ರ ಆಗಸ್ಟ್‌ 4ರಂದು ಆರನೇ ತರಗತಿಯ ವಿದ್ಯಾರ್ಥಿನಿಯು ತನ್ನ ನೋಟ್‌ ಬುಕ್‌ ಕರೆಕ್ಷನ್‌ಗೆಂದು ಸ್ಟಾಫ್ ರೂಮಿಗೆ ಬಂದಿದ್ದಾಗ ಆರೋಪಿ ಶಿಕ್ಷಕನು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದ.

-ಉದಯವಾಣಿ

Comments are closed.