ರಾಷ್ಟ್ರೀಯ

ನಾಗ್ಪುರದಲ್ಲಿ ಮೋಹನ್‌ ಭಾಗವತ್‌ ಭೇಟಿಯಾದ ಅಮಿತ್‌ ಶಾ

Pinterest LinkedIn Tumblr


ನಾಗ್ಪುರ: ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರಿಂದು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಮತ್ತು ಇತರ ಹಿರಿಯ ಪದಾಧಿಕಾರಿಗಳನ್ನು ಕಂಡು ಮಾತನಾಡಿಸಲು ಇಲ್ಲಿನ ಆರ್‌ಎಸ್‌ಎಸ್‌ ಪ್ರಧಾನ ಕಾರ್ಯಾಲಯಕ್ಕೆ ಭೇಟಿ ನೀಡಿದರು.

ನಗರದ ಮಹಲ್‌ ಪ್ರದೇಶದಲ್ಲಿರುವ ಆರ್‌ಎಸ್‌ಎಸ್‌ ಪ್ರಧಾನ ಕಾರ್ಯಾಲಯಕ್ಕೆ ಇಂದು ಮಧ್ಯಾಹ್ನ 12.20ರ ಹೊತ್ತಿಗೆ ಆಗಮಿಸಿದ ಶಾ, ಸಂಜೆ 4.40ರ ಹೊತ್ತಿಗೆ ನಿರ್ಗಮಿಸಿದರು.

ಶಾ ಅವರು ಭಾಗವತ್‌ ಮತ್ತು ಆರ್‌ಎಸ್‌ಎಸ್‌ ಪ್ರಧಾನ ಕಾರ್ಯದರ್ಶಿ ಭಯ್ನಾಜಿ ಜೋಷಿ ಅವರನ್ನು ಭೇಟಿಯಾದರು.

ಇದಕ್ಕೆ ಮೊದಲು ಬಿಜೆಪಿ ನಾಯಕಿ ಉಮಾ ಭಾರತಿ ಅವರು ಕೂಡ ಇಂದು ಬೆಳಗ್ಗೆ ಕಾರ್ಯಾಲಯಕ್ಕೆ ಭೇಟಿ ನೀಡಿ ಮಧ್ಯಾಹ್ನ 1 ಗಂಟೆಗೆ ನಿರ್ಗಮಿಸಿದರು.

ಅಮಿತ್‌ ಶಾ ಅವರು ಕಳೆದ ಮಾರ್ಚ್‌ 4ರಂದು ಕೂಡ ಆರ್‌ಎಸ್‌ಎಸ್‌ ಪ್ರಧಾನ ಕಾರ್ಯಾಲಯಕ್ಕೆ ಭೇಟಿ ನೀಡಿದ್ದರು.

-ಉದಯವಾಣಿ

Comments are closed.